
ನವದೆಹಲಿ(ಮೇ.22): ದೇಶದ ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿರುವ ನವೀನ ಮಾದರಿಗಳನ್ನು ಅನುಸರಿಸಿ ಕೊರೋನಾ ಸೋಂಕು ಹರಡುವಿಕೆಯನ್ನು ನಿಗ್ರಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಬೆನ್ನಲ್ಲೇ, ದೇಶದ 12 ವಿನೂತನ ಮಾದರಿಗಳನ್ನು ಕೇಂದ್ರ ಸರ್ಕಾರ ಪಟ್ಟಿಮಾಡಿದೆ. ಆ ಮಾದರಿಗಳನ್ನು ರಾಜ್ಯಗಳಿಗೆ ಪತ್ರ ಬರೆದು ರವಾನಿಸುವ ಮೂಲಕ, ಅದನ್ನು ಅನುಷ್ಠಾನಗೊಳಿಸಲು ಉತ್ತೇಜನ ನೀಡಿದೆ.
12 ಯಶಸ್ವಿ ಮಾದರಿಗಳು
1. ತಮಿಳುನಾಡು: ಆ್ಯಂಬುಲೆನ್ಸ್‌ಗಳ ಮೇಲಿನ ಒತ್ತಡ ನಿವಾರಣೆಗೆ ಟ್ಯಾಕ್ಸಿಗಳನ್ನು ಆ್ಯಂಬುಲೆನ್ಸ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಗಂಭೀರವಲ್ಲದ ಕೊರೋನಾ ರೋಗಿಗಳ ಸಾಗಣೆಗೆ ಇವುಗಳ ಬಳಕೆ.
2. ರಾಜಸ್ಥಾನ: ಬಿಕನೇರ್ ಜಿಲ್ಲೆಯಲ್ಲಿ ಕೋವಿಡೇತರ ಚಿಕಿತ್ಸೆಗೆ ಪಂಚಾಯಿತಿ ಪಟ್ಟದಲ್ಲಿ ಮೊಬೈಲ್ ಒಪಿಡಿ (ಹೊರರೋಗಿಗಳ ವಿಭಾಗ) ಆರಂಭ. ಇದರಿಂದ ಕೊರೋನೇತರ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ಸಿಗುತ್ತಿದೆ.
3. ರಾಜಸ್ಥಾನ: ಬಿಕನೇರ್‌ನಲ್ಲಿ ಆಕ್ಸಿಜನ್ ವ್ಯರ್ಥ ತಡೆಯಲು ‘ಆಕ್ಸಿಜನ್ ಮಿತ್ರ’ ಎಂಬ ವ್ಯವಸ್ಥೆ ಮಾಡಲಾಗಿದೆ.
4. ಉತ್ತರಪ್ರದೇಶ: ರಾಯ್‌ಬರೇಲಿಯ ಗ್ರಾಮೀಣ ಭಾಗದಲ್ಲಿ ಮನೆಮನೆಗೆ ತೆರಳಿ ರಾರಯಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆ. ಇದರಿಂದಾಗಿ ಪಾಸಿಟಿವಿಟಿ ದರ ಒಂದೇ ತಿಂಗಳಲ್ಲಿ ಶೇ.38ರಿಂದ ಶೇ.2.8ಕ್ಕೆ ಇಳಿಕೆ.
5. ಕೇರಳ: ವಿವೇಚನೆಯಿಂದ ಆಕ್ಸಿಜನ್ ಬಳಕೆ ಮಾಡಲು ಆಸ್ಪತ್ರೆಗಳಲ್ಲಿ ‘ಆಕ್ಸಿಜನ್ ನರ್ಸ್’ ಸೇವೆ ಆರಂಭ. ಇವರು ಆಕ್ಸಿಜನ್ ವ್ಯರ್ಥವಾಗುವುದನ್ನು ತಡೆಯುತ್ತಾರೆ.
6. ಹರಾರಯಣ: ಗುರುಗ್ರಾಮದಲ್ಲಿ ಕರ್ತವ್ಯ ನಿರ್ವಹಣೆ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದರ ಜತೆಗೆ ಡ್ರೈವ್ ಇನ್ ಲಸಿಕಾ ಕೇಂದ್ರ ತೆರೆಯಲಾಗಿದೆ.
7. ಉತ್ತರಪ್ರದೇಶ: ಕೊರೋನಾಗೆ ಸಂಬಂಧಿಸಿದಂತೆ ಜನಸಾಮಾನ್ಯರ ಎಲ್ಲ ಸಂದೇಹ ನಿವಾರಿಸಲು ವಾರಾಣಸಿಯಲ್ಲಿ ಕಾಶಿ ಕೋವಿಡ್ ಪ್ರತಿಕ್ರಿಯೆ ಕೇಂದ್ರ ಆರಂಭ.
8. ಉತ್ತರಪ್ರದೇಶ: ಗೌತಮಬುದ್ಧನಗರದಲ್ಲಿ ನಿವಾಸಿಗಳ ಸಂಘಗಳ ಸಹಕಾರದಿಂದ ಐಸೋಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರ್ ಆರಂಭ.
9. ಮಧ್ಯಪ್ರದೇಶ: ಕೊರೋನಾ ಸೋಂಕಿತರ ಪ್ರತ್ಯೇಕಿಸುವಿಕೆ, ಕೊರೋನಾ ಸೋಂಕು ನಿಗ್ರಹಕ್ಕಾಗಿ ಚುನಾಯಿತಿ ಪ್ರತಿನಿಧಿಗಳು, ಪರಾಜಿತ ಅಭ್ಯರ್ಥಿಗಳನ್ನು ಎಲ್ಲ ಹಂತದಲ್ಲೂ ಬಳಸಿಕೊಳ್ಳಲಾಗುತ್ತಿದೆ.
10. ಹರ್ಯಾಣ: ಗುರುಗ್ರಾಮದ ಎಲ್ಲ 102 ಆಸ್ಪತ್ರೆಗಳಲ್ಲಿನ ಬೆಡ್ ಲಭ್ಯತೆ, ಆಕ್ಸಿಜನ್ ಬಳಕೆ, ಆ್ಯಂಬುಲೆನ್ಸ್ ಲಭ್ಯತೆ ಕುರಿತಂತೆ ಕ್ಷಣಕ್ಷಣದ ನಿಗಾ ಇಡಲು ವೆಬ್‌ಸೈಟ್ ರೂಪಿಸಲಾಗಿದೆ.
11. ಚಂಡೀಗಢ: ಕೋವಿಡ್ ನಿರ್ವಹಣೆಗೆ ಆಯುಷ್ ಔಷಧ ಹಾಗೂ ಆಯುಷ್ ಘಟಕಗಳನ್ನು ಬಳಸಿಕೊಳ್ಳಲಾಗುತ್ತಿದೆ.
12. ಛತ್ತೀಸ್‌ಗಢ: ಜಂಜ್‌ಗೀರ್ ಚಂಪಾ ಜಿಲ್ಲೆಯಲ್ಲಿ ಹಾತ್ ಬಜಾರುಗಳಲ್ಲಿ ಆಯುಷ್ ಕಢಾ ನೀಡಲಾಗುತ್ತಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ