ಕೊರೋನಾಗೆ ಬಲಿ, ಕುಟುಂಬಕ್ಕೆ 4 ಲಕ್ಷ ಕೊಡಲು ಸಾಧ್ಯವಿಲ್ಲ: ಕೇಂದ್ರ!

By Suvarna NewsFirst Published Jun 20, 2021, 12:49 PM IST
Highlights

* ಕೊರೋನಾಗೆ ಬಲಿಯಾದವರ ಕುಟುಂಬಗಳಿಗೆ ನಾಲ್ಕು ಲಕ್ಷ ಕೊಡೋದು ಅಸಾಧ್ಯ

* ರೋಗವೊಂದಕ್ಕೆ ಪರಿಹಾರ ಘೋಷಣೆ ಸರಿಯಲ್ಲ

* ಸುಪ್ರಿಂ ಕೋರ್ಟ್‌ಗೆ ಉತ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ(ಜೂ.20): ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವ ವಿಚಾರವಾಗಿ ಸುಪ್ರೀಂಗೆ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಉತ್ತರಿಸಿದೆ. ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ನೀಡಲು ಸಾಧ್ಯವಿಲ್ಲ ಎಂದು ಕೆಂದ್ರ ಸ್ಪಷ್ಟವಾಗಿ ತಿಳಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಭೂಕಂಪ, ಪ್ರವಾಹ ಮೊದಲಾದ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಷ್ಟೇ ಇಂತಹ ಪರಿಹಾರ ಅನ್ವಯಿಸುತ್ತದೆ. ಒಂದು ಕಾಯಿಲೆಗೆ ಹೀಗೆ ಪರಿಹಾರ ನೀಡುವುದು ನೀಡುವುದು ಮತ್ತು ಇನ್ನೊಂದಕ್ಕೆ ನಿರಾಕರಿಸುವುದು ಅನ್ಯಾಯವಾಗುತ್ತದೆ ಎಂದು ಕೆಂದ್ರ ಸರ್ಕಾರ ತಿಳಿಸಿದೆ.

ಲಾಕ್‌ಡೌನ್‌, ಮಾಸ್ಕ್‌, ಸಾಮಾಜಿಕ ಅಂತರ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕುಂಠಿತ!

ಎಲ್ಲಾ ಕೊರೋನಾ ಸಂತ್ರಸ್ತರಿಗೆ ಪರಿಹಾರ ಘೋಷಿಸುವಷ್ಟೆ ಸಾಮರ್ಥ್ಯ ರಾಜ್ಯಗಳಿಗಿಲ್ಲ. ಈ ನಿಟ್ಟಿನಲ್ಲಿ ಪರಿಗಹಾರ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅರ್ಜಿಯಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯಗಳು ನಾಲ್ಕು ಲಕ್ಷ ರೂಪಾಯಿ ಪರಿಹಾರ ಮೊತ್ತ ನೀಡುವಂತೆ ಗೆ ಕೋರಲಾಗಿದೆ. ಈ ವಿಷಯವನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

3ನೇ ಅಲೆಯಲ್ಲಿ ರಾಜ್ಯದ 1-1.5 ಲಕ್ಷ ಮಕ್ಕಳಿಗೆ ಸೋಂಕು: ಡಾ|ದೇವಿಶೆಟ್ಟಿ ಸಮಿತಿ ವರದಿ!

ಕೊರೋನಾ ಸೋಂಕು ಹರಡುವಿಕೆ ಮತ್ತು ಪ್ರಭಾವಕ್ಕೆ, ನೈಸರ್ಗಿಕ ವಿಪತ್ತುಗಳಿಗೆ ನೀಡುವ ಪರಿಹಾರವನ್ನು ಜಾರಿಗೊಳಿಸುವುದು ಸೂಕ್ತವಲ್ಲ. ತೆರಿಗೆ ಆದಾಯದಲ್ಲಿ ಇಳಿಕೆ ಮತ್ತು ಆರೋಗ್ಯ ವೆಚ್ಚ ಹೆಚ್ಚಳದಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಈಗಾಗಲೇ ತೀವ್ರ ಆರ್ಥಿಕ ಒತ್ತಡದಲ್ಲಿವೆ. ಪರಿಹಾರ ಒದಗಿಸಲು ಸಂಪನ್ಮೂಲಗಳ ಬಳಕೆ ಮಾಡುವುದರಿಂದ ಸೋಂಕು ನಿಯಂತ್ರಿಸುವ ಕ್ರಮ ಮತ್ತು ಆರೋಗ್ಯ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಯಾವುದೇ ಉಪಯೋಗವಿಲ್ಲ, ಬದಲಾಗಿ ಹಾನಿಯೇ ಹೆಚ್ಚು. ಈಗಾಗಲೇ ಕೊರೋನಾ ಸೋಂಕಿನಿಂದ 3,85,000 ಕ್ಕೂ ಹೆಚ್ಚು ಸಾವು ಸಂಭವಿಸಿವೆ, ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!