ವಿದ್ಯುತ್‌ ಬಿಲ್‌ ಪಾವತಿ ಮಾಡಲ್ಲ ಅಂತ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ನಿವಾಸಿಗಳು: ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

By BK AshwinFirst Published Sep 17, 2023, 9:55 PM IST
Highlights

ಪಿಓಕೆಯಲ್ಲಿ ನೂರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದು, ತಮ್ಮ ಮನೆಗಳ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರುತ್ತಿರುವ ವಿದ್ಯುತ್ ಬಿಲ್‌ಗಳನ್ನು ಅತಿರೇಕವಾಗಿ ಹೆಚ್ಚಿಸಿರುವುದನ್ನು ಖಂಡಿಸಿದ್ದಾರೆ. 

ಇಸ್ಲಾಮಾಬಾದ್‌ (ಸೆಪ್ಟೆಂಬರ್ 17, 2023): ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಅಂದರೆ, ಉಚಿತ ವಿದ್ಯುತ್ ಯೋಜನೆ. ಇದೇ ರೀತಿ, ಪಾಕ್‌ ಆಕ್ರಮಿತ ಕಾಶ್ಮೀರದ ಜನ ಸಹ ತಾವು ವಿದ್ಯುತ್ ಬಿಲ್‌ ಪಾವತಿ ಮಾಡಲ್ಲ ಅಂತ ಪಟ್ಟು ಹಿಡೀತಿದ್ದಾರೆ. 

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಇತ್ತೀಚೆಗೆ ವ್ಯಾಪಕವಾದ ಸರ್ಕಾರಿ ವಿರೋಧಿ ಪ್ರದರ್ಶನಗಳಿಗೆ ಕೇಂದ್ರಬಿಂದುವಾಗಿದೆ. ಏಕೆಂದರೆ ಉದ್ರಿಕ್ತ ನಿವಾಸಿಗಳು ಅತಿಯಾದ ವಿದ್ಯುತ್ ಬಿಲ್‌ಗಳ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರದೇಶದ ಜನತೆ ಈಗ ಬಿಲ್ ಪಾವತಿಯನ್ನು ಸಂಪೂರ್ಣ ಬಹಿಷ್ಕರಿಸೋದಾಗಿ ಕೂಗಿಕೊಳ್ತಿದ್ದಾರೆ. ಇದು ಸ್ಥಳೀಯ ಜನರ ಹತಾಶೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನು ಓದಿ: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ರೂ ಬಿಲ್ ಬರ್ತಿದ್ಯಾ? ನಿಮ್ಮ ಬಿಲ್‌ನ ನಿಗೂಢ ಅಂಶ FAC ಬಗ್ಗೆ ನಿಮಗೆಷ್ಟು ಗೊತ್ತು?

ಪಿಓಕೆಯಲ್ಲಿ ನೂರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದು, ತಮ್ಮ ಮನೆಗಳ ಮೇಲೆ ಅನ್ಯಾಯದ ಆರ್ಥಿಕ ಹೊರೆಯನ್ನು ಹೇರುತ್ತಿರುವ ವಿದ್ಯುತ್ ಬಿಲ್‌ಗಳನ್ನು ಅತಿರೇಕವಾಗಿ ಹೆಚ್ಚಿಸಿರುವುದನ್ನು ಖಂಡಿಸಿದ್ದಾರೆ. ತಮ್ಮ ಕುಂದುಕೊರತೆಗಳನ್ನು ಸರಿಯಾಗಿ ಆಲಿಸುವವರೆಗೆ ಬಿಲ್‌ಗಳನ್ನು ಕಟ್ಟಲ್ಲ ಅಂತಿದ್ದಾರೆ.

ಅಲ್ಲದೆ, ಈ ಪ್ರತಿಭಟನೆಯು ಕೇವಲ ವಿದ್ಯುತ್ ಬಿಲ್‌ ವಿಚಾರವಾಗಿ ಮಾತ್ರವಲ್ಲದೆ, ನ್ಯಾಯ ಮತ್ತು ಅವರು ಉತ್ಪಾದಿಸುವ ಶಕ್ತಿಯ ತಮ್ಮ ಮಾಲೀಕತ್ವವನ್ನು ಪ್ರತಿಪಾದಿಸುವ ಬಗ್ಗೆಯೂ ಆಗಿದೆ ಅನ್ನೋದು ನಿವಾಸಿಗಳ ಆಗ್ರಹ. ತಮ್ಮ ಜಲವಿದ್ಯುತ್ ಯೋಜನೆಗಳು ಪಾಕಿಸ್ತಾನದ ವಿದ್ಯುತ್ ಸರಬರಾಜಿನ ಬೆನ್ನೆಲುಬು. ಆದರೂ ತಮಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ, ಇದು ಅನ್ಯಾಯ ಅನ್ನೋದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: 45 ಮಹಿಳೆಯರ ರೇಪ್; ಶಿಕ್ಷಕಿ ಜತೆ ರಾಸಲೀಲೆ: ಕಾಮುಕ ಪ್ರಿನ್ಸಿಪಾಲ್ ವಿಡಿಯೋ ವೈರಲ್‌

ಇನ್ನು, ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ನಿರಾಕರಿಸುವಲ್ಲಿ ಸ್ಥಳೀಯ ಜನರು ಒಟ್ಟಾಗಿ ನಿಲ್ಲಬೇಕೆಂದು ಪ್ರಮುಖ ರಾಜಕೀಯ ನಾಯಕ ತೌಕೀರ್ ಮನವಿ ಮಾಡಿದ್ದಾರೆ. ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ನಾವು ಏನನ್ನೂ ಕದಿಯುತ್ತಿಲ್ಲ, ವಾಸ್ತವವಾಗಿ, ನಮ್ಮ ವಿದ್ಯುತ್ ಅನ್ನು ಲೂಟಿ ಮಾಡಿದವರಿಂದ ನಾವು ನಮ್ಮ ಪಾಲನ್ನು ಕೇಳ್ತಿದ್ದೇವೆ.. ನಮ್ಮ 5000 ಮೆಗಾವ್ಯಾಟ್ ವಿದ್ಯುತ್ ತೆಗೆದುಕೊಂಡವರಿಂದ ನಾವು ಸ್ವಲ್ಪ ಪಾಲನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮುಂದಿನ ವರ್ಷದ ವೇಳೆಗೆ ಅದು 10,000 ಮೆಗಾವ್ಯಾಟ್‌ಗೆ ಬೆಳೆಯಲಿದೆ. ಆದರೆ ನಾವೆಲ್ಲರೂ ಒಗ್ಗೂಡಿದಾಗ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ ಎಂದು ತೌಕೀರ್ ಹೇಳಿದರು.

ಪಿಓಕೆ ಜನತೆಗೆ ಈ ಹೋರಾಟ ವಿದ್ಯುತ್ ಬಿಲ್ಲುಗಳನ್ನು ಮೀರಿದೆ. ಇದು ಅವರ ಹಕ್ಕುಗಳು ಮತ್ತು ಘನತೆಗಾಗಿ ವಿಶಾಲ ಹೋರಾಟವನ್ನು ಸಂಕೇತಿಸುತ್ತದೆ ಅನ್ನೋದು ಅಲ್ಲಿನವರ ವಾದ. ಕಳೆದ ತಿಂಗಳು ಕೊಟ್ಲಿ ಜಿಲ್ಲೆಗೆ ಒಟ್ಟು 139 ಕೋಟಿ ಬಿಲ್ ಬಂದಿದ್ದು, ಅದರಲ್ಲಿ 19 ಕೋಟಿ ಮಾತ್ರ ಪಾವತಿಸಲಾಗಿದ್ದು, 120 ಕೋಟಿ ಪಾವತಿಸಿಲ್ಲ. ಈ 19 ಕೋಟಿ ಮೌಲ್ಯದ ಬಿಲ್‌ಗಳನ್ನು ಸಹ ಮುಂದಿನ ಬಾರಿ ಪಾವತಿಸದಂತೆ ನಾವು ಖಚಿತಪಡಿಸಿಕೊಳ್ಳಬೇಕು ಎಂದೂ ತೌಕೀರ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್‌ಗೆ ಯಾಕೆ ಹೋಗ್ಲಿಲ್ಲ, ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ವಿದ್ಯಾರ್ಥಿಗಳಿಗೆ ಕೇಳಿದ ಶಿಕ್ಷಕಿ!

ಈ ಪ್ರದೇಶವು ಸುಮಾರು 77 ವರ್ಷಗಳಿಂದ ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿದೆ ಮತ್ತು ಈ ಪ್ರದೇಶದ ಸ್ಥಳೀಯರು ಎರಡನೇ ದರ್ಜೆಯ ಪೌರತ್ವಕ್ಕೆ ಒಳಪಟ್ಟಿದ್ದಾರೆ.

click me!