Asianet Suvarna News Asianet Suvarna News

ಈ ಬಾರಿ ಜಿ20 ಶ್ರೀಸಾಮಾನ್ಯರ ಶೃಂಗಸಭೆ -ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್

ಜಿ-20 ಶೃಂಗಸಭೆ ಕೇವಲ ಸರ್ಕಾರದ ಉನ್ನತ ಶ್ರೇಣಿಯ ಗಣ್ಯರು ಮತ್ತು ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಭಾರತದ ಜಿ-20 ಶೃಂಗಸಭೆ ನಿಜವಾಗಿಯೂ ಸಾಮಾನ್ಯ ಜನರ ಜಿ-20 ಶೃಂಗಸಭೆಯಾಗಿ ಹೊರಹೊಮ್ಮಿದೆ.

G20 Summit 2023 special column by External Affairs Minister Jaishankar rav
Author
First Published Sep 9, 2023, 10:48 AM IST

- ಜೈಶಂಕರ್‌ ಲೇಖನ

ವಿದೇಶಾಂಗ ವ್ಯವಹಾರಗಳ ಸಚಿವ

ಭಾರತದ ಜಿ20 ಅಧ್ಯಕ್ಷತೆಯು ವಿಭಿನ್ನ ರೀತಿಯಲ್ಲಿ ವಿಶಿಷ್ಟವಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಆದ್ಯತೆಗಳು ಮತ್ತು ಕಾಳಜಿಗಳ ಮೇಲೆ ಇದು ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಗ್ಲೋಬಲ್‌ ಸೌತ್‌ ರಾಷ್ಟ್ರಗಳ ಧ್ವನಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಹವಾಮಾನ ಬದಲಾವಣೆಯ ಕ್ರಮಗಳು, ಹಣಕಾಸು, ಇಂಧನ ಪರಿವರ್ತನೆ, ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನ ಮತ್ತು ತಾಂತ್ರಿಕ ರೂಪಾಂತರದಂತಹ ಕ್ಷೇತ್ರಗಳಲ್ಲಿನ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಿದೆ. ಭಾರತದ ಜಿ-20 ಅಧ್ಯಕ್ಷತೆ ಅಸಾಧಾರಣವಾಗಿರುವುದಕ್ಕೆ ಮತ್ತೊಂದು ಕಾರಣ ಎಂದರೆ, ವಿವಿಧ ಜಿ-20 ಸಂಬಂಧಿತ ಸಮಾವೇಶಗಳು ಮತ್ತು ಚಟುವಟಿಕೆಗಳಲ್ಲಿ ರಾಷ್ಟಾ್ರದ್ಯಂತ ಜನರ ವ್ಯಾಪಕ ಭಾಗವಹಿಸುವಿಕೆ ಅಥವಾ ‘ಜನ್‌ ಭಾಗೀದಾರಿ’ ನಡೆದದ್ದಾಗಿದೆ. ಜಿ-20 ಶೃಂಗಸಭೆ ಕೇವಲ ಸರ್ಕಾರದ ಉನ್ನತ ಶ್ರೇಣಿಯ ಗಣ್ಯರು ಮತ್ತು ಅಧಿಕಾರಿಗಳಿಗೆ ಸೀಮಿತವಾಗಿಲ್ಲ. ಬದಲಿಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಭಾರತದ ಜಿ-20 ಶೃಂಗಸಭೆ ನಿಜವಾಗಿಯೂ ಸಾಮಾನ್ಯ ಜನರ ಜಿ-20 ಶೃಂಗಸಭೆಯಾಗಿ ಹೊರಹೊಮ್ಮಿದೆ.

60 ನಗರ 220 ಸಭೆಗಳು

ದೇಶದ 60 ನಗರಗಳ ವ್ಯಾಪ್ತಿಯಲ್ಲಿ ಸರಿಸುಮಾರು 220 ಸಭೆಗಳು ನಡೆದಿವೆ. ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಪ್ರತಿನಿಧಿಗಳು, 1 ಲಕ್ಷಕ್ಕಿಂತ ಹೆಚ್ಚಿನ ಜನ ರಾಷ್ಟ್ರದ ಮೂಲೆಮೂಲೆಗಳಿಂದ ಬಂದು ಭಾಗಿಯಾಗಿದ್ದಾರೆ. ಜನರ ಈ ಸಕ್ರಿಯ ಭಾಗವಹಿಸುವಿಕೆಯನ್ನು ವಿವಿಧ ಸಚಿವಾಲಯಗಳು ಶ್ರದ್ಧೆಯಿಂದ ಉತ್ತೇಜಿಸಿದವು. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯ ಒಳಗೊಂಡಂತೆ ವಿವಿಧ ಪಾಲುದಾರರು ಅಪಾರ ಉತ್ಸಾಹದಿಂದ ತೊಡಗಿಸಿಕೊಳ್ಳಲು ಶಿಕ್ಷಣ ಸಚಿವಾಲಯವು ಜನ್‌ ಭಾಗೀದಾರಿ ಕಾರ್ಯಕ್ರಮಗಳನ್ನು ಆಯೋಜಿಸಿತು. ಶಾಲೆ, ಪಂಚಾಯತ್‌, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾದ ಈ ಎಲ್ಲಾ ಕಾರ್ಯಕ್ರಮಗಳು ಜಿ-20, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅಡಿಪಾಯದ ಕಲಿಕೆ ಮತ್ತು ಸಂಖ್ಯಾಶಾಸ್ತ್ರದ ಬಗ್ಗೆ ಅರಿವು ಮೂಡಿಸಿದವು. ಇವು ಭಾರತದ ಅಧ್ಯಕ್ಷತೆಯ ಕೇಂದ್ರ ಆದ್ಯತೆಗಳಾದವು. ಈ ಎಲ್ಲಾ ಕಾರ್ಯಕ್ರಮಗಳು 15.7 ಕೋಟಿ ವಿದ್ಯಾರ್ಥಿಗಳು, 25.5 ಲಕ್ಷ ಶಿಕ್ಷಕರು ಮತ್ತು 51.1 ಲಕ್ಷ ಸಮುದಾಯದ ಸದಸ್ಯರು ಒಳಗೊಂಡಂತೆ ಒಟ್ಟಾರೆ 23.3 ಕೋಟಿ ಜನರನ್ನು ಆಕರ್ಷಿಸಿತು.

ಆದರೂ, ‘ಜನ್‌ ಭಾಗಿದಾರಿ’ ಎಂಬ ಪರಿಕಲ್ಪನೆಯು ಜನ ಭಾಗವಹಿಸುವಿಕೆ ಸಂಖ್ಯೆಯನ್ನು ಮೀರಿ ವಿಸ್ತರಿಸಿದೆ. ಜಿ20 ವಿಶ್ವವಿದ್ಯಾಲಯ ಸಂಪರ್ಕಿತ ಉಪನ್ಯಾಸ ಸರಣಿಯಿಂದ ಹಿಡಿದು ಸಂವಾದಾತ್ಮಕ ಮಾದರಿ ಜಿ-20 ಸಭೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಜಿ-20 ಕಲಾಪಗಳು, ಪ್ರಮುಖ ಉತ್ಸವಗಳಲ್ಲಿ ಜಿ-20 ಪ್ರಾಂಗಣಗಳು(ಪೆವಿಲಿಯನ್‌ಗಳು), ರಸಪ್ರಶ್ನೆ ಸ್ಪರ್ಧೆಗಳು, ಸೆಲ್ಫಿ ಸ್ಪರ್ಧೆಗಳು ಮತ್ತು ಆಕರ್ಷಕವಾದ ಜಿ20 ಇಂಡಿಯಾ ಕಥೆಗಳವರೆಗೆ ಈ ಭಾಗವಹಿಸುವಿಕೆ ವಿಸ್ತಾರವಾಗಿದೆ. ನವೀನ ವಿಧಾನಗಳ ಮೂಲಕ ಸಾರ್ವಜನಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಲಾಯಿತು. ಗಮನಾರ್ಹವಾಗಿ, ಜಿ-20 ಮೂಲಸೌಕರ್ಯ ಕಾರ್ಯಕಾರಿ ಗುಂಪು ರಾಷ್ಟ್ರೀಯ ಯುವ ದಿನದಂದು ಜಿ-20 ಸೈಕ್ಲಾಥಾನ್‌ ಮತ್ತು ಮೋಟರ್‌ ಬೈಕ್‌ ರಾರ‍ಯಲಿ ನಡೆಸಿತು.

ಭಾರತದಲ್ಲಿ ಮೊದಲ ಬಾರಿಗೆ ಇಂದಿನಿಂದ ಜಿ20 ಶೃಂಗ: ಐತಿಹಾಸಿಕ ಶೃಂಗಸಭೆಯ ನಿರೀಕ್ಷೆಗಳು ಹೀಗಿದೆ..

ಪ್ಯಾನ್‌ ನ್ಯಾಷನಲ್‌ ಅನುಭವ

ಇದಲ್ಲದೆ, ಭಾರತದ ಜಿ-20 ಅಧ್ಯಕ್ಷತೆಯು ರಾಷ್ಟ್ರದ ವಿಭಿನ್ನ ಮಾದರಿಯ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ತೋರಿಸಿದೆ. ಜಿ-20 ಪ್ರತಿನಿಧಿಗಳನ್ನು ಸ್ವಾಗತಿಸಲು, ಸ್ಥಳೀಯ ಮತ್ತು ಪ್ರಾದೇಶಿಕ ಉತ್ಸಾಹವನ್ನು ಹುಟ್ಟುಹಾಕಲು, ತಮ್ಮ ಸಂಪ್ರದಾಯಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಸ್ಪರ ಭಾಗಿಯಾಗುವ ಮೂಲಕ ಶ್ರಮಿಸಿವೆ. ಕೆಲವು ಉದಾಹರಣೆಗಳೆಂದರೆ, ಮಣಿಪುರದ ಲೋಕ್ಟಾಕ್‌ ಸರೋವರದ ಮರುಸ್ಥಾಪನೆ, ಮುಂಬೈನಲ್ಲಿ ನಗರ ನೈರ್ಮಲ್ಯ ಅಭಿಯಾನಗಳು ಅಥವಾ ಲಖನೌನಲ್ಲಿ ಮೂಲಸೌಕರ್ಯ ಹೆಚ್ಚಳಗಳು, ಈ ರೀತಿಯ ಸ್ಥಳೀಯ ಸಾಂಸ್ಕೃತಿಕ ಪರಂಪರೆಗಳು ಮತ್ತು ಕುಶಲಕರ್ಮಿ ಕೌಶಲ್ಯಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೇ ಇದು ವೈವಿಧ್ಯಮಯವಾದ ಹಲವು ಸಮುದಾಯಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಿದೆ. ಅನೇಕ ಪ್ರತಿನಿಧಿಗಳು ‘ಒಂದು ಜಿಲ್ಲೆ ಒಂದು ಉತ್ಪನ್ನ’ (ಒಡಿಒಪಿ) ಉಪಕ್ರಮಗಳನ್ನು ಕಣ್ಣಾರೆ ಕಂಡರು. ಸ್ವತಃ ಕುಶಲಕರ್ಮಿ ಕೇಂದ್ರಗಳಿಗೆ ಭೇಟಿ ನೀಡಲು ಸಾಧ್ಯವಾಯಿತು. ಇದಲ್ಲದೆ, ಇದು ಭಾರತದ ಆಕರ್ಷಕ ನೈಸರ್ಗಿಕ ಭೂ ಸ್ವರೂಪಗಳು ಮತ್ತು ವಾಸ್ತುಶಿಲ್ಪದ ವೈಭವವನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಿತು. ಇದು ಕೋವಿಡ್‌ ನಂತರದ ಪ್ರವಾಸೋದ್ಯಮಕ್ಕೆ ಪುನರುಜ್ಜೀವನ ನೀಡಿತು. ವಾಸ್ತವವಾಗಿ, ದೇಶಾದ್ಯಂತ ಜಿ-20 ಕಾರ್ಯಕ್ರಮವನ್ನು ಜಾರಿಗೊಳಿಸಿದ ವಿಧಾನದಿಂದಾಗಿ ಸಿಕ್ಕಿರುವ ಆರ್ಥಿಕ ಪ್ರಯೋಜನಗಳ ವ್ಯಾಪ್ತಿ ಇನ್ನೂ ವಿಸ್ತರಿಸಿಕೊಳ್ಳುತ್ತಲೇ ಇದೆ. ರಾಷ್ಟಾ್ರದ್ಯಂತ ಜಿ-20 ಅನ್ನು ಆಚರಿಸುವ ಮೂಲಕ, ನಾವು ಭಾರತ ಮತ್ತು ಜಗತ್ತು ಎರಡಕ್ಕೂ ಪ್ರಯೋಜನಕಾರಿಯಾದ ಪ್ಯಾನ್‌-ನ್ಯಾಷನಲ… ಅನುಭವವನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಒಟ್ಟಾರೆಯಾಗಿ, ಭಾರತವನ್ನು ವಿಶ್ವಕ್ಕೆ ಹಾಗೂ ವಿಶ್ವವನ್ನು ಭಾರತಕ್ಕೆ ಪರಿಚಯ ಮಾಡಲು ಸಹಾಯ ಮಾಡಿದೆ ಎಂದು ಹೇಳಬಹುದು.

ಜಾಗತಿಕ ಸಮಸ್ಯೆ ಪರಿಹಾರಕ್ಕೆ ಕೊಡುಗೆ

ಜಾಗತಿಕ ಸಮಸ್ಯೆಗಳ ಬಗ್ಗೆ ಸಾಮಾಜಿಕ ಆಸಕ್ತಿ ಮತ್ತು ಬದ್ಧತೆಯನ್ನು ಸೃಷ್ಟಿಸಲು ವಿವಿಧ ಕಾರ್ಯಕಾರಿ ಗುಂಪುಗಳು ಮತ್ತು ಎಂಗೇಜ್‌ಮೆಂಟ್‌ ಗುಂಪುಗಳು ಪ್ರಬಲ ವೇದಿಕೆಯಾಗಿ ಕೆಲಸ ಮಾಡಿವೆ. ವಿಜ್ಞಾನದಲ್ಲಿ ನಾವು ಎದುರಿಸುತ್ತಿರುವ ಪ್ರಮುಖ ಸವಾಲುಗಳ ಕುರಿತು ಸಹಕಾರಿ ಚಿಂತನೆಗೆ ಅವು ಭಾರಿ ಕೊಡುಗೆ ನೀಡಿವೆ. ಅಂತೆಯೇ, ಕಾರ್ಮಿಕ ವಿಷಯದಲ್ಲಿ ಪರಸ್ಪರ ಪ್ರಯೋಜನ ಹೊಂದಲು ಅನುಭವಗಳ ವಿನಿಮಯಕ್ಕೆ ಈ ವೇದಿಕೆ ಅವಕಾಶಗಳನ್ನು ಕಲ್ಪಿಸಿತು. ಯೂತ್‌-20 ವಿಶೇಷವಾಗಿ ಹೆಚ್ಚು ಪ್ರಭಾವಶಾಲಿಯಾಗಿತ್ತು ಮತ್ತು ‘ಜನ್‌ ಭಾಗೀದಾರಿ’ ವಿಧಾನವು ಸಂಪನ್ನವಾಗಿದೆ ಎಂಬುದಕ್ಕೆ ಇದು ಬಲವಾದ ಉದಾಹರಣೆಯಾಗಿದೆ. 1,563 ಸಭೆಗಳಲ್ಲಿ 1,25,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದು ಅಧ್ಯಕ್ಷತೆಗೆ ನೈಜ ಶಕ್ತಿ ತುಂಬಿದೆ. ಸಿವಿಲ…-20 ಸಭೆಯೊಂದೇ ವಿಶ್ವಾದ್ಯಂತ 45 ಲಕ್ಷ ಜನರನ್ನು ಮುಟ್ಟಿದೆ. ಜಿ20 ಸಭೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಸಾಮಾಜಿಕ ಮಾಧ್ಯಮಗಳು ಹೆಚ್ಚಿನ ಉತ್ತೇಜನ ನೀಡಿದವು. ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮದಲ್ಲಿ 14 ಟ್ರಿಲಿಯನ್‌ ಅನಿಸಿಕೆಗಳು ಮೂಡಿದವು.

ವಾರಾಣಸಿಯಲ್ಲಿ ನಡೆದ ಜಿ-20 ರಸಪ್ರಶ್ನೆ ಸ್ಪರ್ಧೆಯಲ್ಲಿ 800 ಶಾಲೆಗಳ 1.25 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗಿರುವುದು ಹಾಗೂ ಅದೇ ಸಮಯದಲ್ಲಿ 450 ಲಂಬಾಣಿ ಕುಶಲಕರ್ಮಿಗಳು ಸುಮಾರು 1,800 ಅನನ್ಯ ಕಲಾಕೃತಿಗಳ ಅದ್ಭುತ ಸಂಗ್ರಹವನ್ನು ತಯಾರಿಸುವ ಮೂಲಕ ತಮ್ಮ ಕೌಶಲ್ಯ ಮತ್ತು ಕರಕುಶಲತೆಯನ್ನು ಪ್ರದರ್ಶಿಸುವ ಮೂಲಕ 2 ವಿಶ್ವ ದಾಖಲೆಗಳನ್ನು ನಿರ್ಮಿಸಲಾಗಿದೆ.

G20 Summit: ಬಲಾಢ್ಯ ನಾಯಕರ ಆಗಮನ.. ದೆಹಲಿಯಲ್ಲಿ ಬಿಗಿ ಬಂದೋಬಸ್ತ್

ಎಲ್ಲರನ್ನು ಒಳಗೊಳ್ಳುವ ಭವಿಷ್ಯದ ಪರಿಕಲ್ಪನೆ

ಎಲ್ಲರನ್ನೂ ಒಳಗೊಳ್ಳುವ ಭವಿಷ್ಯಕ್ಕಾಗಿ ನಿರ್ಣಾಯಕ ವಿಷಯಗಳ ಸುತ್ತಾ ವಿಶಾಲ ತಳಹದಿಯ ಮೇಲೆ ಚರ್ಚೆ ಮತ್ತು ಸಂವಾದಗಳನ್ನು ನಡೆಸುವುದಕ್ಕೆ ಭಾರತದ ಅಧ್ಯಕ್ಷತೆಯು ಸಾಕ್ಷಿಯಾಗಿದೆ. ಅವುಗಳಲ್ಲಿ ಪ್ರಮುಖವಾದವೆಂದರೆ, ಸಮಾಜದಿಂದ ಖರೀದಿ. ಇದು ಜಗತ್ತಿಗೆ ಒಂದು ಒಳ್ಳೆಯ ಸಂದೇಶವನ್ನು ರವಾನೆ ಮಾಡಿದೆ. ಅದೇ ರೀತಿ, ಡಿಜಿಟಲ… ವಿತರಣೆಯ ಪ್ರಚಾರವು ನಮ್ಮ ನಿಯಮಿತ ವಹಿವಾಟುಗಳಲ್ಲಿ ಡಿಜಿಟಲ… ಸೌಕರ್ಯ ಅಭಿವೃದ್ಧಿಪಡಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಮೇಲಿನ ಗಮನವು, ಸಾಮಾಜಿಕ ಪ್ರಗತಿಯಲ್ಲಿ ಅವರು ವಹಿಸುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಅಭ್ಯುದಯಕ್ಕೆ ಅದರ ತಿರುಳಿನ ಬಗ್ಗೆ ಹೆಚ್ಚಿನ ಅರಿವು ಇದ್ದಾಗ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಒತ್ತು ಕೂಡ ವೇಗಗೊಳ್ಳುತ್ತದೆ.

ಭಾರತ ವಿರೋಧಿ ಸಂಸದನ ಜೊತೆ ರಾಹುಲ್‌ ವಿವಾದ, ಚೀನಾ ಬಗ್ಗೆ ಹೊಗಳಿಕೆ ಮೋದಿಯ ತೆಗಳಿಕೆ

‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಜಿ-20 ಅಧ್ಯಕ್ಷತೆಯನ್ನು ‘ಸಾಮಾನ್ಯ ಜನರ ಅಧ್ಯಕ್ಷತೆ’ ಎಂದು ಬಣ್ಣಿಸಿದರು. ಇದು ಒಂದು ವಿವರಣೆ ಮತ್ತು ಪ್ರೇರಣೆ ಎರಡೂ ಆಗಿತ್ತು. ನಮ್ಮ ದೇಶಾದ್ಯಂತ ಉತ್ಪಾದನೆಯಾದ ಕಲ್ಪನೆಗಳು ಮತ್ತು ಶಕ್ತಿಗಳ ಬಳಕೆ ಸ್ಮರಣೀಯ ಜಿ-20 ಶೃಂಗಸಭೆ ನಡೆಸಲು ಹೀಗೆ ಸಹಾಯ ಮಾಡಿದೆ.

Follow Us:
Download App:
  • android
  • ios