ಜುಲೈ 19 ರಿಂದ ಆರಂಭಗೊಳ್ಳಲಿದೆ ಸಂಸತ್ ಮುಂಗಾರು ಅಧಿವೇಶನ!

By Suvarna NewsFirst Published Jul 2, 2021, 8:23 PM IST
Highlights
  • 17ನೇ ಲೋಕಸಭೆಯ 6ನೇ ಅಧಿವೇಶನ ದಿನಾಂಕ ಪ್ರಕಟ
  • ಸಂಸತ್ ಮುಂಗಾರು ಅಧಿವೇಶನ; ಜುಲೈ 19ರಿಂದ ಆರಂಭ
  • ಒಂದು ತಿಂಗಳ ಕಾಲ ನಡೆಯಲಿದೆ ಅಧಿವೇಶನ
     

ನವದೆಹಲಿ(ಜು.02): ಕೊರೋನಾ 2ನೇ ಅಲೆ ತಗ್ಗಿದ ಪರಿಣಾಮ ಇದೀಗ ಆಡಳಿತ ಯಂತ್ರದ ಕಾರ್ಯ ಚುರುಕುಗೊಂಡಿದೆ. 17ನೇ ಲೋಕಸಭೆಯ ಆರನೇ ಅಧಿವೇಶನ ದಿನಾಂಕ ಪ್ರಕಟಗೊಂಡಿದೆ. ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಒಂದು ತಿಂಗಳ ಕಾಲ ನಡೆಯಲಿರುವ ಅಧಿವೇಶನ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ.

2024ರಲ್ಲಿ ಮೋದಿ ಎದುರಿಸಲು ತೃತೀಯ ರಂಗ, ಏನಿದು ಬೈ2 ಲೆಕ್ಕಾಚಾರ.?

ಮುಂಗಾರು ಅಧಿವೇಶನದ ಜೊತೆ ಕೊರೋನಾ ಪ್ರೊಟೋಕಾಲ್ ಕೂಡ ಜಾರಿ ಮಾಡಲಾಗಿದೆ. ಸಂಸಸ್ತಿನ ಆವರಣದಲ್ಲಿ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಲಾಗಿದೆ. ಸಂಸತ್ ಸದಸ್ಯರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ಸೂಚಿಸಲಾಗಿದೆ.

ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಂಸತ್ ಸದಸ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗ ತಡೆಯುಲು ಸಂಸತ್ ಸದಸ್ಯರ ಪ್ರಯತ್ನಗಳನ್ನು ಮುಂದಿಡುವಂತೆ ಮನವಿ ಮಾಡಿದ್ದಾರೆ. 

ಕಾಂಗ್ರೆಸ್ ಹೊರಗಿಟ್ಟು 8 ಪಕ್ಷಗಳ ಸಭೆ; 2024ರಲ್ಲಿ ಮೋದಿ ಎದುರಿಸಲು ಶರದ್ ಪವಾರ್‌ಗೆ ನಾಯಕತ್ವ?

ಮಾನ್ಸೂನ್ ಅಧಿವೇಶನದ ಮುಂದೆ, ನಡೆಯುತ್ತಿರುವ ಕರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಯುದ್ಧವನ್ನು ತಡೆಯುವ ವಿರೋಧ ಪಕ್ಷಗಳ ಪ್ರಯತ್ನಗಳನ್ನು ಮುಂದಿಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಂತ್ರಿ ಮಂಡಳಿಯ ಎಲ್ಲ ಸದಸ್ಯರನ್ನು ಕೇಳಿಕೊಂಡಿದ್ದಾರೆ. 

click me!