ಭಾರತ್ ಬ್ಯಾಂಡ್ ಅಡಿ ಮತ್ತೆ 34 ರು.ಗೆ ಕೇಜಿ ಅಕ್ಕಿ, 30ಕ್ಕೆ ಗೋಧಿ ಹಿಟ್ಟು ಮಾರಾಟ

By Kannadaprabha News  |  First Published Nov 6, 2024, 7:41 AM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 'ಭಾರತ್‌ಬ್ಯಾಂಡ್' ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆ ಚಾಲನೆ ನೀಡಿದರು. 


ನವದೆಹಲಿ: ಆಹಾರ ವಸ್ತುಗಳ ಬೆಲೆ ಮತ್ತೆ ಗಗನಮುಖಿಯಾದ ಬೆನ್ನಲ್ಲೇ, 'ಭಾರತ್‌ಬ್ಯಾಂಡ್' ಅಡಿಯಲ್ಲಿ ಗ್ರಾಹಕರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಹಾಗೂ ಗೋಧಿ ಹಿಟ್ಟಿನ ಮಾರಾಟದ 2ನೇ ಹಂತಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಚಾಲನೆ ನೀಡಿದರು.

ಈ ಯೋಜನೆಯಡಿ ಗೋಧಿ ಹಿಟ್ಟು ಪ್ರತಿಕೇಜಿಗೆ 30 ರು., ಅಕ್ಕಿ 34 ರು. ನಿಗದಿಪಡಿಸಲಾಗಿದೆ. ಎನ್ ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಹಾಗೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ 5 ಕೇಜಿ ಗೋಧಿ ಮತ್ತು 10 ಕೇಜಿ ಅಕ್ಕಿ ಚೀಲಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಅಲ್ಲದೆ, ಕೆಲವು ಮಾಲ್‌ಗಳಲ್ಲಿ ಇವು ಲಭ್ಯ ಇರಲಿವೆ. ಜತೆಗೆ ಮಹಾನಗರಗಳಲ್ಲಿ ಚಿಕ್ಕ ಗೂಡ್ಸ್ ಆಟೋಗಳ ಮೂಲಕ ಅಲ್ಲಲ್ಲಿ ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

Tap to resize

Latest Videos

ಮೊದಲ ಹಂತದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಗೋಧಿ ಹಿಟ್ಟಿನ ದರ 2.5 ರು., ಅಕ್ಕಿ ದರವನ್ನು 5 ರು. ಏರಿಸಲಾಗಿದೆ. ಮೊದಲ ಹಂತದಲ್ಲಿ 15.20 ಲಕ್ಷಟನ್ ಗೋಧಿ ಹಿಟ್ಟು ಮತ್ತು 14.58 ಲಕ್ಷಟನ್ ಅಕ್ಕಿಯನ್ನು ವಿತರಿಸಲಾಗಿತ್ತು.

click me!