
ಬೆಂಗಳೂರು(ಜು.29): ಕೊರೋನಾ 2ನೇ ಅಲೆ ಕಡಿಮೆಯಾಗಿದೆ. ಹೀಗಾಗಿ ದೇಶದ ಬಹುತೇಕ ರಾಜ್ಯಗಳು ಅನ್‌ಲಾಕ್ ಆಗಿವೆ. ಇದರ ಪರಿಣಾಣ ಇದೀಗ ಕೊರೋನಾ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳದಲ್ಲಿ ಕೊರೋನಾ ಮೀತಿ ಮೀರುತ್ತಿದೆ. ಹೀಗಾಗಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡನ್ ವಿಸ್ತರಿಸಲಾಗಿದೆ. ಈ ಬೆಳವಣಿಗೆ ಕರ್ನಾಟಕದಲ್ಲಿನ ಆತಂಕ ಹೆಚ್ಚಿಸಿದೆ.
ಹೆಚ್ಚಿದ ಕೊರೋನಾ: ಕೇರಳದಲ್ಲಿ ಮತ್ತೆ ಕಂಪ್ಲೀಟ್ ಲಾಕ್‌ಡೌನ್
ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 15ರ ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಆದರೆ ಕೆಲ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ನೈಟ್ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ಗಂಟೆ ವರೆಗೆ ಇರಲಿದೆ. ಇನ್ನು ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಬಂಗಾಳ
ಕೇರಳದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯ ಹೆಚ್ಚಳವಾಗಿದೆ. ಹೀಗಾಗಿ ಜುಲೈ 31 ಹಾಗೂ ಆಗಸ್ಟ್ 1 ರಂದು ಕೇರಳ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕ ನೆರೆ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದು ಆತಂಕ ಹೆಚ್ಚಿಸಿದೆ.
ಕೊರೋನಾ 3 ನೇ ಅಲೆ ಬಿಸಿ, ಮೋದಿಗೆ ಕಸಿವಿಸಿ, ಸೋಂಕು ಹೆಚ್ಚಳವಾದರೆ ಮತ್ತೆ ಲಾಕ್‌ಡೌನ್.?
ಕೊರೋನಾ ಪ್ರಕರಣ ಸಂಖ್ಯೆಯಲ್ಲಿ ಕರ್ನಾಟಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಇನ್ನು ಕರ್ನಾಟಕ ಸಂಪೂರ್ಣ ಅನ್‌ಲಾಕ್ ಆಗಿದೆ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಸುತ್ತ ಮುತ್ತಲಿನ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಏರಿಕೆಯಿಂದ ಇದೀಗ ಕರ್ನಾಟಕದಲ್ಲೂ ಕಠಿಣ ನಿಯಮ ಜಾರಿಯಾದರೂ ಅಚ್ಚರಿಯಿಲ್ಲ.
ಕೇರಳದಲ್ಲಿ ಪ್ರತಿ ದಿನ 22,856 ಹೊಸ ಕೊರೋನಾ ಪ್ರಕರಣ ದಾಖಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 6,857 ಕೊರೋನಾ ಪ್ರಕರಣ, ಆಂಧ್ರ ಪ್ರದೇಶದಲ್ಲಿ 2,000 ಹಾಗೂ ಕರ್ನಾಟಕದಲ್ಲಿ ಹೊಸ ಕೊರೋನಾ ಪ್ರಕರಣ ಸಂಖ್ಯೆ ಪ್ರತಿ ದಿನ 1531 ದಾಖಲಾಗುತ್ತಿದೆ. ಗಡಿ ನಿರ್ಬಂಧವೂ ತೆರವುಗೊಳಿಸಾಗಿರುವ ಕಾರಣ ಕರ್ನಾಟಕದ ಆತಂಕ ಹೆಚ್ಚಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ