ಕೋವಿಶೀಲ್ಡ್‌-ಕೋವ್ಯಾಕ್ಸಿನ್‌ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು!

By Suvarna NewsFirst Published Jul 30, 2021, 7:48 AM IST
Highlights

* ಕೋವಿಶೀಲ್ಡ್‌-ಕೋವ್ಯಾಕ್ಸಿನ್‌ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು

* ಎರಡೂ ಲಸಿಕೆಗಳ ತಲಾ 1 ಡೋಸ್‌ ನೀಡಿಕೆ

* ವೆಲ್ಲೂರು ಮೆಡಿಕಲ್‌ ಕಾಲೇಜಿನಲ್ಲಿ ಇದರ ಪ್ರಯೋಗ

ನವದೆಹ(ಜು.30): ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಕ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ ಗುರುವಾರ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗಳ ತಲಾ 1 ಡೋಸ್‌ ನೀಡಿ ಜನರ ಮೇಲೆ ಪ್ರಯೋಗ ನಡೆಸಲು ಶಿಫಾರಸು ಮಾಡಿದೆ. ಇದಕ್ಕಾಗಿ ಅದು ಸರ್ಕಾರದ ಅನುಮತಿ ಕೋರಿದೆ.

ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ಎರಡೂ ಲಸಿಕೆಗಳ ಮಿಶ್ರಣ ಪ್ರಯೋಗ ಮಾಡಲು ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಅನುಮತಿ ನೀಡಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಸರ್ಕಾರದ ಅನುಮತಿ ದೊರೆತರೆ ದೇಶದಲ್ಲಿ ಇಂಥ ಮೊದಲ ಪ್ರಯೋಗ ಎನ್ನಿಸಿಕೊಳ್ಳಲಿದೆ.

'ಲಸಿಕೆ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳಿಸಲ್ಲ'

ಇದರರ್ಥ, ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯ ತಲಾ 1 ಡೋಸ್‌ ಅನ್ನು ಜನರಿಗೆ ನೀಡಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಇದರಿಂದ ಭಾರೀ ಪ್ರತಿಕಾಯ ಶಕ್ತಿ ಉತ್ಪಾದನೆ ಆಗಬಹುದು ಎಂಬ ಊಹೆ ಇದೆ. ಇದು ಯಶಸ್ವಿಯಾದರೆ ದೇಶದಲ್ಲಿ ಈ ರೀತತಿಯ ಲಸಿಕೆ ಮಿಶ್ರಣ ಜಾರಿಗೆ ಪದ್ಧತಿ ವ್ಯವಸ್ಥೆ ಬರಲಿದೆ.

ಈಗಾಗಲೇ ವಿದೇಶಗಳಲ್ಲಿ ಮಾಡೆರ್ನಾ ಹಾಗೂ ಆ್ಯಸ್ಟ್ರಾಜೆನೆಕಾದ ಲಸಿಕೆ ಮಿಶ್ರಣ ಪ್ರಯೋಗ ನಡೆದಿದೆ.

click me!