Latest Videos

ಭಾರತದ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರಾಗಿದ್ದೇಕೆ? ಸಚಿವ ಜೈಶಂಕರ್ ಜೊತೆ ವಿಶೇಷ ಸಂದರ್ಶನ!

By Suvarna NewsFirst Published Sep 17, 2023, 11:16 PM IST
Highlights

ಚೀನಾದ ಗೈರು, ಕೆನಾಡದಲ್ಲಿನ ಖಲಿಸ್ತಾನಿ ಹೋರಾಟ ಹಾಗೂ ದ್ವಪಕ್ಷೀಯ ಸಂಬಂಧದ ಮೇಲೆ ಬೀರುತ್ತಿರುವ ಪರಿಣಾಮ ಸೇರಿದಂತೆ ಹಲವು ವಿಚಾರಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಬೆಳಕು ಚೆಲ್ಲಿದ್ದಾರೆ. ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.
 

ತಿರುವನಂತಪುರಂ(ಸೆ.17) ಭಾರತದ ಜಿ20 ಶೃಂಗಸಭೆಯನ್ನು ಮಹತ್ವಪೂರ್ಣವಾಗಿ ಆಯೋಜಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗಿರುವುದು ಹಲವು ಚರ್ಚೆಗೆ ಕಾರಣವಾಗಿತ್ತು. ಇತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೈರು ಕೂಡ ಚರ್ಚೆಯಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಹಲವು ವರದಿಗಳ ಪ್ರಕಟಗೊಂಡಿದೆ. ಆದರೆ ಇದರ ಹಿಂದಿನ ಪ್ರಮುಖ ಕಾರಣವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿವರಿಸಿದ್ದಾರೆ. ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಎಸ್ ಜೈಂಶಕರ್ ಮಾತುಗಳ ವಿವರ ಇಲ್ಲಿದೆ. 

ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗಿದ್ದು ಯಾಕೆ ಅನ್ನೋ ಕುರಿತು ಮಾಧ್ಯಮ ಸೇರಿದಂತೆ ಹಲವೆಡೆ ಚರ್ಚೆಯಾಗಿದೆ. ಗಡಿಯಲ್ಲಿ ಭಾರತದ ಜೊತೆಗಿನ ಗುದ್ದಾಟ ಸೇರಿದಂತೆ ಹಲವು ಕಾರಣಗಳು ಚರ್ಚೆಯಾಗುತ್ತಿದೆ. ಆದರೆ ಈ ಕುರಿತ ಪ್ರಶ್ನೆಗೆ ವಿದೇಶಾಂಗ ಸಚಿವ ಜೈಶಂಕರ್ ಉತ್ತರಿಸಿದ್ದಾರೆ. ಚೀನಾ ತನ್ನ ಪ್ರತಿನಿಧಿಯನ್ನು ಕಳುಹಿಸಿದೆ. ಕ್ಸಿ ಜಿನ್‌ಪಿಂಗ್ ಗೈರಾಗಿರುವುದಕ್ಕೆ ಹಲವು ಕಾರಣಗಳಿವೆ. ಪ್ರತಿಯೊಬ್ಬರು ಅವರವರ ಭಾವಕ್ಕೆ ಯೋಚಿಸಿ ನಿರ್ಧಾರಕ್ಕೆ ಬರಬಹುದು. ಭಾರತದ ಜೊತೆಗಿನ ಮನಸ್ತಾಪ, ಗಡಿ ಗಲಾಟೆ, ರಷ್ಯಾ ವಿರುದ್ಧದ ಗುದ್ದಾಟ ಸೇರಿದಂತೆ ಹಲವು ಕಾರಣಗಳನ್ನು ನೀವು ಊಹಿಸಬಹುದು ಎಂದಿದ್ದಾರೆ. 

ಜಿ20 ಶೃಂಗಸಭೆ ಮೂಲಕ ಭಾರತ ಸಾಧಿಸಿದ್ದೇನು? ವಿದೇಶಾಂಗ ಸಚಿವ ಜೈಶಂಕರ್ ಜೊತೆ ಸಂದರ್ಶನ!

ಜಾಗತಿಕ ಆರ್ಥಿಕತೆಯಲ್ಲಿ ಇದ್ದ ಅಸಮಾನತ ಇದೀಗ ನಿರ್ಮೂಲಗೊಳ್ಳುತ್ತಿದೆ. ಈ ಹಿಂದೆ ಚೀನಾ ಉತ್ಪನ್ನಗಳು, ಚೀನಾ ಸಂಪನ್ಮೂಲವೇ ಜಗತ್ತಿನ ಪ್ರಮುಖ ದೇಶಗಳಲ್ಲಿ ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿತ್ತು. ಆದರೆ ಇದೀಗ ಇತರ ದೇಶಗಳ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸುತ್ತಿದೆ. ಚೀನಾದ ಮಾರುಕಟ್ಟೆ ಆತಂಕದ ವಾತಾವರಣ ಎದುರಿಸುತ್ತಿದ್ದಂತೆ ಹಲವು ಕಂಪನಿಗಳು ಪಲಾಯನ ಮಾಡಿತು. ಇದರ ಬೆನ್ನಲ್ಲೇ ಕೋವಿಡ್ ಮಹಾಮಾರಿ ವಕ್ಕರಿಸಿತ್ತು. ಈ ವೇಲೆ ಚೀನಾ ವಿರುದ್ದ ಹಲವು ದೇಶಗಳು ನಿಂತಿತ್ತು. ಭಾರತ ಲಸಿಕೆ ಅಭಿವೃದ್ಧಿಪಡಿಸಿ ಹಲವು ದೇಶಗಳಿಗೆ ನೀಡಿತ್ತು. ಇದಾದ ಬೆನ್ನಲ್ಲೇ ರಷ್ಯಾ ಉಕ್ರೇನ್ ಯುದ್ಧ ಮುನ್ನಲೆಗೆ ಬಂದಿತ್ತು. ಈ ವೇಳೆ ಇಂಧನ ಬೆಲೆ ಏರಿಕೆ, ಆಹಾರ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಜಾಗತಿಕ ಸವಾಲು ಎದುರಾಯಿತು. ಇದೀಗ 80-90ರ ದಶಕದ ಕತೆಗಳನ್ನೇ ಹೇಳಿ ಅದೇ ಸಂಪ್ರದಾಯ ಈಗಲೂ ಮುಂದುವರಿಯಬೇಕು ಅನ್ನೋದು ಮೊಂಡುತನ. ಇದೀಗ ಜಗತ್ತು ಬದಲಾಗಿದೆ. ಜಾಗತೀಕರಣದಿಂದ ಪ್ರತಿ ದೇಶಗಳು ತಮ್ಮ ಸಾಮರ್ಥ್ಯದ ಮೇಲೆ ನಿಲ್ಲುತ್ತಿದೆ. ಪಾಶ್ಟಿಮಾತ್ಯ ದೇಶಗಳ ಸರಕುಗಳನ್ನೇ ಖರೀದಿಸಬೇಕು, ಅವುಗಳನ್ನೇ ಬಳಸಬೇಕು ಅನ್ನೋ ಪರಿಸ್ಥಿತಿ ಹಲವು ದೇಶಕ್ಕಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತದ ಉತ್ಪಾದನೆ, ರಫ್ತು ಎಲ್ಲವೂ ಬಲಿಷ್ಠಗೊಂಡಿದೆ. ಭಾರತದ ದ್ವಿಚಕ್ರವಾಹನ ಲ್ಯಾಟಿನ್ ಅಮೆರಿಕದಲ್ಲಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಭಾರತದ ಕಾರು ಮೆಕ್ಸಿಕೋ, ಕೊಲಂಬಿಯಾ ದೇಶದಲ್ಲಿ ಮುಂಚೂಣಿಯಲ್ಲಿ ಮಾರಾಟವಾಗುತ್ತಿದೆ. ನಮ್ಮ ಕೃಷಿ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತಿದೆ. ಭಾರತಕ್ಕೆ ಸಂಪೂರ್ಣ ಲಸಿಕೆ ನೀಡಿ ವಿದೇಶಕ್ಕೂ ನೀಡಿದ್ದೇವೆ. ಚಂದ್ರಯಾನ3ರ ಮೂಲಕ ಚಂದ್ರನ ಮೇಲೆ ಕಾಲಿಟ್ಟಿದ್ದೇವೆ. ಈ ಮೂಲಕ ಭಾರತ ಗ್ಲೋಬಲ್ ಸೌತ್ ಧ್ವನಿ ಗಟ್ಟಿಗೊಳಿಸಿದೆ. ಭಾರತ ಆತ್ಮನಿರ್ಭತೆ ಸಾಧಿಸಿದೆ. ಆಫ್ರಿಕಾ ದೇಶಗಳಿಗೆ ಭಾರತ ನೆರವು ನೀಡಿದೆ. ಭಾರತದ ಜೊತೆಗೆ ಆಫ್ರಿಕಾ ದೇಶಗಳು ನಿಂತಿದೆ. ನಮ್ಮ ಚಂದ್ರಯಾನವನ್ನು ಆಫ್ರಿಕಾ ದೇಶಗಳು ಹೆಮ್ಮೆಪಟ್ಟಿದೆ. ಹಲವು ದೇಶಗಳು ಭಾರತದ ಜೊತೆಗೆ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತದೆ. 

ಈ ಬಾರಿ ಜಿ20 ಶ್ರೀಸಾಮಾನ್ಯರ ಶೃಂಗಸಭೆ -ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್

ಎಕಾನಮಿ ಕಾರಿಡಾರ್ ಯೋಜನೆಯಲ್ಲಿ ಭಾರತ ಅತ್ಯಂತ ಯಶಸ್ಸು ಸಾಧಿಸಿದೆ ಯೋರೂಪ್ ಕಾರಿಡಾರ್ ಯೋಜನೆ ಮೂಲಕ ಚೀನಾಗೆ ಸೆಡ್ಡು ಹೊಡೆಯಲಾಗಿದೆ ಅನ್ನೋ ಮಾತುಗಳ ಕುರಿತು ಜೈಶಂಕರ್ ಮಾತನಾಡಿದ್ದಾರೆ. ಇದು ಅತೀ ದೊಡ್ಡ ಕಾರಿಡಾರ್.  ಈ ಯೋಜನೆಯಡಿ ಬರುವ ದೇಶಗಳ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡೆ ಕೆಲಸ ಸಾಗಲಿದೆ. ಜಾಗಿತಕ ಮಾರುಕಟ್ಟೆಗೆ ತೆರೆದುಕೊಳ್ಳಲು ಈ ಕಾರಿಡಾರ್ ಯೋಜನೆ ಪ್ರಮುಖ ಪಾತ್ರನಿರ್ವಹಸಲಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಕೆನಡಾ ಜೊತೆ ಭಾರತ ಉತ್ತಮ ಸಂಬಂಧ ಬಯಸುತ್ತದೆ. ಆದರೆ ಸಮಸ್ಯೆ ಇರುವುದು ಕೆನಡಾ ದೇಶದ ರಾಜಕೀಯ ಉದ್ದೇಶಕ್ಕಾಗಿ ಖಲಿಸ್ತಾನ ಹೋರಾಟಕ್ಕೆ ಬೆಂಬಲ ನೀಡುವುದು ಸಮಸ್ಯೆಗೆ ಮೂಲವಾಗಿದೆ. ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ಇಂದು ಕೆನಡಾ ಪ್ರತಿಭಟನೆ ಅಥವಾ ರಾಜಕೀಯ ಉದ್ದೇಶಕ್ಕಾಗಿ ಬೆಂಬಲ ನೀಡಿದರೆ ನಾಳೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜೈಶಂಕರ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
 

click me!