ಅಮಿತ್ ಷಾ ಕಾರಿನ ನಂಬರ್‌ ಪ್ಲೇಟ್‌ನಲ್ಲೂ ಸಿಎಎ: ಕಾಯ್ದೆ ಜಾರಿಗೂ ಮೊದಲು ಫೋಟೋ ಸಖತ್ ವೈರಲ್

Published : Mar 01, 2024, 01:32 PM ISTUpdated : Mar 01, 2024, 02:07 PM IST
ಅಮಿತ್ ಷಾ ಕಾರಿನ ನಂಬರ್‌ ಪ್ಲೇಟ್‌ನಲ್ಲೂ ಸಿಎಎ: ಕಾಯ್ದೆ ಜಾರಿಗೂ ಮೊದಲು ಫೋಟೋ ಸಖತ್ ವೈರಲ್

ಸಾರಾಂಶ

ಸಿಎಎ ಜಾರಿಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಈ ಸಿಎಎ ಕಾಯ್ದೆ ಜಾರಿಗೆ ಬರುವುದು ಖಚಿತವಾಗಿದೆ. ಹೀಗಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರಿನ ನಂಬರ್‌ ಪ್ಲೇಟ್‌ನಲ್ಲೂ ಸಿಎಎ ಅಕ್ಷರಗಳಿದ್ದು, ಈ ನಂಬರ್‌ಪ್ಲೇಟ್‌ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು: ಸಿಎಎ ಜಾರಿಗೆ ಕೇಂದ್ರ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಈ ಸಿಎಎ ಕಾಯ್ದೆ ಜಾರಿಗೆ ಬರುವುದು ಖಚಿತವಾಗಿದೆ. ಹೀಗಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರಿನ ನಂಬರ್‌ ಪ್ಲೇಟ್‌ನಲ್ಲೂ ಸಿಎಎ ಅಕ್ಷರಗಳಿದ್ದು, ಈ ನಂಬರ್‌ಪ್ಲೇಟ್‌ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹ ಸಚಿವ ಅಮಿತ್ ಶಾ ಅವರು ಡಿಲ್ 1ಸಿ, ಎಎ 4421 ಸಂಖ್ಯೆಯ ನಂಬರ್ ಪ್ಲೇಟ್‌ ಇರುವ ವಾಹನದಲ್ಲಿ ಬಿಜೆಪಿ ಕಚೇರಿಗೆ ಆಗಮಿಸುತ್ತಿರುವ ಫೋಟೋ ಈಗ ವೈರಲ್ ಆಗಿದೆ. 

2024ರ ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಗೂ ಮೊದಲೇ ಗೃಹ ವ್ಯವಹಾರಗಳ ಸಚಿವಾಲಯ (MHA) ಪೌರತ್ವ ತಿದ್ದುಪಡಿ ಕಾಯ್ದೆ (CAA) 2019 ರ ನಿಯಮಾವಳಿಗಳನ್ನು ಪ್ರಕಟಿಸುವ ಸಾಧ್ಯತೆ ದಟ್ಟವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಈ ನಂಬರ್ ಪ್ಲೇಟ್ ವಿಚಾರ ವೈರಲ್ ಆಗಿದೆ. ಕೇಂದ್ರ ಚುನಾವಣಾ ಆಯೋಗವೂ 2024ರ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಿದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ಇದಕ್ಕೂ ಮೊದಲು ಮಾರ್ಚ್ ಎರಡನೇ ವಾರದಲ್ಲಿ ಸಿಎಎ ಜಾರಿಯಾಗುವ ಸಾಧ್ಯತೆ ಇದೆ.

ಪೌರತ್ವ ತಿದ್ದುಪಡಿ ಮಸೂದೆ ಮಾರ್ಚ್‌ನಲ್ಲಿ ಜಾರಿ, ಕೇಂದ್ರ ಸರ್ಕಾರದ ಸೂಚನೆ

ಡಿಸೆಂಬರ್ 2019ರಲ್ಲಿ ಸಂಸತ್‌ನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ಕಾಯ್ದೆ ಇದುವರೆರೆಗೆ ಜಾರಿಯಾಗಿಲ್ಲ, ಸಿಎಎ ವಿರೋಧಿಸಿ ದೇಶಾದ್ಯಂತ ಕೆಲವರು ಪ್ರತಿಭಟನೆ ನಡೆಸಿದರು. ಅನೇಕರು ಇದನ್ನು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸುವುದರ ಜೊತೆಗೆ ಜೊತೆಗೆ ರಾಷ್ಟ್ರೀಯ ನಾಗರಿಕರ ನೋಂದಣಿ (NRC)ಜೊತೆ ಈ ವಿಚಾರವನ್ನೂ ಲಿಂಕ್ ಮಾಡಿ ಗಲಭೆ ಎಬ್ಬಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವ ಕೆಲವೇ ದಿನಗಳ ಮೊದಲು ಈ ಸಿಎಎ ಕಾಯ್ದೆ ಜಾರಿ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದು ಕೆಲ ಮೂಲಗಳು ವರದಿ ಮಾಡಿವೆ.  

ಮೋದಿ ಸರ್ಕಾರದ ಕೊನೆಯ ಅಧಿವೇಶನ ಮುಕ್ತಾಯ: ಇದು ಹೆಚ್ಚು ಯುವ, ಹೆಚ್ಚು ಸುಶಿಕ್ಷಿತ ಲೋಕಸಭೆ!

ಕಳೆದ ತಿಂಗಳಷ್ಟೇ ಅಮಿತ್ ಷಾ  ಸಿಎಎಯನ್ನು ಲೋಕಸಭಾ ಚುನಾವಣೆಗೂ ಮೊದಲು ಜಾರಿಗೆ ತರಲಾಗುವುದು ಎಂದು ಘೋಷಣೆ ಮಾಡಿದ್ದರು. ಸಿಎಎ ದೇಶದ ಕಾನೂನಾಗಿದ್ದು, ಅದರ ಅಧಿಸೂಚನೆಯನ್ನು ಖಂಡಿತವಾಗಿಯೂ ಹೊರಡಿಸಲಾಗುವುದು. ಅದನ್ನು ಚುನಾವಣೆಗೆ ಮುನ್ನ ಹೊರಡಿಸಲಾಗುವುದು. ಸಿಎಎ ಚುನಾವಣೆಗೂ ಮುನ್ನ ಜಾರಿಯಾಗಲಿದೆ. ಯಾರೂ ಅದರ ಬಗ್ಗೆ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅಮಿತ್ ಶಾ ಅವರುಫೆಬ್ರವರಿ 10 ರಂದು ನಡೆದ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ಹೇಳಿದ್ದರು.
 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ