Covid Booster Dose: ನನ್ನ ಸಲಹೆ ಎಂದ ರಾಹುಲ್ ಗಾಂಧಿ

Suvarna News   | Asianet News
Published : Dec 26, 2021, 01:32 PM ISTUpdated : Dec 26, 2021, 01:42 PM IST
Covid Booster Dose: ನನ್ನ ಸಲಹೆ ಎಂದ ರಾಹುಲ್ ಗಾಂಧಿ

ಸಾರಾಂಶ

ಬೂಸ್ಟರ್‌ ಡೋಸ್ ನೀಡುವ ವಿಚಾರದಲ್ಲಿ ಸರ್ಕಾರ ನನ್ನ ಸಲಹೆ ಅಂಗೀಕರಿಸಿದೆ  ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೋಸ್ಟ್‌ 60 ವರ್ಷಕ್ಕಿಂತ ಮೇಲ್ಪಟ್ಟ  ನಾಗರಿಕರಿಗೆ ಬೂಸ್ಟರ್‌ ಡೋಸ್‌ ಲಭ್ಯ ಎಂದಿದ್ದ ಪ್ರಧಾನಿ

ನವದೆಹಲಿ(ಡಿ.26): ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್‌ಗೆ ಅನುಮತಿ ನೀಡುವ ಕುರಿತಾಗಿ ಕೇಂದ್ರ ಸರ್ಕಾರವೂ ನಾನು ನೀಡಿದ ಸಲಹೆಯನ್ನು ಅಂಗೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆಗಳು ಮತ್ತು ಬೂಸ್ಟರ್ ಡೋಸ್‌ ನೀಡುವ ಮೂಲ ರಕ್ಷಣೆಯನ್ನು ಒದಗಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು. ಮುಂದಿನ ವರ್ಷ ಜನವರಿ 10 ರಿಂದ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕಾ ಡೋಸ್ (precaution dose)ಅನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ ಒಂದು ದಿನದ ನಂತರ ರಾಹುಲ್‌ ಗಾಂಧಿ ಈ ಹೇಳಿಕ ನೀಡಿದ್ದಾರೆ. 

ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ  ಮುನ್ನೆಚ್ಚರಿಕಾ ಡೋಸ್ ದೇಶದಲ್ಲಿ ಲಭ್ಯವಿದ್ದು,  60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರ ವೈದ್ಯರ ಸಲಹೆಯ ಮೇರೆಗೆ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು ಎಂದು ಮೋದಿ ಹೇಳಿದರು.ಕೇಂದ್ರ ಸರ್ಕಾರವು ಬೂಸ್ಟರ್ ಡೋಸ್‌ಗಾಗಿ ನನ್ನ ಸಲಹೆಯನ್ನು ಸ್ವೀಕರಿಸಿದೆ ಇದು ಸರಿಯಾದ ಹೆಜ್ಜೆ. ಲಸಿಕೆಗಳು ಮತ್ತು ಬೂಸ್ಟರ್ ಡೋಸ್‌ಗಳ ರಕ್ಷಣೆಯನ್ನು ದೇಶದ ಎಲ್ಲಾ ಜನರಿಗೆ ಒದಗಿಸಬೇಕಾಗಿದೆ ಎಂದು 'BoosterJab' ಮತ್ತು 'VaccinateIndia' ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಹಿಂದಿಯಲ್ಲಿ ರಾಹುಲ್‌ ಟ್ವೀಟ್ ಮಾಡಿದ್ದಾರೆ. 

 

ಇದೇ ವೇಳೆ ರಾಹುಲ್‌ ಡಿಸೆಂಬರ್ 22 ರಂದು ಪೋಸ್ಟ್ ಮಾಡಿದ ತಮ್ಮ ಟ್ವೀಟ್ ಅನ್ನು ಈ ಟ್ವಿಟ್‌ ಜೊತೆ ಟ್ಯಾಗ್ ಮಾಡಿದ್ದಾರೆ. ಈ ಟ್ವಿಟ್‌ನಲ್ಲಿ, ದೇಶದ ಬಹುಪಾಲು ಜನಸಂಖ್ಯೆಯು ಇನ್ನೂ COVID-19 ವಿರುದ್ಧ ಲಸಿಕೆ ಹಾಕಿಸಿಕೊಂಡಿಲ್ಲ ಮತ್ತು ಸರ್ಕಾರ ಬೂಸ್ಟರ್ ಶಾಟ್‌ಗಳನ್ನು ಯಾವಾಗ ಹೊರತರುತ್ತದೆ ಎಂದು ಸರ್ಕಾರವನ್ನು ಕೇಳಿದರು.

Hindutva: ಹಿಂದೂ, ಹಿಂದುತ್ವವಾದಿ ವಿಚಾರದ ಬಗ್ಗೆ ಮತ್ತೆ ತುಟಿ ಬಿಚ್ಚಿದ ರಾಹುಲ್: 

ಇತ್ತೀಚೆಗೆ ಪಂಜಾಬ್‌ನಲ್ಲಿ, ಎರಡು ವಿಭಿನ್ನ ಗುರುದ್ವಾರಗಳಲ್ಲಿ ಹತ್ಯಾಕಾಂಡದ ಪ್ರಕರಣದಲ್ಲಿ ಗುಂಪೊಂದು ಇಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಮೋದಿ ಸರ್ಕಾರವನ್ನು ಲೇವಡಿ ಮಾಡಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ತಮ್ಮ ಟ್ವೀಟ್‌ನಲ್ಲಿ 2014 ರ ಮೊದಲು, 'ಲಿಂಚಿಂಗ್' ಎಂಬ ಪದ ಕೇಳಲು ಸಿಗುತ್ತಿರಲಿಲ್ಲ ಎಂದಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಕ್ಲಾಸ್ ತೆಗೆದುಕೊಂಡಿದ್ದರು. 

2014ರ ಮೊದಲು 'Lynching' ಪದ ಕೇಳಲು ಸಿಗುತ್ತಿರಲಿಲ್ಲ ಎಂದ ರಾಗಾ, ಸಿಖ್ ದಂಗೆ ನೆನಪಿಸಿದ ನೆಟ್ಟಿಗರು!

#2014 ರ ಮೊದಲು ಒಂದು ಕೋಟಿ ಭಾರತೀಯರು ಕಾಲ್ತುಳಿತಕ್ಕೊಳಗಾಗಿದ್ದರು ಈ ಬಗ್ಗೆ ನಿಮ್ಮ ಉತ್ತರವೇನು?. ಆಗೆಲ್ಲಾ ಲಿಂಚಿಂಗ್‌ ಪದ ಕೇಳಲು ಸಿಗುತ್ತಿರಲಿಲ್ಲ ಯಾಕೆಂದರೆ ಸೋಶಿಯಲ್ ಮೀಡಿಯಾ ಬಳಕೆ ಇರಲಿಲ್ಲ. ಇನ್ನು ಮಾಧ್ಯಮಗಳು ಇಂತಹ ವಿಚಾರಗಳನ್ನು ಒಂದೋ ಮುಚ್ಚಿ ಹಾಕುತ್ತಿದ್ದವು, ಇಲ್ಲವೇ ತಿರುಚಿ ತೋರಿಸುತ್ತಿದ್ದವು  ಬಹುಶಃ ನೀವು ಅವರ ಹೆಸರು ಕೇಳಿರದೇ ಇರಬಹುದು, ಆದರೆ  "Master of Mob Lynching" ಜಗದೀಶ್ ಟೈಟ್ಲರ್ ನಿಮ್ಮ ತಂದೆಯ ಅಪ್ಪಣೆಯಿಂದ ಮಾಡಿದ ಕೃತ್ಯ ಇಂದಿಗೂ ಇತಿಹಾಸದಲ್ಲಿ ಕಪ್ಪು ಚುಕ್ಕೆಯಂತಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದರು
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ