ಮನೆಯಲ್ಲೇ ವಿಮಾನ ನಿರ್ಮಿಸಿದ ಕ್ಯಾಪ್ಟನ್ ಅಮೊಲ್; ಮೊದಲ ಹಾರಾಟವೂ ಯಶಸ್ವಿ!

By Suvarna NewsFirst Published Aug 29, 2020, 4:08 PM IST
Highlights

ಕಳೆದ 19 ವರ್ಷಗಳಿಂದ ಸತತ ಪ್ರಯತ್ನ ಹಾಗೂ ಮನೆಯ ಮೇಲ್ಚಾವಣಿಯಲ್ಲಿ ನಿರಂತ ಪ್ರಯೋಗದ ಫಲವಾಗಿ ಕ್ಯಾಪ್ಟನ್ ಅಮೊಲ್ ಯಾದವ್ ಮೇಡ್ ಇನ್ ಇಂಡಿಯಾ ವಿಮಾನ ನಿರ್ಮಿಸಿದ್ದಾರೆ. 4 ಸೀಟು ಸಾಮರ್ಥ್ಯ ಈ ವಿಮಾನ ಯಶಸ್ವಿಯಾಗಿ ಹಾರಾಟವನ್ನೂ ನಡೆಸಿದೆ.

ಮಹಾರಾಷ್ಟ್ರ(ಆ.29):  ಮನೆಯ ಮೆಲ್ಚಾವಣಿಯಲ್ಲಿ ಕಳೆದ 19 ವರ್ಷಗಳ ಹಿಂದೆ ವಿಮಾನ ನಿರ್ಮಾಣದ ಸಿದ್ಧತೆ ಆರಂಭಿಸಿದ ಕ್ಯಾಪ್ಟನ್ ಅಮೊಲ್ ಯಾದವ್ ಇದೀಗ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಮಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಹಲವು ಗಣ್ಯರು ಅಮೊಲ್ ಯಾದವ್ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಇಸ್ರೇಲ್ ನಿರ್ಮಿತ ಫಾಲ್ಕನ್ ಖರೀದಿಗೆ ಭಾರತ ಒಪ್ಪಂದ: ಚೀನಾ, ಪಾಕ್‌ಗೆ ಶುರುವಾಯ್ತು ನಡುಕ!.

ಮಹಾರಾಷ್ಟ್ರದ ಕಾಂಡಿವಿಲಿಯಲ್ಲಿರುವ ತನ್ನ ಮನೆ ಮೇಲ್ಚಾವಣಿಯಲ್ಲಿ ಅಮೊಲ್ ಯಾದವ್ ವಿಮಾನ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಪ್ರತಿಯೊಂದು ಅಂಶವನ್ನು ಕೂಲಂಕುಶವಾಗಿ ಗಮನಿಸಿ ಹೆಚ್ಚಿನ ಮುತುವರ್ಜಿ ವಹಿಸಿ ವಿಮಾನ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ರನ್ ವೇ, ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಇರಬೇಕಾದ ಬ್ಯಾಲೆನ್ಸ್ ಸೇರಿದಂತೆ ಪ್ರತಿ ಅಂಶಗಳನ್ನು ಅಮೊಲ್ ಯಾದವ್ ಸ್ವತಃ ಖುದ್ದಾಗಿ ಮಾಡಿದ್ದಾರೆ.

 

First "MADE IN INDA" Aircraft designed by Captain Amol Shivaji Yadav of Jet Airways. Shabhash! pic.twitter.com/Gat08acKo8

— CDR. BB Khilari (@bbkhilari)

ಕಲಬುರಗಿ: ಖಾಸಗಿ ವಿಮಾನ, ಏರ್‌ ಆ್ಯಂಬುಲೆನ್ಸ್‌ಗೆ ಅವಕಾಶ

ವಿಮಾನಾಯ ಸಚಿವಾಲಯದ ನಿಮಯದ ಪ್ರಕಾರವೇ ವಿಮಾನ ನಿರ್ಮಾಣ ಮಾಡಲಾಗಿದೆ. ವಿಮಾನ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಕಳೆದ ವರ್ಷ ಮೊದಲ ಹಂತದ ಪ್ರಯೋಗ ನಡೆಸಲು ಅನಮತಿ ಕೋರಲಾಗಿತ್ತು. ವಿಮಾನಯಾನ ಸಚಿವಾಲಯದ ಅನುಮತಿ ಪಡೆದು ಇದೀಗ ಮೊದಲ ಹಂತದ ಪ್ರಯೋಗ ನಡೆಸಲಾಗಿದೆ.  

 

Many congratulations to Captain Amol Yadav for the successful completion of landing & take-off test of his aircraft.
I am thankful to Hon PM ji for clearing all hurdles that came his way, encouragement & support to this youth to achieve success! pic.twitter.com/nNTeAS4ZXw

— Devendra Fadnavis (@Dev_Fadnavis)

ಪ್ರಯೋಗದ ಬಳಿಕ ಕ್ಯಾಪ್ಟನ್ ಅಮೊಲ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ. ಮೇಡ್ ಇನ್ ಇಂಡಿಯಾ ವಿಮಾನ ಇದಾಗಿದ್ದು, ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಇದೀಗ 2ನೇ ಹಂತದ ಪ್ರಯೋಗಕ್ಕೆ ಅನುಮತಿ ಕೋರಲಾಗಿದೆ ಎಂದು ಕ್ಯಾಪ್ಟನ್ ಅಮೊಲ್ ಹೇಳಿದ್ದಾರೆ.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕ್ಯಾಪ್ಟನ್ ಅಮೊಲ್ ಯಾದವ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ಮೊದಲ ಹಂತದ ಪ್ರಯೋಗ ಯಶಸ್ವಿಗೊಳಿಸಿದ ಅಮೊಲ್‌ಗೆ ಅಭಿನಂದನೆ ತಿಳಿಸಿದ್ದಾರೆ. ಇದೇ ವೇಳೆ ಕ್ಯಾಪ್ಟನ್ ಅಮೊಲ್ ಯಾದವ್ ಅನುಮತಿಗೆ ಇದ್ದ ತೊಡಕು ನಿವಾರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.

click me!