ಭಾರತಕ್ಕೆ ಸಿಯಾಚಿನ್‌ ದೊರಕಿಸಿದ್ದ ಕರ್ನಲ್‌ ಬುಲ್‌ ಕುಮಾರ್‌ ಇನ್ನಿಲ್ಲ!

By Suvarna News  |  First Published Jan 2, 2021, 8:03 AM IST

ಭಾರತಕ್ಕೆ ಸಿಯಾಚಿನ್‌ ದೊರಕಿಸಿದ್ದ ಕರ್ನಲ್‌ ಬುಲ್‌ ಕುಮಾರ್‌ ಇನ್ನಿಲ್ಲ| ಸಿಯಾಚಿನ್‌ ಮಹತ್ವವನ್ನು ದೇಶಕ್ಕೆ ತಿಳಿಸಿದ್ದ ನರೇಂದ್ರ


ನವದೆಹಲಿ(ಜ.02): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿಕೊಂಡಿರುವ ಸಿಯಾಚಿನ್‌ ನೀರ್ಗಲ್ಲಿನ ಮಹತ್ವವನ್ನು ದೇಶದ ನಾಯಕತ್ವಕ್ಕೆ ವಿವರಿಸಿ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಆ ಪ್ರದೇಶ ಭಾರತದ ತೆಕ್ಕೆಗೆ ಸಿಗುವಂತೆ ಮಾಡಿದ್ದ ಕರ್ನಲ್‌ ನರೇಂದ್ರ ಬುಲ್‌ ಕುಮಾರ್‌ ಅವರು ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲಸುತ್ತಿದ್ದ 87 ವರ್ಷದ ಕುಮಾರ್‌ ಅವರು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪರ್ವತಾರೋಹಣದ ಭಾಗವಾಗಿ ಸಿಯಾಚಿನ್‌ ನೀರ್ಗಲ್ಲಿನ ಮೇಲೆ ಇಳಿದ ಮೊದಲ ಅಧಿಕಾರಿಗಳಲ್ಲಿ ಬುಲ್‌ ಕುಮಾರ್‌ ಕೂಡ ಒಬ್ಬರು. ಅಷ್ಟೇ ಅಲ್ಲದೆ, ಸಿಯಾಚಿನ್‌ ನೀರ್ಗಲ್ಲು ಭಾರತಕ್ಕೆ ಯಾಕೆ ಮುಖ್ಯ ಎಂಬುದನ್ನು ದೇಶದ ಮಿಲಿಟರಿ ಹಾಗೂ ರಾಜಕೀಯ ನಾಯಕತ್ವಕ್ಕೆ ಮನದಟ್ಟು ಮಾಡಿಸುವಲ್ಲಿ ಅವರು ಸಫಲರಾಗಿದ್ದರು.

Tap to resize

Latest Videos

ಸಿಯಾಚಿನ್ ಸೈನಿಕರಿಗೆ ಬಟ್ಟೆಯಿಲ್ಲ, ಊಟವಿಲ್ಲ: ನೀವಿನ್ನೂ ಸಿಎಜಿ ವರದಿ ಓದಿಲ್ಲ?

ಬುಲ್‌ ಕುಮಾರ್‌ ಅವರು ಸಿದ್ಧಪಡಿಸಿದ್ದ ನಕ್ಷೆ ಹಾಗೂ ವಿಡಿಯೋ ಆಧರಿಸಿಯೇ ಭಾರತೀಯ ಸೇನೆ 1984ರಲ್ಲಿ ‘ಆಪರೇಷನ್‌ ಮೇಘದೂತ್‌’ ನಡೆಸಿ ಸಿಯಾಚಿನ್‌ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿತ್ತು. ತನ್ಮೂಲಕ ಆ ಪ್ರದೇಶವನ್ನು ಕಬಳಿಸಲು ಹೊಂಚು ಹಾಕಿದ್ದ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿತ್ತು.

1965ರಲ್ಲಿ ಕುಮಾರ್‌ ಅವರಿಗೆ ಪದ್ಮಶ್ರೀ ಲಭಿಸಿತ್ತು. ಭಾರತೀಯ ಸೇನೆ ಕುಮಾರ್‌ ಅವರ ಅಸಾಧಾರಣ ಸೇವೆ ಪರಿಗಣಿಸಿ ಪರಮ ವಿಶಿಷ್ಟಸೇವಾ ಪದಕ ನೀಡಿ ಗೌರವಿಸಿತ್ತು. ಇದಲ್ಲದೆ ಕೀರ್ತಿ ಚಕ್ರ, ಅತಿ ವಿಶಿಷ್ಟಸೇವಾ ಪದಕಗಳಿಗೂ ಬುಲ್‌ ಕುಮಾರ್‌ ಭಾಜನರಾಗಿದ್ದರು. ಸಿಯಾಚಿನ್‌ ನೀರ್ಗಲ್ಲಿನಲ್ಲಿರುವ ಸೇನಾ ಕೇಂದ್ರಕ್ಕೆ ‘ಕುಮಾರ್‌ ಬೇಸ್‌’ ಎಂಬ ನಾಮಕರಣವನ್ನೂ ಮಾಡಲಾಗಿದೆ.

 

click me!