ಕೇಸು ಜಡಿದ ಕೇರಳಕ್ಕೆ ಕರಂದ್ಲಾಜೆ ಉತ್ತರ: ಅದೊಂದು ಮಿನಿ ಕಾಶ್ಮೀರ!

Published : Jan 24, 2020, 02:38 PM ISTUpdated : Jan 24, 2020, 06:00 PM IST
ಕೇಸು ಜಡಿದ ಕೇರಳಕ್ಕೆ ಕರಂದ್ಲಾಜೆ ಉತ್ತರ: ಅದೊಂದು ಮಿನಿ ಕಾಶ್ಮೀರ!

ಸಾರಾಂಶ

ಸಿಎಎ ಬೆಂಬಲಿಸಿದ ಹಿಂದೂಗಳಿಗೆ ನೀರು ಬಂದ್?| ಕೇರಳ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಗಂಭೀರ ಆರೋಪ| 'ಮಲ್ಲಪ್ಪುರಂ ಜಿಲ್ಲೆಯ ಹಿಂದೂ ಕುಟುಂಬಗಳಿಗೆ ನೀರು ನಿಲ್ಲಿಸಿದ ಕೇರಳ ಸರ್ಕಾರ'| ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ ಕೇರಳ ಪೊಲೀಸರು| ಸಿಎಎ ಬೆಂಬಲಿಸಿದರೆ ಕೇರಳ ಸರ್ಕಾರ ನೀರು ಪೂರೈಕೆ ನಿಲ್ಲಿಸುತ್ತದೆ ಎಂದ ಶೋಭಾ| ಕೇರಳ ಮಿನಿ ಕಾಶ್ಮೀರವಾಗಿ ಪರಿವರ್ತನೆಗೊಂಡಿದೆ ಎಂದ ಸಂಸದೆ|

ತಿರುವನಂತಪುರಂ(ಜ.24): ಸಿಎಎ ಬೆಂಬಲಿಸಿದ ಹಿಂದೂಗಳಿಗೆ ಕೇರಳ ಸರ್ಕಾರ ನೀರು ಪೂರೈಕೆ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ.

"

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಸಿಎಎ ಬೆಂಬಲಿಸಿದ್ದ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದರು.

ಶೋಭಾ ಕರಂದ್ಲಾಜೆ ಅವರ ಟ್ವೀಟ್ ಆಧರಿಸಿ ಅವರ ವಿರುದ್ಧ ಕೇರಳ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಸಂಸದೆ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಲ್ಲಪ್ಪುರಂ ಎಸ್‌ಪಿ ಅಬ್ದುಲ್ ಕರೀಂ ಹೇಳಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲು!

ಇನ್ನು ತಮ್ಮ ವಿರುದ್ಧ ದೂರು ದಾಖಲಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆ, ಸತ್ಯ ಹೇಳಿದ್ದಕ್ಕೆ ಕೇರಳ ಸರ್ಕಾರ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಕೇರಳ ಮಿನಿ ಕಾಶ್ಮೀರವಾಗಿ ಪರಿವರ್ತನೆಯಾಗಿದ್ದು, ಎಡರಂಗ ಸರ್ಕಾರ ಹಿಂದೂಗಳ ವಿರುದ್ಧ ಸಮರ ಸಾರಿದೆ ಎಂದು ಸಂಸದೆ ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನನ್ನ ಮೇಲೆ ಮಾಟಮಂತ್ರ ಮಾಡಿದ್ದಾರೆ, ದಿನದಿಂದ ದಿನಕ್ಕೆ ಕುಳ್ಳ ಆಗ್ತಿದ್ದೇನೆ' ಜಿಲ್ಲಾಧಿಕಾರಿಗೆ ವಿಚಿತ್ರ ದೂರು ನೀಡಿದ ವಿದ್ಯಾವಂತ ಯುವಕ
400 ಅಂಗನವಾಡಿಯ 5500 ಮಕ್ಕಳಿಗೆ ಹಾಲು ಕೊಡದೇ ಅನ್ಯಾಯ, ಸರ್ಕಾರದ ವಿರದ್ಧ ಭುಗಿಲೆದ್ದ ಆಕ್ರೋಶ