ತೋಚಿದಾಗ ಗಲ್ಲುಶಿಕ್ಷೆ ಪ್ರಶ್ನಿಸಲು ಆಗದು: ಸುಪ್ರೀಂ ಕೋರ್ಟ್‌!

By Suvarna News  |  First Published Jan 24, 2020, 2:19 PM IST

ತೋಚಿದಾಗ ಗಲ್ಲುಶಿಕ್ಷೆ ಪ್ರಶ್ನಿಸಲು ಆಗದು: ಸುಪ್ರೀಂ ಕೋರ್ಟ್‌| ತೀರ್ಪು ಪ್ರಶ್ನಿಸಲೂ ಒಂದು ಕಾಲಮಿತಿ ಇರುತ್ತದೆ| ಸನ್ನಡತೆ ಆಧರಿಸಿ ಗಲ್ಲುಶಿಕ್ಷೆ ಮರುಪರಿಶೀಲಿಸಲು ಆಗದು


ನವದೆಹಲಿ[ಜ.24]: ‘ಗಲ್ಲುಶಿಕ್ಷೆಗೆ ಒಳಗಾದವರು ತಮಗೆ ತೋಚಿದಾಗ ಅದನ್ನು ಪ್ರಶ್ನಿಸಲು ಆಗದು. ಮರಣದಂಡನೆ ಸಜೆ ಆದೇಶ ಪ್ರಶ್ನಿಸಲೂ ಒಂದು ಕಾಲಮಿತಿ ಇರುತ್ತದೆ. ಯಾವಾಗ ಬೇಕಾದರೂ ಅದನ್ನು ಪ್ರಶ್ನಿಸಬಹುದು ಎಂಬ ಕಲ್ಪನೆಯಲ್ಲಿ ದೋಷಿಗಳು ಇರಬಾರದು’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಎಎ ತಡೆಗೆ ಸುಪ್ರೀಂ ನಕಾರ: ಉತ್ತರ ಬಯಸಿ ಕೇಂದ್ರಕ್ಕೆ ಆದೇಶ!

Latest Videos

undefined

ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ದೋಷಿಗಳು ಕಾನೂನಿನ ನಾನಾ ಆಯ್ಕೆಗಳ ನೆಪ ಮುಂದೊಡ್ಡಿ ಮರಣದಂಡನೆ ಶಿಕ್ಷೆಯನ್ನು ಮುಂದೂಡಿಸಿಕೊಂಡ ನಡುವೆಯೇ ಕೋರ್ಟ್‌ನ ಈ ಅಭಿಪ್ರಾಯ ಬಂದಿದೆ.

ಉತ್ತರಪ್ರದೇಶದಲ್ಲಿ ಒಂದೇ ಕುಟುಂಬದ 7 ಜನರನ್ನು ಕೊಲೆ ಮಾಡಿ 2015ರಲ್ಲೇ ನೇಣು ಶಿಕ್ಷೆ ಆದೇಶಕ್ಕೆ ಒಳಗಾಗಿರುವ ಮಹಿಳೆ ಹಾಗೂ ಆಕೆಯ ಪ್ರಿಯಕರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಎಸ್‌.ಎ. ಬೋಬ್ಡೆ ಅವರ ಪೀಠ, ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿತು.

ಮನೆಯವ್ರನ್ನ ಮೀಟ್ ಮಾಡ್ತಿರಾ, ವಿಲ್ ಬರೀತಿರಾ?: ಎಲ್ಲ ಪ್ರಶ್ನೆಗೂ ಏಕೆ ಸೈಲೆಂಟ್ ಆಗಿದ್ದೀರಾ?

ಇನ್ನು ಸನ್ನಡತೆ ಆಧಾರದಲ್ಲಿ ಗಲ್ಲು ಶಿಕ್ಷೆ ದೋಷಿಗಳ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಎಂಬ ಕೋರಿಕೆಗೂ ಕಿಡಿಕಾರಿದ ಪೀಠ, ‘ಗಲ್ಲು ಸಜೆ ದೋಷಿಗಳಿಗೆ ಸನ್ನಡತೆ ಆಧಾರದಲ್ಲಿ ಶಿಕ್ಷೆ ಪ್ರಮಾಣ ಕಡಿತ ಮಾಡಿದರೆ, ಮರಣದಂಡನೆ ತೀರ್ಪುಗಳು ಮಹತ್ವ ಕಳೆದುಕೊಳ್ಳಲಿವೆ. ಮತ್ತೆ ಪ್ರವಾಹೋಪಾದಿಯಲ್ಲಿ ಆ ತೀರ್ಪುಗಳ ಮರುಪರಿಶೀಲನೆ ಮಾಡಬೇಕಾಗುತ್ತದೆ’ ಎಂದಿತು.

‘ಹಿಂದಿನ ಆದೇಶದಲ್ಲಿ ಏನಾದರೂ ಲೋಪವಿದ್ದರೆ ದಾಖಲೆ ಸಮೇತ ತಿಳಿಸಿ. ಮರುಪರಿಶೀಲಿಸಲಾಗುತ್ತದೆ. ಆದರೆ ಸನ್ನಡತೆಯಂತಹ ಕಾರಣಗಳನ್ನು ಇಲ್ಲಿ ಪರಿಗಣಿಸಲಾಗದು’ ಎಂದು ಪೀಠ ಖಡಕಕ್ಕಾಗಿ ಹೇಳಿತು.

click me!