ಕಳೆದ 5 ವರ್ಷದಲ್ಲಿ ಮೋದಿ ವಿದೇಶಿ ಪ್ರವಾಸಕ್ಕಾದ ಖರ್ಚೆಷ್ಟು? ರಾಜ್ಯಸಭೆಗೆ ಸರ್ಕಾರದ ಉತ್ತರ!

By Suvarna NewsFirst Published Dec 9, 2022, 11:35 AM IST
Highlights

ಪ್ರಧಾನಿ ನರೇಂದ್ರ ಮೋದಿ ಹೆಚ್ಚು ವಿದೇಶ ಪ್ರವಾಸ ಮಾಡುತ್ತಾರೆ ಅನ್ನೋ ಟೀಕೆ ಹಲವು ಬಾರಿ ಕೇಳಿಬಂದಿದೆ. ಪ್ರತಿ ಪ್ರವಾಸಕ್ಕೆ ಮೋದಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಅನ್ನೋ ಆರೋಪವೂ ಇದೆ. ಇದೀಗ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಕಳೆದ 5 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕಾಗಿ ಖರ್ಚು ಮಾಡಿದ ಹಣವೆಷ್ಟು ಅನ್ನೋ ಲೆಕ್ಕ ಬಹಿರಂಗ ಪಡಿಸಿದೆ. 

ನವದೆಹಲಿ(ಡಿ.09): ಪ್ರಧಾನಿ ಪಟ್ಟಕ್ಕೇರಿದ ಬಳಿಕ ನರೇಂದ್ರ ಮೋದಿ ವಿದೇಶಗಳ ಜೊತೆ ಭಾರತದ ಸಂಬಂಧವನ್ನು ಮತ್ತಷ್ಟು ವೃದ್ಧಿಸಿದ್ದಾರೆ. ಇದೀಗ ಭಾರತಕ್ಕೆ ವಿದೇಶದಲ್ಲಿ ಸಿಗುತ್ತಿರುವ ಗೌರವ ಹೆಚ್ಚಾಗಿದೆ. ಪ್ರತಿ ಶೃಂಗಸಭೆ, ವಿಪತ್ತು ಸಭೆ, ಆರ್ಥಿಕ ಪುನಶ್ಚೇತನ ಸಭೆ ಸೇರಿದಂತೆ ಯಾವುದೇ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಆಹ್ವಾನ ನೀಡಲಾಗುತ್ತಿದೆ. ಮೋದಿ ಭಾಷಣಕ್ಕೆ ವಿಶ್ವವೇ ಕಾಯುತ್ತಿರುತ್ತದೆ. ಆದರೆ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಭಾರತದಲ್ಲಿನ ವಿಪಕ್ಷಗಳು ಹಲವು ಬಾರಿ ಟೀಕೆ ವ್ಯಕ್ತಪಡಿಸಿದೆ. ಪ್ರಧಾನಿ ತೆರಿಗಾರರ ದುಡ್ಡಲ್ಲಿ ಫಾರಿನ್ ಟೂರ್ ಮಾಡುತ್ತಿದ್ದಾರೆ. ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ ಅನ್ನೋ ಆರೋಪಗಳನ್ನು ಮಾಡಿದೆ. ಇದೀಗ ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮರಳೀಧರನ್ ಮೋದಿ ಖರ್ಚು ವೆಚ್ಚದ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ ಪ್ರಧಾನಿ ಮೋದಿ ಪ್ರತಿ ವಿದೇಶ ಪ್ರವಾಸಕ್ಕೂ ಖರ್ಚಾದ ಮೊತ್ತವೆಷ್ಟು ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಇಂಡೋನೇಷಿಯಾಲ್ಲಿ ಜಿ20 ಶೃಂಗಸಭೆ ನಡೆದಿತ್ತು. ಬಾಲಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದೇ ಶೃಂಗಸಭೆಯಲ್ಲಿ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಪ್ರಧಾನಿ ನರೇದ್ರ ಮೋದಿಯ ಈ ಪ್ರವಾಸಕ್ಕೆ ಕೇಂದ್ರ ಸರ್ಕಾರ 32,09,760 ರೂಪಾಯಿ ಖರ್ಚು ಮಾಡಿದೆ ಎಂದು ಮರಳೀಧರನ್ ಹೇಳಿದ್ದಾರೆ.

ಕರ್ನಾಟಕ, 2024ರ ಚುನಾವಣೆಗೆ ಪಕ್ಷ ಅಣಿಗೊಳಿಸಿ: ಬಿಜೆಪಿ ನಾಯಕರಿಗೆ ಪ್ರಧಾನಿ ಗುರಿ

ಸೆಪ್ಟೆಂಬರ್ 26 ರಿಂದ 28ರವರೆಗೆ ಪ್ರಧಾನಿ ಮೋದಿ ಜಪಾನ್ ಪ್ರವಾಸ ಮಾಡಿದ್ದರು. ಈ ಪ್ರವಾಸಕ್ಕಾಗಿ ಕೇಂದ್ರ ಸರ್ಕಾರ 23,86,536 ರೂಪಾಯಿ ವೆಚ್್ಚ ಮಾಡಿದೆ. ಇನ್ನು ಈ ವರ್ಷದ ಆರಂಭದಲ್ಲಿ ಮೋದಿ ಯೂರೋಪ್ ಪ್ರವಾಸಕ್ಕೆ ಕೇಂದ್ರ ಸರ್ಕಾರ 2,15,61,304 ಖರ್ಚು ಮಾಡಿದೆ. 2019ರಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಸೆಪ್ಟೆಂಬರ್ 21 ರಿಂದ 28 ರವರೆಗಿನ ಅಮೆರಿಕ ಪ್ರವಾಸಕ್ಕೆ 23,27,09,000 ರೂಪಾಯಿ ಖರ್ಚು ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಭಾರತದ ಹಿತ ದೃಷ್ಟಿಯಿಂದ ಕೂಡಿದೆ. ಇಷ್ಟೇ ಅಲ್ಲ ಭಾರತದ ವಿದೇಶಾಂಗ ನೀತಿ ಹಾಗೂ ಭಾರತದ ಜನರಿಗಾಗಿ ಈ ಪ್ರವಾಸಗಳು ಅತೀ ಅವಶ್ಯಕ ಹಾಗೂ ಅನಿವಾರ್ಯವಾಗಿದೆ ಎಂದು ಸಚಿವ ಮರಳೀಧರನ್ ಹೇಳಿದ್ದಾರೆ. ಮೋದಿ ಪ್ರತಿ ವಿದೇಶ ಪ್ರವಾಸದಿಂದ ಭಾರತಕ್ಕೆ ಅತೀ ಹೆಚ್ಚಿನ ಲಾಭಗಳಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ. ಯಾವುದೇ ದೇಶವನ್ನು ಅವಲಂಬಿತವಾಗದೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಹಾಗೂ ಈ ನಿರ್ಧಾರವನ್ನು ಇತರ ಯಾವುದೇ ದೇಶಗಳು ಪ್ರಶ್ನಿಸುವ ಗೋಜಿಗೂ ಹೋಗದಂತ ವಾತಾವರಣವನ್ನು ಭಾರತ ನಿರ್ಮಿಸಿದೆ ಎಂದು ಮುರಳೀಧರನ್ ಹೇಳಿದ್ದಾರೆ.

ಜಿ20 ಯಶಸ್ಸಿಗೆ ಸಹಕರಿಸಿ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಕೋರಿಕೆ

ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸವನ್ನ ಪ್ರತಿ ಭಾರಿ ಪ್ರಶ್ನಿಸಿದ್ದಾರೆ. ಭಾರತದಲ್ಲಿ ಜನರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗದ ಬಿಜೆಪಿ ಸರ್ಕಾರ, ಮೋದಿಯನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸುತ್ತಿದೆ. ತೆರಿಗೆದಾರರ ಹಣವನ್ನು ಮೋದಿ ಖರ್ಚು ಮಾಡುತ್ತಿದ್ದಾರೆ. ಮೋದಿ ವಿದೇಶಿ ಪ್ರವಾಸದಿಂದ ಭಾರತಕ್ಕೆ ಲಾಭವಿಲ್ಲ ಅನ್ನೋ ಆರೋಪವನ್ನು ಪದೇ ಪದೇ ಮಾಡಿದೆ.

click me!