ಸರ್ಕಾರ ಎಲ್ಲಾ ಖಾಸಗಿ ಆಸ್ತಿ ವಶಕ್ಕೆ ಪಡೆವಂತಿಲ್ಲ: ಸುಪ್ರೀಂಕೋರ್ಟ್‌

Published : Nov 06, 2024, 05:35 AM IST
ಸರ್ಕಾರ ಎಲ್ಲಾ ಖಾಸಗಿ ಆಸ್ತಿ ವಶಕ್ಕೆ ಪಡೆವಂತಿಲ್ಲ: ಸುಪ್ರೀಂಕೋರ್ಟ್‌

ಸಾರಾಂಶ

ಸಮುದಾಯದ ಒಳಿತಿನ ಹೆಸರಲ್ಲಿ, ಸರ್ಕಾರಗಳು ಯಾವುದೇ ಖಾಸಗಿ ಆಸ್ತಿಯನ್ನು ಸಂವಿಧಾನದ ನಿಯಮಗಳ ಹೆಸರಿನಲ್ಲಿ ಏಕಪಕ್ಷೀಯವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ.

ನವದೆಹಲಿ (ನ.06): ‘ಸಮುದಾಯದ ಒಳಿತಿನ ಹೆಸರಲ್ಲಿ, ಸರ್ಕಾರಗಳು ಯಾವುದೇ ಖಾಸಗಿ ಆಸ್ತಿಯನ್ನು ಸಂವಿಧಾನದ ನಿಯಮಗಳ ಹೆಸರಿನಲ್ಲಿ ಏಕಪಕ್ಷೀಯವಾಗಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೀಗೆ ವಶಪಡಿಸಿಕೊಳ್ಳಲು ಉದ್ದೇಶಿಸಿರುವ ಆಸ್ತಿಯು ಕೆಲವೊಂದು ಮಾನದಂಡಗಳನ್ನು ಪೂರೈಸಿದರಷ್ಟೇ ಅದು ಸಮುದಾಯದ ಭೌತಿಕ ಸಂಪನ್ಮೂಲ ಎಂದು ಪರಿಗಣಿಸಲ್ಪಡುತ್ತದೆ. ಅಂಥ ಸಂದರ್ಭದಲ್ಲಿ ಮಾತ್ರ ಸರ್ಕಾರಗಳು ಖಾಸಗಿ ಆಸ್ತಿ ವಶಪಡಿಸಿಕೊಳ್ಳಬಹುದು’ ಎಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ 7:2 ಬಹುಮತದಿಂದ ಐತಿಹಾಸಿಕ ತೀರ್ಪು ನೀಡಿದೆ.

1977 ಮತ್ತು 1980ರಲ್ಲಿ ಸುಪ್ರೀಂಕೋರ್ಟ್‌ನ ಎರಡು ಪ್ರತ್ಯೇಕ ನ್ಯಾಯಪೀಠಗಳು ಈ ವಿಷಯದಲ್ಲಿ ನೀಡಿದ್ದ ತೀರ್ಪುಗಳು ವೈರುಧ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಎದ್ದಿದ್ದ ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ 9 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಸುದೀರ್ಘ ವಿಚಾರಣೆ ನಡೆಸಿ ಮಂಗಳವಾರ ಈ ತೀರ್ಪು ಪ್ರಕಟಿಸಿದೆ. ನ್ಯಾ.ಚಂದ್ರಚೂಡ್‌ ತಾವು ಮತ್ತು ಇತರೆ 6 ನ್ಯಾಯಾಧೀಶರ ಪರವಾಗಿ ಒಂದು ತೀರ್ಪು ಬರೆದರೆ, ತೀರ್ಪಿನ ಮೂಲ ಅಂಶಗಳನ್ನು ಭಾಗಶಃ ಬೆಂಬಲಿಸಿ ಹಾಗೂ ಕೆಲವು ಭಾಗಗಳಿಗೆ ಆಕ್ಷೇಪಿಸಿ ನ್ಯಾ. ಬಿ.ವಿ. ನಾಗರತ್ನ ಪ್ರತ್ಯೇಕ ತೀರ್ಪು ಬರೆದರು. ಇನ್ನು ನ್ಯಾ. ಸುಧಾಂಶು ಧುಲಿಯಾ, ಇತರೆ ಎಲ್ಲ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾದ ಸಂಪೂರ್ಣ ಭಿನ್ನ ಅಭಿಪ್ರಾಯ ಹೊಂದಿರುವ ತೀರ್ಪು ಬರೆದರು.

ವಕ್ಫ್‌ ವಿವಾದ: ಸಚಿವ ಜಮೀರ್‌ ವಿರುದ್ಧ ವರಿಷ್ಠರಿಗೆ ಕಾಂಗ್ರೆಸ್ ಶಾಸಕರಿಂದ ದೂರು

ವಿವಾದ ಏನು?: ಸಂವಿಧಾನದ 39 (ಬಿ) ಪರಿಚ್ಛೇದದಲ್ಲಿ ಪ್ರಸ್ತಾಪಿಸಿರುವ ‘ಸಮುದಾಯ ಭೌತಿಕ ಸಂಪನ್ಮೂಲ’ ಪದದ ವ್ಯಾಪ್ತಿಗೆ ಖಾಸಗಿ ಆಸ್ತಿಗಳು ಕೂಡಾ ಸೇರುತ್ತವೆಯೇ ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಇದೀಗ ಸಾಂವಿಧಾನಿಕ ಪೀಠ ಉತ್ತರ ನೀಡಿದೆ. ಈ ತೀರ್ಪಿನ ಮೂಲಕ ‘ಸಮಾಜವಾದಿ ಪರಿಕಲ್ಪನೆ’ ಅಡಿ ಯಾವುದೇ ಆಸ್ತಿಯನ್ನು ಏಕಪಕ್ಷೀಯವಾಗಿ ವಶಪಡಿಸಿಕೊಳ್ಳಲು ಸರ್ಕಾರಗಳಿಗೆ ಅವಕಾಶ ನೀಡಿದ್ದ ಈ ಹಿಂದಿನ ಹಲವು ತೀರ್ಪುಗಳನ್ನು ಬದಿಗೊತ್ತಿದೆ.

ಯಾವ ಆಸ್ತಿ ವಶಪಡಿಸಿಕೊಳ್ಳಬಹುದು?: ಸರ್ಕಾರ ಸಮುದಾಯದ ಒಳಿತಿನ ಉದ್ದೇಶದಲ್ಲಿ ಯಾವುದೇ ಖಾಸಗಿ ಆಸ್ತಿ ವಶಪಡಿಸಿಕೊಳ್ಳಲು ಉದ್ದೇಶಿಸಿದರೆ ಮೊದಲಿಗೆ, ‘ಭೌತಿಕ ಸಂಪನ್ಮೂಲದ ಸ್ವರೂಪ, ಅದರ ಗುಣಲಕ್ಷಣ, ಅದನ್ನು ಸಮುದಾಯಕ್ಕೆ ಬಳಸಿದರೆ ಅದರಿಂದ ಆಗುವ ಪರಿಣಾಮಗಳು, ಸಂಪನ್ಮೂಲದ ಕೊರತೆ ಪ್ರಮಾಣ, ಖಾಸಗಿ ವ್ಯಕ್ತಿಗಳ ಬಳಿಯೇ ಆ ಭೌತಿಕ ಆಸ್ತಿ ಉಳಿದರೆ ಅದರಿಂದ ಆಗುವ ಪರಿಣಾಮಗಳನ್ನು’ ಪರಿಗಣಿಸಬೇಕು. ಈ ಎಲ್ಲಾ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರವೇ ಸರ್ಕಾರವು ಸಂವಿಧಾನದ 39 ಬಿ ಪರಿಚ್ಛೇದ ಅನ್ವಯ ಅಂಥ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು. 

ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

ಈ ಷರತ್ತುಗಳನ್ನು ಪಾಲಿಸದ ಆಸ್ತಿ ಸಮುದಾಯದ ಭೌತಿಕ ಸಂಪನ್ಮೂಲ ಎಂದು ಪರಿಗಣಿಸಲಾಗದು ಮತ್ತು ಅಂಥ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳಲಾಗದು’ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.1977ರಲ್ಲಿ ಇದೇ ವಿಷಯದ ಸಂಬಂಧ 7 ಸದಸ್ಯರ ಸಾಂವಿಧಾನಿಕ ಪೀಠ 4:3ರ ಬಹುಮತದಲ್ಲಿ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸಮುದಾಯ ಭೌತಿಕ ಸಂಪನ್ಮೂಲದ ಹೆಸರಲ್ಲಿ ವಶಪಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾ.ವಿ.ಆರ್‌.ಕೃಷ್ಣ ಅಯ್ಯರ್‌ ಅವರು, ಸಂವಿಧಾನದ 39 (ಬಿ) ಪರಿಚ್ಛೇದದ ವ್ಯಾಪ್ತಿಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ತಿ ಒಳಪಡುತ್ತದೆ ಎಂದು ಭಿನ್ನ ತೀರ್ಪು ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ