
ಮೊದಲನೇಯದಾಗಿ ಆದಿವಂದ್ಯ ಗಣೇಶನಿಗೆ ಪ್ರಪಂಚದೆಲ್ಲೆಡೆ ಭಕ್ತರಿದ್ದಾರೆ. ಇತ್ತೀಚೆಗೆ ಫ್ರೆಂಚ್ ಯುವಕನೋರ್ವ ಗಣೇಶನ 'ಏಕದಂತಾಯ ವಕ್ರತುಂಡಾಯ' ಎಂಬ ಗಣೇಶನ ಹಾಡನ್ನು ಹಾಡುವ ಮೂಲಕ ಅನೇಕ ಭಾರತೀಯರ ಮನಗೆದ್ದಿದ್ದ. ಭಾರತದಲ್ಲೇ ಇರುವವರ ಗಣೇಶ ಹಬ್ಬದ ಸಂಭ್ರಮವೇ ಒಂದು ರೀತಿಯಾದರೆ ಭಾರತದಿಂದ ಹೊರಗೆ ಹೋಗಿ ವಿದೇಶದಲ್ಲಿ ನೆಲೆಸಿರುವವರು ಕೂಡ ಗಣೇಶ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತಾರೆ. ಅದೇ ರೀತಿ ಯುಕೆಯ ಲಂಡನ್‌ನಲ್ಲಿ ಸೇರಿದ ಭಾರತೀಯ ಸಮುದಾಯವೊಂದು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಗಣೇಶನನ್ನು ನೀರಲ್ಲಿ ಬಿಟ್ಟಿದ್ದು, ಗಣೇಶ ನಿಮಜ್ಜನದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಗಣೇಶನ ಸ್ವಾಗತಿಸಿದ ಶ್ವೇತ ಹಂಸಗಳು:
ವಿದೇಶದಲ್ಲಿ ನೆಲೆಸಿರುವ ಭಾರತೀಯರು ಸಂಪ್ರದಾಯಿಕ ಭಾರತೀಯ ಧಿರಿಸು ಧರಿಸಿ ಗಣೇಶನ ಆರಾಧನೆ ಮಾಡಿ ಹಬ್ಬ ಆಚರಿಸಿದ್ದಾರೆ. Sandeep Anthwal ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಗಣೇಶನ ಹಬ್ಬ ಆಚರಿಸಿದ ಗುಂಪೊಂದು ಮಣ್ಣಿನಲ್ಲಿ ಮಾಡಿದ ಗಣೇಶನನ್ನು ದೋಣಿ ಮೂಲಕ ಸಾಗಿ ಕೆರೆಯೊಂದರಲ್ಲಿ ನಿಮಜ್ಜನ ಮಾಡಿದ್ದಾರೆ. ಈ ವೇಳೆ ಬಿಳಿ ಬಣ್ಣದ ರಾಜಹಂಸಗಳು ಗಣೇಶನನನ್ನು ಸುತ್ತುವರೆದು ಸ್ವಾಗತಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಐದಕ್ಕೂ ಹೆಚ್ಚು ರಾಜಹಂಸಗಳು ಗಣೇಶನನ್ನು ನೀರಿಗೆ ಬಿಡುತ್ತಿದ್ದಂತೆ ಸುತ್ತಲೂ ಬಂದು ಸೇರಿದ್ದು, ಈ ಸಂಭ್ರಮ ಹಾಗೂ ಗಣೇಶನನ್ನು ಬಿಡುವ ಬೇಸರ ಮಿಶ್ರಿತವಾದ ಕ್ಷಣಕ್ಕೆ ಮತ್ತಷ್ಟು ಕಳೆ ನೀಡಿವೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಗಣೇಶನನ್ನು ನೀರಿಗೆ ಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಹಂಸಗಳ ಉಪಸ್ಥಿತಿ ನೋಡಿ ಖುಷಿಪಟ್ಟಿದ್ದಾರೆ. ನಾವು ನಮ್ಮ ಹಳ್ಳ ಕೊಳ್ಳಗಳ ಹಾಳು ಮಾಡಿದೆವು ಈಗ ನಾವು ಅಲ್ಲಿನ ಹಳ್ಳಕೊಳ್ಳಗಳನ್ನು ಹಾಳು ಮಾಡುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ನಿಮ್ಮ ಮನೆಯಲ್ಲಿ ಮಾಡಿ ಗಣೇಶ ಇದನ್ನು ಇಷ್ಟಪಡಲ್ಲ, ಆ ದೇಶದ ಸಂಸ್ಕೃತಿಯನ್ನು ಗೌರವಿಸಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮೀನು ಬೇಟೆಯಾಡಿದ ಬೆಕ್ಕು
ಬೆಕ್ಕುಗಳು ನೈಸರ್ಗಿಕ ಬೇಟೆಗಾರರು ನೀರಿನಲ್ಲಿ ಆಟವಾಡುವುದನ್ನು ಇಷ್ಟಪಡುವ ಈ ಬೆಕ್ಕುಗಳು ಮೀನು ಹಿಡಿಯುವುದರಲ್ಲೂ ಒಳ್ಳೆಯ ಕೌಶಲ್ಯವನ್ನು ಹೊಂದಿವೆ. ಮೀನುಗಾರಿಕೆ ಅವುಗಳ ಗುಣವನ್ನು ನೇರವಾಗಿ ಅವಲಂಬಿಸಿರುತ್ತದೆ. ಬೆಕ್ಕುಗಳು ಕೊಳದಲ್ಲಿ ಮೀನುಗಳು ಓಡಾಡುವುದು ಹಾಗೂ ಅಕ್ವೇರಿಯಂನಲ್ಲಿ ಮೀನುಗಳು ಓಡಾಡುವುದನ್ನು ಬಹಳ ಸೂಕ್ಷ ಹಾಗೂ ಅಷ್ಟೇ ಏಕಾಗ್ರತೆಯಿಂದ ಗಮನಿಸುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಂದು ಬೆಕ್ಕು ತನ್ನ ಗಾತ್ರಕ್ಕಿಂತ ತುಸುವೇ ಸಣ್ಣದಾದ ಮೀನನ್ನು ನದಿಯಿಂದ ನೇರವಾಗಿ ಹಿಡಿದಿದ್ದು, ಬೆಕ್ಕಿನ ಮೀನು ಬೇಟೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ನದಿಯ ತೀರದಲ್ಲಿ ಬಹಳ ಏಕಾಗ್ರತೆಯಿಂದ ಕುಳಿತು ಬೆಕ್ಕು ಮೀನುಗಳ ಓಡಾಟವನ್ನು ಗಮನಿಸಿದ್ದು, ಕೆಲ ಸೆಕೆಂಡ್‌ನಲ್ಲಿ ಗಬ್ಬಕ್ಕನೇ ಹಾರಿ ಮೀನನ್ನು ಸೆರೆ ಹಿಡಿದಿದೆ. ಬೆಕ್ಕುಗಳು ಮೀನು ಹಿಡಿಯುವುದನ್ನು ಯಾವಾಗಲಾದರೂ ನೋಡಿದ್ದೀರಾ ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಭಾರಿ ವೈರಲ್ ಆಗಿದೆ. pubity ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ.
ಇದನ್ನೂ ಓದಿ: ಅತೀ ಭದ್ರತೆಯ ಕೆಂಪು ಕೋಟೆಯಲ್ಲೇ ಕೋಟಿ ಮೌಲ್ಯದ ಚಿನ್ನದ ಕಳಸ ಕದ್ದವ ಕಡೆಗೂ ಅಂದರ್
ಇದನ್ನೂ ಓದಿ: 45 ಲಕ್ಷ ರೂ. ವೆಚ್ಚ ಮಾಡಿ ಅಮೆರಿಕಾಗೆ ಹೋಗಿದ್ದ ರೈತನ ಏಕೈಕ ಪುತ್ರ ದುಷ್ಕರ್ಮಿಯ ಗುಂಡೇಟಿಗೆ ಬಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ