ಕೋರ್ಟ್ ತೀರ್ಪು, ದೂರವಾದ ಮುದ್ದು ಮಗಳು; ತೀವ್ರ ಆಘಾತದಿಂದ ಪ್ರಾಣ ಕಳೆದುಕೊಂಡ ತಂದೆ

Published : Jul 18, 2026, 03:12 PM IST
Kerala Bus Conductor New

ಸಾರಾಂಶ

ಕೆಎಸ್‌ಆರ್‌ಟಿಸಿ ಕಂಡಕ್ಟರ್ ರಂಜೀಶ್, ಪತ್ನಿ ತೊರೆದುಹೋದ ನಂತರ ಮಗಳನ್ನು ಒಬ್ಬರೇ ಸಾಕಿದ್ದರು. ಆದರೆ, ನ್ಯಾಯಾಲಯವು ಮಗಳನ್ನು ತಾಯಿಯ ವಶಕ್ಕೆ ನೀಡಿದ ನಂತರ, ರಂಜೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಘಟನೆಯು ಮಕ್ಕಳ ಪಾಲನೆಯಲ್ಲಿ ತಂದೆಯ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ತಿರುವನಂತಪುರ: ಪ್ರೀತಿಯಿಂದ ಮುದ್ದಾಗಿ ಸಾಕಿದ ಮಗಳು ದೂರವಾಗಿದ್ದಕ್ಕೆ ಕೇರಳದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. 38 ವರ್ಷದ ರಂಜೀಶ್ ಎಂಬವರು ಮಗಳು ದೂರವಾಗಿದ್ದಕ್ಕೆ ಪ್ರಾಣ ಕಳೆದುಕೊಂಡ ವ್ಯಕ್ತಿ. ಸದ್ಯ ರಂಜೀಶ್ ಅವರ ಸಾವು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಾಗಾದ್ರೆ ರಂಜೀಶ್ ಅವರಿಂದ ಮಗಳು ದೂರವಾಗಿದ್ದೇಕೆ? ನ್ಯಾಯಾಲಯ ತೀರ್ಪು ಬಂದ ನಂತರವೇ ಈ ಘಟನೆ ನಡೆದಿದ್ದು ಯಾಕೆ ಎಂಬುದರ ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಕೇರಳದ ಕುಮಲಿ ಪ್ರದೇಶದ ನಿವಾಸಿಯಾಗಿರುವ ರಂಜೀಶ್, ಕೇರಳ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಗಳ ಮತ್ತು ವೃದ್ದ ಪೋಷಕರನ್ನು ನೋಡಿಕೊಂಡು ರಂಜೀಶ್ ಜೀವನ ನಡೆಸುತ್ತಿದ್ದರು. ರಂಜೀಶ್ ಪ್ರೀತಿಸಿ ಮದುವೆಯಾದವರು. ಪ್ರೀತಿಗೆ ಸಾಕ್ಷಿಯಾಗಿ ಮಗಳು ಬಂದಿದ್ದಳು. ಆದ್ರೆ ಎರಡು ವರ್ಷದ ಬಳಿಕ ರಂಜೀಶ್‌ನಿಂದ ದೂರವಾದ ಪತ್ನಿ, ವಿದೇಶಕ್ಕೆ ತೆರಳಿ ಅಲ್ಲಿಯೇ ಎರಡನೇ ಮದುವೆಯಾದರು.

ಆಘಾತವನ್ನುಂಟು ಮಾಡಿದ ನ್ಯಾಯಾಲಯದ ತೀರ್ಪು

ಪತ್ನಿ ದೂರವಾದ ಬಳಿಕ ಮುದ್ದು ಮಗಳನ್ನು ತನ್ನ ಪೋಷಕರ ಜೊತೆಯಲ್ಲಿಯೇ ಬೆಳೆಸಿದ್ದರು. ಪತ್ನಿ ದೂರವಾದ ದುಃಖವನ್ನು ಮಗಳ ನಗು ನೋಡಿ ಮರೆತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇದೆಲ್ಲದರ ನಡುವೆ ಮಗಳನ್ನು ತನ್ನ ವಶಕ್ಕೆ ನೀಡಬೇಕೆಂದು ರಂಜೀಶ್ ಪತ್ನಿ ಕೌಟುಂಬಿಕ ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಗಳನ್ನು, ಆಕೆಯ ತಾಯಿ ಮತ್ತು ಮಲತಂದೆಯ ವಶಕ್ಕೆ ನೀಡಿ ತೀರ್ಪು ನೀಡಿದೆ.

ನ್ಯಾಯಾಲಯದ ಈ ತೀರ್ಪಿನಿಂದ ಆಘಾತಕ್ಕೊಳಗಾದ ರಂಜೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸುತ್ತಿರೋ ಪೊಲೀಸರು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ರಂಜೀಶ್ ಸಾವು ಹಲವು ಹೊಸ ವಿಷಯಗಳ ಚರ್ಚೆಗೆ ಮುನ್ನಡಿ ಹಾಕಿದೆ.

ಮಕ್ಕಳು ಯಾರಿಗೆ? ತಾಯಿಗೆ ಸಿಗುವ ಆದ್ಯತೆ ತಂದೆಗೆ ಯಾಕಿಲ್ಲ?

ಗಂಡ-ಹೆಂಡ್ತಿ ಜಗಳ ಮಾಡಿಕೊಂಡು ಬೇರ್ಪಡೆಯಾದ್ರೆ ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಂಟು ವರ್ಷದ ನಂತರ ಬಂದ ತಾಯಿಗೆ ಮಗಳನ್ನು ಕರೆದುಕೊಂಡು ಹೋಗುವ ಹಕ್ಕಿದೆಯಾ? ಭಾರತದಲ್ಲಿ ಕಾನೂನು ಏನೇ ಇರಬಹುದು? ಎಂಟು ವರ್ಷದಿಂದ ಮಗಳನ್ನು ಸಾಕಿದ ತಂದೆಗೆ ಈ ಘಟನೆಯಿಂದ ಎಷ್ಟು ಆಘಾತವಾಗಿರಬಹುದು ಎಂದು ಕಲ್ಪನೆ ಮಾಡಿಕೊಂಡ್ರೆ ತುಂಬಾ ನೋವಾಗುತ್ತೆ ಎಂಬ ಶೀರ್ಷಿಕೆಯಡಿಯಲ್ಲಿ ಘಟನೆ ಬಗ್ಗೆ ಜನರು ಬರೆದುಕೊಳ್ಳಲಾರಂಭಿಸಿದ್ದಾರೆ.

ನ್ಯಾಯಾಲಯಗಳು ಮಗುವಿನ ಹಿತಾಸಕ್ತಿ ಮತ್ತು ಕಲ್ಯಾಣವನ್ನು ಆಧರಿಸಿ, ಭಾವನಾತ್ಮಕ ಯೋಗಕ್ಷೇಮ, ಶಿಕ್ಷಣ, ಆರ್ಥಿಕ ಸ್ಥಿರತೆ ಮತ್ತು ಮಗುವಿನ ಒಟ್ಟಾರೆ ಬೆಳವಣಿಗೆಯಂತಹ ಅಂಶಗಳನ್ನು ಪರಿಗಣಿಸಿ ಕಸ್ಟಡಿ ವಿಷಯಗಳನ್ನು ನಿರ್ಧರಿಸುತ್ತವೆ. ಇಲ್ಲಿ ರಂಜೀಶ್ ಎಂಟು ವರ್ಷದಿಂದ ಮಗಳನ್ನು ನೋಡಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಇಂತಜ ಪ್ರಕರಣಗಳಲ್ಲಿ ಮಕ್ಕಳ ಜವಾಬ್ದಾರಿಯನ್ನು ತಾಯಿಗೆ ನೀಡಲು ಮೊದಲ ಆದ್ಯತೆಯನ್ನು ನೀಡುತ್ತಾರೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ ಆಗಲು 1.7 ಕೋಟಿ ಸಂಬಳದ ಕೆಲಸ ಬಿಟ್ಟ 27ರ ಯುವಕ; ಮುಂದೆ ಆಗಿದ್ದೇನು?

ಪುರುಷರ ಹೋರಾಟ ಯಾರಿಗೂ ಕಾಣಿಸಲ್ಲ ಯಾಕೆ?

ರಂಜೀಶ್ ಮೊದಲು ಹೆಂಡತಿಯನ್ನು ಕಳೆದುಕೊಂಡರು. ನಂತರ ಈ ವ್ಯವಸ್ಥೆ ಆತನ ಮಗಳನ್ನು ದೂರ ಮಾಡಿತು. ಮಗಳ ದೂರವಾಗಿದ್ದ ಸಂಪೂರ್ಣವಾಗಿ ಕುಸಿದ ರಂಜೀಶ್ ಲೋಕವನ್ನೇ ಬಿಟ್ಟು ಹೋಗಿದ್ದಾರೆ. ಈ ಪ್ರಕರಣದ ಬಳಿಕ ಪುರುಷರಿಗೆ ಈ ಸಮಾಜದಲ್ಲಿ ಯಾವುದೇ ಹಕ್ಕುಗಳಿಲ್ಲ ಎಂದು ಕಾಣಿಸುತ್ತದೆ. ಪುರುಷರ ನೋವು, ಹೋರಾಟ, ಮೌನ ಹೋರಾಟಗಳು ಯಾರಿಗೂ ಕಾಣುವುದಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: ಚೀಟಿ ಕೊಟ್ಟು ಕಾಂಡೋಮ್ ತರೋದಕ್ಕೆ ಮೆಡಿಕಲ್ ಶಾಪ್‌ಗೆ ಮಗನನ್ನು ಕಳಹಿಸಿದ ತಂದೆ: ವಿಡಿಯೋ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂದು ಅಪ್ಪ, ಇಂದು ಮಗ.. ಆವತ್ತು ವಾಂಗ್ಚುಕ್ ತಂದೆ ಅವರ ಉಪವಾಸಕ್ಕೆ ಇಂದಿರಾ ಗಾಂಧಿಯೇ ಹೆದರಿದ್ದರು..!
'ಕಾಕ್ರೋಚ್'​ ಪಕ್ಷದ ನಾಯಕ ಅಭಿಜೀತ್ ದೀಪ್ಕೆ ಅನಿರ್ದಿಷ್ಟ ಉಪವಾಸ ಆರಂಭ: ಅವರು ಹೇಳಿದ್ದೇನು?