IAF Procurement:2,236 ಕೋಟಿ ರೂ. ರಕ್ಷಣಾ ಸಾಮಗ್ರಿ ನಿರ್ಮಾಣ ಪ್ರಸ್ತಾವನೆಗೆ ಒಪ್ಪಿಗೆ

By Suvarna NewsFirst Published Nov 24, 2021, 10:54 PM IST
Highlights

ಭಾರತೀಯ ವಾಯು ಪಡೆ ಬಲವರ್ಧನೆಗೆ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ಜಿಸ್ಯಾಟ್‌-7ಸಿ ಸೇರಿದಂತೆ 2,236 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿ  ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ.

ನವದೆಹಲಿ (ನ.24):  ಭಾರತೀಯ ವಾಯು ಸೇನೆಗೆ (IAF)  ಉತ್ತೇಜನ ನೀಡೋ ಉದ್ದೇಶದಿಂದ ರಕ್ಷಣಾ ಸಚಿವಾಲಯ (Defence Ministry) ಮಂಗಳವಾರ ಐಎಎಫ್‌  (IAF) ಆಧುನೀಕರಣ (Modernization) ಹಾಗೂ ಕಾರ್ಯನಿರ್ವಹಣಾ ವ್ಯವಸ್ಥೆ ಬಲವರ್ಧನೆಗೆ ಮೇಕ್‌ ಇನ್‌ ಇಂಡಿಯಾ (Make In India) ಯೋಜನೆಯಡಿಯಲ್ಲಿ 2,236 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳ  ನಿರ್ಮಾಣ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಐಎಎಫ್ ಬಲವರ್ಧನೆ ಪ್ರಸ್ತಾವನೆಯಲ್ಲಿ ಜಿಸ್ಯಾಟ್‌-7ಸಿ (GSAT-7C) ಉಪಗ್ರಹ (Satellite) ಹಾಗೂ ಸಾಫ್ಟವೇರ್‌ ಆಧಾರಿತ ರೇಡಿಯೋಗಳ (SDRS) ಸಂಪರ್ಕಕ್ಕೆ ಗ್ರೌಂಡ್‌ ಹಬ್ಸ್‌(Ground hubs) ನಿರ್ಮಾಣಗಳು ಸೇರಿವೆ. ಈ ಯೋಜನೆಯಲ್ಲಿ ಉಪಗ್ರಹದ ವಿನ್ಯಾಸ, ಅಭಿವೃದ್ಧಿ ಹಾಗೂ ಉಡಾವಣೆ ಭಾರತದಲ್ಲೇ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಸೇನೆಯ ಸಂವಹನ ವ್ಯವಸ್ತೆ ಬಲವರ್ಧನೆ
ಜಿಸ್ಯಾಟ್‌-7ಸಿ ಉಪಗ್ರಹ ಹಾಗೂ ಸಾಫ್ಟವೇರ್‌ ಆಧರಿತ ರೇಡಿಯೋ (SDRS)ಗಳಿಗಾಗಿ ಅಳವಡಿಸೋ  ಗ್ರೌಂಡ್ ಹಬ್ಸ್  ಸೇನಾ ಪಡೆಗಳ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ವೀಕ್ಷಣಾ ಗಡಿ (LoS) ಮೀರಿ ರಕ್ಷಣಾ ಪಡೆಗಳು ಎಲ್ಲ ಸಂದರ್ಭಗಳಲ್ಲೂ ಪರಸ್ಪರ ಸುರಕ್ಷಿತವಾಗಿ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಗುಜರಾತ್‌ ಮೂಲದ ಗುಟ್ಕಾ ಸಂಸ್ಥೆ ಮೇಲೆ ದಾಳಿ: 100 ಕೋಟಿ ಅಕ್ರಮ ಸಂಪತ್ತು ಪತ್ತೆ

ಸೇನೆ ಆಧುನೀಕರಣಕ್ಕೆ ಅಸ್ತು
7,965 ಕೋಟಿ ರೂ. ಮೊತ್ತದ ಸೇನೆ ನವೀಕರಣ ಯೋಜನೆಗಳಿಗೆ ಈ ತಿಂಗಳ ಪ್ರಾರಂಭದಲ್ಲಿ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು. ಇದ್ರಲ್ಲಿ 1,500 ಕೋಟಿ ರೂ. ಮೌಲ್ಯದ ಎಚ್‌ಎಎಲ್‌ (HAL)) ಸಿದ್ಧಪಡಿಸಿರೋ 12 ಲೈಟ್‌ ಯುಟಿಲಿಟಿ ಹೆಲಿಕ್ಯಾಪ್ಟರ್‌ಗಳು ಸೇರಿವೆ. ದೇಶೀಯ ಸಂಸ್ಥೆಗಳಿಂದ ಸೇನೆಗೆ ಸಲಕರಣೆಗಳನ್ನು ಸಂಗ್ರಹಿಸೋ ಪ್ರಕ್ರಿಯೆಗಳಿಗೆ ಕೇಂದ್ರ ನೀಡಿರೋ ಅನುಮೋದನೆಯಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ನ Lynx  U2 Fire Control System ಕೂಡ ಸೇರಿದೆ. ಇದು ನೌಕಪಡೆಯ ಯುದ್ಧ ನೌಕೆಗಳು ಶತ್ರು ನೌಕೆಗಳನ್ನು ಪತ್ತೆ ಹಚ್ಚುವ ಹಾಗೂ ಕಾರ್ಯಪ್ರವೃತ್ತವಾಗೋ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ..

ಸಶಸ್ತ್ರ ಪಡೆಗಳಿಗೆ ಹಣಕಾಸು ಅಧಿಕಾರ
ಸಶಸ್ತ್ರ ಪಡೆಗಳಿಗೆ ಹಣಕಾಸು ಅಧಿಕಾರವನ್ನು ನೀಡುವ ಆದೇಶವನ್ನು ರಕ್ಷಣಾ ಮಂತ್ರಿ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದು, ಇದು ಸೇನೆಗೆ ಮತ್ತಷ್ಟು ಬಲ ತುಂಬಿದೆ. ಈ ಆದೇಶದ ಮೂಲಕ ಸೇನಾಪಡೆಗಳಿಗೆ ಖರೀದಿ ಹಾಗೂ ಹಣಕಾಸು ವಿಚಾರಗಳಿಗೆ ಸಂಬಂಧಿಸಿ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ.   ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಶಸ್ತ್ರಾಸ್ತ್ರ ಖರೀದಿಸಲು ಫೀಲ್ಡ್ ಕಮಾಂಡರ್ಗಳಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಲಾಗಿದ್ದು, ಇದು ಸಂಪನ್ಮೂಲಗಳ ಉತ್ತಮ ರೀತಿಯ ಬಳಕೆಗೆ ನೆರವು ನೀಡಲಿದೆ. 

ಕಾಂಗ್ರೆಸ್ ಬಂಡಾಯ ಶಾಸಕಿ ಅದಿತಿ ಸಿಂಗ್ ಬಿಜೆಪಿಗೆ ಸೇರ್ಪಡೆ!

ಸಾಂಪ್ರದಾಯಿಕ ಸಬ್ಮರೀನ್ ನಿರ್ಮಾಣಕ್ಕೆ ಅನುಮೋದನೆ
ಜಲಗಡಿಯಲ್ಲಿ ಚೀನಾದ ಉಪಟಳ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ರಕ್ಷಣಾ ಖರೀದಿ ಮಂಡಳಿ ದೇಶೀಯವಾಗಿ 6 ಸಾಂಪ್ರದಾಯಿಕ ಸಬ್ಮರೀನ್ಗಳನ್ನು ನಿರ್ಮಿಸುವ ಮಹತ್ವದ ಯೋಜನೆಗೆ ಅನುಮೋದನೆ ನೀಡಿತ್ತು. ಪಿ-75 ಎಂದು ಹೆಸರಿಸಲಾದ ಈ ಯೋಜನೆಯಡಿ 12 ವರ್ಷಗಳ ಅವಧಿಯಲ್ಲಿ 6 ಸಬ್ಮರೀನ್ಗಳು ತಯಾರಾಗಲಿವೆ. ಎಲ್ ಆ್ಯಂಡ್ ಟಿ ಮತ್ತು ಸರ್ಕಾರಿ ಸ್ವಾಮ್ಯದ ಮಡಗಾಂವ್ ಡಾಕ್ಸ್ ಲಿ. ಈ ಸಬ್ಮರೀನ್ಗಳನ್ನು ನಿರ್ಮಿಸಲಿವೆ. ಶತ್ರುರಾಷ್ಟ್ರಗಳ ನೌಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್‌ಮರೀನ್‌ಗಳನ್ನು ನಿರ್ಮಿಸೋ ಯೋಜನೆಯನ್ನು ರಕ್ಷಣಾ ಸಚಿವಾಲಯ ರೂಪಿಸಿದೆ. ಜಲ ಗಡಿಯಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಪರಮಾಣು ದಾಳಿ ಸಾಮರ್ಥ್ಯದ 6 ಸೇರಿದಂತೆ ಒಟ್ಟು 24 ಸಬ್ಮರೀನ್ ಖರೀದಿಸುವ ಯೋಜನೆ ಹೊಂದಿದೆ. 
ಭಾರತದ ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸೋ ಮೂಲಕ ಸೇನಾಪಡೆಗಳಿಗೆ ಹೆಚ್ಚಿನ ಬಲ ತುಂಬೋ ಇಂಥ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದ್ದು, ಹಂತ ಹಂತವಾಗಿ ಅನುಷ್ಠಾನಗೊಳಿಸೋ ಉದ್ದೇಶ ಹೊಂದಿದೆ. 

click me!