'ತಾಲಿ​ಬಾನ್‌, ಪಾಕ್‌ಗೆ ಭಾರತ ಸೇನೆ ಎಚ್ಚರಿಕೆ, ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ!'

By Suvarna News  |  First Published Aug 26, 2021, 7:24 AM IST

* ಆಫ್ಘನ್‌ ನೆಲ ಬಳ​ಸಿ​ ಉಗ್ರ ಕೃತ್ಯ ಎಸ​ಗಿ​ದರೆ ಹುಷಾ​ರ್‌

* ತಾಲಿ​ಬಾನ್‌, ಪಾಕ್‌ಗೆ ಭಾರತ ಸೇನೆ ಎಚ್ಚರಿಕೆ

* ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ: ಜ| ಬಿಪಿನ್‌ ರಾವತ್‌


ನವದೆಹಲಿ(ಆ.26): ತಾಲಿಬಾನ್‌ ನಿಯಂತ್ರಣಕ್ಕೆ ಒಳಪಟ್ಟಿರುವ ಅಫ್ಘಾನಿಸ್ತಾನದಿಂದ ನಡೆಯುವ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಮತ್ತು ಭಾರತವನ್ನು ಗುರಿಯಾಗಿಸಿಕೊಂಡು ನಡೆಸುವ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ. ಈ ಮೂಲಕ ಆಫ್ಘನ್‌ ನೆಲ​ವನ್ನು ಬಳ​ಸಿ​ಕೊಂಡು ಭಾರ​ತ​ದಲ್ಲಿ ಉಗ್ರ ಚಟು​ವ​ಟಿ​ಕೆಗೆ ಸಂಚು ರೂಪಿ​ಸು​ತ್ತಿ​ರುವ ಪಾಕಿ​ಸ್ತಾನಿ ಉಗ್ರರು ಹಾಗೂ ತಾಲಿ​ಬಾ​ನ್‌ಗೆ ಎಚ್ಚ​ರಿಕೆಯ ಸಂದೇ​ಶ ರವಾ​ನಿ​ಸಿ​ದ್ದಾ​ರೆ.

ಅಬ್ಸರ್ವರ್‌ ರೀಸರ್ಚ್ ಫೌಂಡೇಶನ್‌ (ಒಆರ್‌ಎಫ್‌) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದ ವೇಳೆ ಮಾತನಾಡಿದ ರಾವತ್‌ ಈ ಮಾತು​ಗ​ಳನ್ನು ಹೇಳಿ​ದ​ರು. ‘ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಿಭಾಯಿಸಿದ ರೀತಿಯಲ್ಲಿಯೇ ತಾಲಿಬಾನ್‌ ಬೆದರಿಕೆಯನ್ನು ಕೂಡ ನಿಭಾಯಿಸಲಾಗುವುದು. ಇತರ ದೇಶ​ಗಳು ಕೂಡ ಈ ಯತ್ನಕ್ಕೆ ಸಹ​ಕ​ರಿ​ಸ​ಬೇ​ಕು’ ಎಂದು ಹೇಳಿ​ದ​ರು.

Tap to resize

Latest Videos

undefined

‘ಅಫ್ಘಾನಿಸ್ತಾನವನ್ನು ತಾಲಿಬಾನ್‌ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನುವುದನ್ನು ಭಾರತ ನಿರೀಕ್ಷಿಸಿತ್ತು. ಆದರೆ, ಇಷ್ಟುಬೇಗ ಆಗಿದ್ದು ನಮಗೇ ಅಚ್ಚರಿ ಮೂಸಿ​ಡಿ​ತು. ಕಳೆದ ಕೆಲವು ದಿನಗಳಿಂದ ನಡೆದ ಘಟನಾವಳಿಗಳು ಅಚ್ಚರಿ ಉಂಟುಮಾಡಿವೆ’ ಎಂದ​ರು.

‘ಕಳೆದ 20 ವರ್ಷಗಳಲ್ಲಿ ತಾಲಿಬಾನ್‌ ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಅಫ್ಘಾನಿಸ್ತಾನದಿಂದ ನಡೆಯುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಹೀಗಾಗಿ ಜಾಗತಿಕ ಭಯೋತ್ಪಾದನೆಯ ವಿರುದ್ಧ ಹೋರಾಡಲು ಕ್ವಾಡ್‌ ರಾಷ್ಟ್ರಗಳ (ಅಮೆರಿಕ, ಜಪಾನ್‌, ಭಾರತ ಮತ್ತು ಆಸ್ಪ್ರೇಲಿಯಾ) ಮಧ್ಯೆ ಸಹಕಾರವನ್ನು ಹೆಚ್ಚಿಸುವ ಅಗತ್ಯವಿದೆ’ ಎಂದು ಹೇಳಿ​ದ​ರು.

click me!