ಸಮೀಪದಲ್ಲೇ ಪಾಸಾಯ್ತು ಸಾವು: ಚಲಿಸುತ್ತಿದ್ದ ಕಾರಿನ ಮುಂಭಾಗದ ಗ್ಲಾಸ್‌ ಸೀಳಿ ಒಳ ನುಗ್ಗಿದ ಕಬ್ಬಿಣದ ರಾಡ್‌

Published : Apr 24, 2025, 04:44 PM ISTUpdated : Apr 24, 2025, 05:13 PM IST
 ಸಮೀಪದಲ್ಲೇ ಪಾಸಾಯ್ತು ಸಾವು: ಚಲಿಸುತ್ತಿದ್ದ ಕಾರಿನ ಮುಂಭಾಗದ ಗ್ಲಾಸ್‌ ಸೀಳಿ ಒಳ ನುಗ್ಗಿದ ಕಬ್ಬಿಣದ ರಾಡ್‌

ಸಾರಾಂಶ

ಕಾರಿನಲ್ಲಿ ಸಾಗುತ್ತಿದ್ದ ನಾಲ್ಕು ಜನರಿದ್ದ ಕುಟುಂಬವೊಂದು ಪವಾಡಸದೃಶವಾಗಿ ಸಾವಿನದವಡೆಯಿಂದ ಪಾರಾದಂತಹ ಘಟನೆ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರನ್ನು ಭಯಪಡಿಸುತ್ತಿದೆ.

ಕೊಲ್ಹಾಪುರ: ಕಾರಿನಲ್ಲಿ ಸಾಗುತ್ತಿದ್ದ ನಾಲ್ಕು ಜನರಿದ್ದ ಕುಟುಂಬವೊಂದು ಪವಾಡಸದೃಶವಾಗಿ ಸಾವಿನದವಡೆಯಿಂದ ಪಾರಾದಂತಹ ಘಟನೆ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರನ್ನು ಭಯಪಡಿಸುತ್ತಿದೆ. ಸಾಮಾನ್ಯವಾಗಿ ಹೆಚ್ಚಿನ ರಸ್ತೆ ಅಪಘಾತಗಳಲ್ಲಿ ಯಾರದೋ ಬೇಜವಾಬ್ದಾರಿತನದ ವರ್ತನೆಗೆ ಇನ್ಯಾರೋ ಬಲಿಯಾಗುತ್ತಾರೆ. ಹೆಲ್ಮೆಟ್ ಹಾಕಿದರು, ಸೀಟ್‌ ಬೆಲ್ಟ್‌ ಹಾಕಿ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸಿದರು. ಸಾವು ಇನ್ಯಾವುದೋ ರೂಪದಲ್ಲಿ ಬಂದು ಬದುಕನ್ನು ಸರ್ವನಾಶ ಮಾಡಿಬಿಡುತ್ತದೆ. ಆದರೆ ಇಲ್ಲೊಂದು ಕುಟುಂಬಕ್ಕೆ ಸಾವಿನ ಸಮೀಪದಲ್ಲೇ ಪಾಸಾದಂತಹ ಅನುಭವವಾಗಿದೆ. ಕಬ್ಬಿಣದ ಉದ್ದನೇಯ ರಾಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಗೂಡ್ಸ್ ಗಾಡಿಯಿಂದ ಜಾರಿಕೊಂಡು ಬಂದ ಎರಡು ಉದ್ದನೇಯ ಕಬ್ಬಿಣದ ರಾಡುಗಳು ಸೀದಾ ಬಂದು ಕಾರಿನ ಮುಂಭಾಗ ಗ್ಲಾಸನ್ನು ತೂರಿಕೊಂಡು ಒಳ ನುಗ್ಗಿವೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪವಾಡ ಸದೃಶವಾಗಿ ಈ ಅವಘಡದಲ್ಲಿ ಪಾರಾಗಿದ್ದಾರೆ. 

ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿಯ ಸಿಸಿ ಕ್ಯಾಮರಾದಲ್ಲಿ ಘಟನೆಯ ವೀಡಿಯೋ ಸೆರೆಯಾಗಿದೆ. ಕಬ್ಬಿಣದ ರಾಡುಗಳು ಸಿಮೆಂಟ್ ಕಂಬಗಳು ಮುಂತಾದವುಗಳನ್ನು ಸಾಗಿಸುವಾಗ ಬಹಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ವಾಹನ ಬ್ರೇಕ್ ಹಾಕಿದರು ಜಾರಿ ಬೀಳದಂತೆ ಹಗ್ಗದಿಂದ ಎಳೆದು ಕಟ್ಟಿರುತ್ತಾರೆ. ಆದರೆ ಇಲ್ಲಿ ಈ ಕಬ್ಬಿಣದ ರಾಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಗೂಡ್ಸ್ ಗಾಡಿಯ ಚಾಲಕ ಬಹುಶಃ ಈ ಕಬ್ಬಿಣದ ರಾಡುಗಳನ್ನು ಸರಿಯಾಗಿ ಕಟ್ಟಿದಂತೆ ಕಾಣುತ್ತಿಲ್ಲ, ಆತ ಬ್ರೇಕ್ ಹಾಕಿದ ವೇಳೆ ಸೀದಾ ಜಾರಿ ಬಂದ ಈ ಕಬ್ಬಿಣದ ರಾಡುಗಳು ಎರಡು ಬಂದು ಕಾರಿನ ಮುಂಭಾಗದ ಗಾಜುಗಳನ್ನು ಸೀಳಿಕೊಂಡು ಒಳನುಗ್ಗಿದೆ.  ಇನ್ನು ಸ್ವಲ್ಪ ಹೆಚ್ಚು ಒಳಗೆ ತೂರಿದ್ದರು. ಒಳಗೆ ಕುಳಿತಿದ್ದ ಸವಾರರ ಪಾಲಿಗೆ ಅದೇ ಯಮಸ್ವರೂಪಿಯಾಗುತ್ತಿತ್ತು. 

ಇದನ್ನೂ ಓದಿ: ಉಗ್ರರಿಗೆ ಊಹೆಗೂ ನಿಲುಕದ ಶಿಕ್ಷೆ, ಪ್ರತೀಕಾರವನ್ನು ಇಂಗ್ಲೀಷ್‌ನಲ್ಲಿ ಜಗತ್ತಿಗೆ ಹೇಳಿದ ಮೋದಿ

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಕಾರು ಪಕ್ಕದ ರಸ್ತೆಗೆ ದಾಟುತ್ತಿದ್ದಾಗ ಕಾರಿನ ಎಡಭಾಗದ ರಸ್ತೆಯಿಂದ ಬಂದ ಗೂಡ್ಸ್ ಗಾಡಿ ಬ್ರೇಕ್ ಹಾಕಿದೆ ಪರಿಣಾಮ ಗೂಡ್ಸ್‌ ಟೆಂಪೋದಲ್ಲಿದ್ದ ರಾಡುಗಳು ಜಾರಿಕೊಂಡು ಬಂದು ಕಾರಿನ ಮುಂಭಾಗವನ್ನು(windshield)ಸೀಳಿವೆ. ವೀಡಿಯೋ ನೋಡಿದ ಅನೇಕರು ಇದೊಂದು ದೊಡ್ಡ ಅದೃಷ್ಟವೇ ಸರಿ ಎಂದು ಕಾಮೆಂಟ್ ಮಾಡಿದ್ದಾರೆ. ಇದರಿಂದ ವಾಹನಕ್ಕೆ ಬಹಳ ಹಾನಿಯಾಗಿದ್ದರು ಕೂಡ ಈ ಪ್ರಕರಣವನ್ನು ಪೊಲೀಸರವರೆಗೆ ಕೊಂಡೊಯ್ಯದೇ ಎರಡು ಪಾರ್ಟಿಗಳು ಮಾತುಕತೆಯ ಮೂಲಕ ಮುಗಿಸಿವೆ ಎಂದು ವರದಿಯಾಗಿದೆ. 

 

ಲಾಡೆನ್‌ಗೆ ಆದ ಗತಿಯೇ ಪಾಕ್ ಸೇನಾ ಮುಖ್ಯಸ್ಥನಿಗೂ ಆಗಬೇಕು

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನದ ಬಣ್ಣ ಜಾಗತಿಕ ಮಟ್ಟದಲ್ಲಿ ಬಯಲಾಗುತ್ತಿದೆ. ಘಟನೆಗೆ ಪ್ರಪಂಚದ ಎಲ್ಲಾ ಪ್ರಮುಖ ರಾಷ್ಟ್ರಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಮರಿಕಾದ ಅಧಿಕಾರಿಯೊಬ್ಬರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ. 
ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ ಮತ್ತು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವ ಬಗ್ಗೆ ಅವರು ಟೀಕೆ ಮಾಡಿದ್ದಾರೆ.  ಉಗ್ರ ಒಸಾಮಾ ಬಿನ್ ಲಾಡೆನ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ವ್ಯತ್ಯಾಸವೆಂದರೆ ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ ಮತ್ತು ಅಸಿಮ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದನ್ನು ಮೀರಿ, ಇಬ್ಬರೂ ಒಂದೇ ಆಗಿದ್ದಾರೆ ಮತ್ತು ಅವರ ಅಂತ್ಯವೂ ಒಂದೇ ಆಗಿರಬೇಕು ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿಯಾಗಿರುವ ಮೈಕೆಲ್ ರೂಬಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ:  ಪುಟ್ಟ ಮಗುವಿದೆ ಬಿಟ್ಟುಬಿಡಿ ಎಂದರೂ ಕೇಳಲಿಲ್ಲ: ಕಣ್ಣೆದುರು ಜರುಗಿದ ಕರಾಳ ಕ್ಷಣಗಳ ನೆನೆದ ಭರತ್ ಪತ್ನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!