ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ!

Published : Dec 05, 2020, 12:57 PM IST
ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ!

ಸಾರಾಂಶ

ರೈತ ಹೋರಾಟ ಬೆಂಬಲಿಸಿದ ಕೆನಡಾಕ್ಕೆ ಭಾರತದ ಎಚ್ಚರಿಕೆ| ಕೃಷಿ ಕಾಯ್ದೆಗಳ ವಿರುದ್ಧದ ರೈತರ ಹೋರಾಟ ಆಂತರಿಕ ವಿಚಾರ| ಈ ವಿಚಾರದಲ್ಲಿ ಬಾಹ್ಯ ರಾಷ್ಟ್ರಗಳ ಹಸ್ತಕ್ಷೇಪ ಸಹಿಸಲಾಗಲ್ಲ| ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಭಾರತ ಸರ್ಕಾರದ ಸಂದೇಶ

ನವದೆಹಲಿ(ಡಿ.05): ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆಗಿಳಿದ ಭಾರತೀಯ ರೈತರ ಪರ ಮಾತನಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ ಅವರ ನಡವಳಿಕೆ ಉಭಯ ದೇಶಗಳ ನಡುವಿನ ಬಾಂಧವ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಭಾರತ ಎಚ್ಚರಿಸಿದೆ. ಟ್ರೂಡೋ ಹೇಳಿಕೆ ಸಂಬಂಧ, ಭಾರತದಲ್ಲಿನ ಕೆನಡಾ ರಾಯಭಾರಿಯನ್ನು ಕರೆಸಿಕೊಂಡಿದ್ದ ವಿದೇಶಾಂಗ ಸಚಿವಾಲಯ ಇಂಥದ್ದೊಂದು ಸಂದೇಶ ರವಾನಿಸಿದೆ.

ಪಟ್ಟು ಬಿಡದ ರೈತರು, ಕೃಷಿ ಕಾಯ್ದೆ ಪೂರ್ಣ ರದ್ದಿಗೆ ರೈತ ಸಂಘಟನೆಗಳ ಪಟ್ಟು!

ಕೆನಡಾ ದೇಶದ ಸಚಿವರು, ಸಂಸದರು ಸೇರಿ ಇನ್ನಿತರ ಮುಖಂಡರ ಹೇಳಿಕೆಗಳು ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಬಳಿ ಉಗ್ರಗಾಮಿ ಚಟುವಟಿಕೆಗಳನ್ನು ಪ್ರಚೋದಿಸುತ್ತವೆ. ಇದರಿಂದ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆ ಮತ್ತು ಸುರಕ್ಷತೆ ಪ್ರಶ್ನೆಗಳು ಉದ್ಭವಿಸಿವೆ. ಹೀಗಾಗಿ ಕೆನಡಾ ಸರ್ಕಾರ ಇಂಥ ಹೇಳಿಕೆಗಳಿಂದ ದೂರವಿರಬೇಕು. ಜೊತೆಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಕಚೇರಿಗಳಿಗೆ ಪೂರ್ಣ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದೆ.

ರೈತರ ಮೇಲೆ ಪ್ರಹಾರ: ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್‌ ಪಡೆದ ಶಾಸಕ!

ಕೇಂದ್ರ ಸರ್ಕಾರ ಜಾರಿಗೆ ನಿರ್ಧರಿಸಿರುವ ವಿವಾದಿತ 3 ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಕೈಗೊಂಡಿದ್ದ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೋ, ಶಾಂತಿಯುತ ಪ್ರತಿಭಟನೆಗಳ ಹಕ್ಕುಗಳನ್ನು ಕೆನಡಾ ಸರ್ಕಾರ ಸದಾ ಬೆಂಬಲಿಸಲಿದೆ. ಜೊತೆಗೆ ಭಾರತದಲ್ಲಿ ರೈತರ ಸ್ಥಿತಿ ಬಗ್ಗೆ ಕಳವಳಕಾರಿಯಾಗಿದೆ ಎಂದು ಹೇಳಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ