
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿಂದೆ ಪಾಕಿಸ್ತಾನದ ಕೈವಾಡದ ಜೊತೆ ಇನ್ನಾರು ಜೊತೆಯಾಗಿದ್ದಾರೋ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಹೊರ ಶತ್ರುಗಳನ್ನು ಗುರುತಿಸಬಹುದು, ಆದರೆ ಒಳಗಿರುವ ಶತ್ರುಗಳು ಅಪಾಯಕಾರಿ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಮಿತ್ರರ ರೂಪದಲ್ಲಿ ಇರುವ ಶತ್ರುಗಳು ಇಡೀ ದೇಶಕ್ಕೆ ಅಪಾಯ ಎನ್ನುವ ಮಾತು ಕೂಡ ಇದೆ. ಆದ್ದರಿಂದಲೇ ಹಿಂದೂಗಳ ಮೇಲೆ ನಡೆದಿರುವ ಈ ಬರ್ಬರ ಹತ್ಯೆಯ ಹಿಂದೆ ಇರುವ ಹಿತಶತ್ರುಗಳ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ತನಿಖೆ ಆಗಬೇಕು ಎನ್ನುವ ಕೂಗು ನಿಜವಾದ ದೇಶಭಕ್ತರಿಂದ ಇದಾಗಲೇ ಕೇಳಿಬರುತ್ತಿದೆ. ಒಂದೆಡೆ, ಉಗ್ರರ ಗುಂಡಿಗೆ ಬಲಿಯಾದ 26 ಹಿಂದೂಗಳಿಗಾಗಿ ನಿಜವಾದ ಹಿಂದೂಗಳು ಕಣ್ಣೀರು ಹಾಕುತ್ತಿದ್ದರೆ, ಉಗ್ರರ ಪರವಾಗಿಯೇ ಇರುವಂಥ ಪರೋಕ್ಷವಾಗಿರುವ ಕೆಲವು ಮಾತುಗಳು, ಸಂದೇಶಗಳು ಇದಾಗಲೇ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ನೋಡಿದರೆ, ಈ ಗಾದೆ ಮಾತು ನೆನಪಿಗೆ ಬರುವುದು ಸುಳ್ಳಲ್ಲ. ಇದೇ ಕಾರಣಕ್ಕಾಗಿಯೇ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು, ಈ ನಿಟ್ಟಿನಲ್ಲಿ ಇದಾಗಲೇ ಕಾರ್ಯಪ್ರವೃತ್ತ ಕೂಡ ಆಗಿದ್ದಾರೆ.
ಇದರ ನಡುವೆಯೇ, ಘಟನೆಗೆ ಸಂಬಂಧಿಸಿದಂತೆ ಒಂದೊಂದೇ ವಿಡಿಯೋಗಳು ಹೊರಕ್ಕೆ ಬರುತ್ತಿವೆ. ಅದರಲ್ಲಿ ಒಂದು ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗಾಗಿ ಮಿಡಿದು ಕ್ಯಾಂಡಲ್ಲೈಟ್ ಶೋಕಾಚರಣೆ ಮಾಡಿರುವ ವಿಡಿಯೋ ಹೈಲೈಟ್ ಆಗುತ್ತಿದೆ. ಈ ಘಟನೆ ಸಂಭವಿಸಿದ ಬಳಿಕ, ಕಾಶ್ಮೀರದ ಹಲವು ಮುಸ್ಲಿಮರು ಘಟನೆಯನ್ನು ಖಂಡಿಸಿದರು. ದಾಳಿ ನಡೆಯುತ್ತಿರುವ ಸಂದರ್ಭದಲ್ಲಿಯೂ ಮುಸ್ಲಿಮರು ಬಂದು ಹಿಂದೂಗಳಿಗೆ ನೆರವಾಗಿರುವ ಬಗ್ಗೆ ಇದಾಗಲೇ ಕೆಲವರು ಮಾತನಾಡಿದ್ದಾರೆ. ಉಗ್ರರಿಂದ ಬಂದೂಕು ಕಸಿದುಕೊಳ್ಳಲು ಹೋಗಿ ಓರ್ವ ಮುಸ್ಲಿಂ ವ್ಯಕ್ತಿ ಮೃತರಾಗಿದ್ದಾರೆ ಕೂಡ. ಅಷ್ಟೇ ಅಲ್ಲದೇ, ನೆತ್ತರು ಹರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಾಶ್ಮೀರದ ಮುಸ್ಲಿಮರು ಸೇರಿದಂತೆ ಹಲವರು ಮನವಿ ಸಲ್ಲಿಸಿದರು.
ಉಗ್ರರು ಸಾಯಿಸುವ ಮುನ್ನ 'ನೀವು ಹಿಂದೂನಾ' ಕೇಳಿದ್ದೇ ಸುಳ್ಳಂತೆ! ಈ ಯುವತಿ ಮಾತು ಕೇಳಿ... ಯಾರೀಕೆ?
ಇದೇ ಸಮಯದಲ್ಲಿ ಮೃತರಿಗೆ ಸಂತಾಪ ಸೂಚಿಸಲು ನಡೆದ ಕ್ಯಾಂಡಲ್ ಲೈಟ್ ಮಾರ್ಚ್ ಇದೀಗ ಕೆಲವರ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದ ಬಳಿಕ ಪಹಲ್ಗಾಮ್ ದಾಳಿ ಇಸ್ಲಾಂ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು. ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ ಮತ್ತು ಈ ದಾಳಿಯು ಕಾಶ್ಮೀರದ ಶಾಂತಿ ಮತ್ತು ಏಕತೆಯನ್ನು ಹಾಳುಮಾಡುವ ಪಿತೂರಿಯಾಗಿದೆ. ಕಾಶ್ಮೀರ ನಮ್ಮ ಸಾಮಾನ್ಯ ಮನೆ ಮತ್ತು ಅದನ್ನು ಭಯೋತ್ಪಾದಕರ ಕೈಗೆ ಬೀಳಲು ನಾವು ಬಿಡುವುದಿಲ್ಲ ಎನ್ನಲಾಗಿತ್ತು. ಆದರೆ ಕ್ಯಾಂಡಲ್ಲೈಟ್ ಮಾರ್ಚ್ ವೇಳೆ, ಮುಂದಿರುವ ಓರ್ವ ವ್ಯಕ್ತಿ ಘಟನೆಯನ್ನು ಖಂಡಿಸುತ್ತಿದ್ದರೆ, ಹಿಂದಿದ್ದ ಕೆಲವರು ನಗುತ್ತಿರುವುದು ಕಂಡು ಬಂದಿದೆ. ಈ ವ್ಯಕ್ತಿಗಳ ಮುಖವನ್ನು ಗುರುತಿಸಿ, ಅವರು ಪ್ರತಿಭಟನೆಯ ಬದಲು ಈ ಘಟನೆಯನ್ನು ಎಂಜಾಯ್ ಮಾಡುತ್ತಿದ್ದರು ಎನ್ನುವಂಥ ಪೋಸ್ಟ್ಗಳು ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಪೋಸ್ಟ್ಗೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ. ಕಾಶ್ಮೀರದಲ್ಲಿರುವ ಕೆಲವು ಮುಸ್ಲಿಮರು ಹಿಂದೂಗಳ ಪ್ರಾಣ ಕಾಪಾಡಿದ್ದಾರೆ ಎನ್ನುವುದು ಸುಳ್ಳಲ್ಲ ಎಂದು ಕಮೆಂಟ್ ಮಾಡುತ್ತಿದ್ದರೆ, ಯಾವ ಹುತ್ತದಲ್ಲಿ ಯಾವ ಹಾವು ಇದೆ ಎಂದು ಹೇಳುವುದು ಕಷ್ಟ, ಮುಂದೆ ಒಂದು ರೀತಿ ಕಾಣಿಸುತ್ತಿದ್ದರೆ, ಹಿಂದೆ ಏನೇನೋ ಆಗುತ್ತಿದೆ ಎಂದು ಊಹಿಸುವುದೂ ಕಷ್ಟ ಎಂದು ಮತ್ತೆ ಕೆಲವರು ಕಮೆಂಟ್ ಹಾಕುತ್ತಿದ್ದಾರೆ. ಮಗುವನ್ನು ಚಿವುಟಿ ತೂಗುವ ಗಾದೆ ಮಾತು ಕೇಳಿರಬೇಕಲ್ಲವೇ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕ್ಯಾಂಡಲ್ಲೈಟ್ ಮಾರ್ಚ್ನಲ್ಲಿಯೂ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸುತ್ತಿದೆ!
Pahalgam Terror Attack: ಕಾಶ್ಮೀರದಲ್ಲಿ ಉಗ್ರರ ಕೃತ್ಯದ ಮುನ್ನ ಪ್ರವಾಸಿಗನೊಬ್ಬ ಮಾಡಿರುವ ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ