ಕೈ ಎತ್ತಿ ಜೈ ಶ್ರೀರಾಮ್ ಘೋಷಣೆ ಕೂಗಿದ ಉದ್ಯಮಿ, ಕಿಸೆಯಲ್ಲಿದ್ದ 36,000 ರೂ ಮಾಯ!

By Suvarna NewsFirst Published Apr 23, 2024, 1:21 PM IST
Highlights

ಉದ್ಯಮಿಯೊಬ್ಬರು ತನ್ನ ಎರಡೂ ಕೈಗಳನ್ನ ಎತ್ತಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ಈ ಘೋಷಣೆ ಕೂಗಿ ಮುಗಿಸುವುದೊರಳಗೆ ಕಿಸೆಯಲ್ಲಿದ್ದ 36,000 ರೂಪಾಯಿ ಮಾಯವಾಗಿದೆ.
 

ಮೀರತ್(ಏ.23) ದೇಶದೆಲ್ಲೆಡೆ ಇದೀಗ ಚುನಾವಣಾ ಪ್ರಚಾರ, ಸಮಾವೇಶಗಳು ನಡೆಯುತ್ತಿದೆ. ಕಾರ್ಯಕರ್ತರು, ಬೆಂಬಲಿಗರು, ಮತದಾರರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಿಕ್ಕಿರಿದು ಸೇರುತ್ತಿರುವ ಜನರ ನಡುವೆ ಅದ್ಧೂರಿಯಾಗಿ ಪಕ್ಷಗಳ ಪ್ರಚಾರ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ಈ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಒಂದು ಕ್ಷಣ ಮೈಮರೆತರೆ ಅತೀ ದೊಡ್ಡ ನಷ್ಟವಾಗಲಿದೆ. ಹೌದು, ಇತ್ತೀಚೆಗೆ ಮೀರತ್ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಶ್ರೀರಾಮಾಣ ದಾರವಾಹಿ ನಟ ಅರುಣ್ ಗೋವಿಸ್ ಎಲ್ಲೆ ಹೋದರು ಜನ ಭಕ್ತಿಯಿಂದ ನಮಿಸುತ್ತಾರೆ. ಹೀಗೆ ಅರುಣ್ ಗೋವಿಲ್ ಪ್ರಚಾರಕ್ಕಾಗಿ ರಸ್ತೆ ಬದಿಯಲ್ಲಿ ಜನಸಂದಣಿ ನಡುವೆ ಕಾಯುತ್ತಿದ್ದ ಉದ್ಯಮಿ ಕುಲಭೂಷಣ್, ಗೋವಿಲ್ ಸಮೀಪಕ್ಕೆ ಬರುತ್ತಿದ್ದಂತೆ ಎರಡೂ ಕೈಗಳನ್ನು ಎತ್ತಿ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆದರೆ ಘೋಷಣೆ ಕೂಗಿ ಮುಗಿಸುವುದರೊಳಗೆ ಉದ್ಯಮಿ ಜೇಬಿನಲ್ಲಿದ್ದ 36,000 ರೂಪಾಯಿ ಹಣವನ್ನು ಕಳ್ಳರು ಎಗರಿಸಿದ್ದಾರೆ.

ಮೀರತ್ ನಗರದಲ್ಲಿ ಬಿಜೆಪಿ ಅಬ್ಯರ್ಥಿ ಅರುಣ್ ಗೋವಿಲ್ ರೋಡ್ ಶೋ ಆಯೋಜಿಸಿದ್ದರು. ಶ್ರೀರಾಮಾಯಣ ನಟನ ಜೊತೆ ಸೀತೆಯಾಗಿ ಅಭಿನಯಿಸಿದ ದೀಪಿಕಾ ಚಿಖಿಲಾ ಹಾಗೂ ಲಕ್ಷ್ಮಣನಾಗಿ ಅಭಿನಯಿಸಿದ ಸುನಿಲ್ ಲಾಹ್ರಿ ಕಾಣಿಸಿಕೊಂಡಿದ್ದರು. ಶ್ರೀರಾಮಾಣಯ ನಟರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಇದರ ಜೊತೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಕಾರ್ಯಕರ್ತರು, ಬೆಂಬಲಿಗರು ಸೇರಿದ್ದರು. 

ಪ್ರಚಾರದ ವೇಳೆ ಪಿಕ್ ಪಾಕೇಟ್ : ಬಿಜೆಪಿ ನಾಯಕನಿಂದ 50 ಸಾವಿರ ಎಗರಿಸಿದ ಕಳ್ಳರು

ಮೀರತ್ ನಗರದಲ್ಲಿ ಅರುಣ್ ಗೋವಿಲ್ ರೋಡ್ ಶೋ ಪ್ರಮುಖ ರಸ್ತೆಗಳಲ್ಲಿ ಸಾಗಿತ್ತು. ಈ ವೇಳೆ ರಸ್ತೆಯ ಬದಿಗಳಲ್ಲಿ ಜನರು ಸೇರಿದ್ದರು. ಮತ್ತೊಂದೆಡೆ ರೋಡ್ ಶೋ ಜೊತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸಾಗುತ್ತಿದ್ದರು. ಇದೇ ರೋಡ್ ಶೋ ನಡುವೆ ಕಳ್ಳರ ಗ್ಯಾಂಗ್ ಸೇರಿಕೊಂಡು ಕೈಚಳಕ ತೋರಿಸಿದೆ. ಕುಲಭೂಷಣ್ ಮೀರತ್ ಪ್ರಮುಖ ರಸ್ತೆಯಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಅರುಣ್ ಗೋವಿಲ್ ರೋಡ್ ಶೋ ಆಗಮಿಸುತ್ತಿದ್ದಂತೆ ತನ್ನ ಶಾಪ್‌ನಿಂದ ಹೊರಬಂದು ರಸ್ತೆಗೆ ತೆರಳಿದ್ದಾರೆ.

ಅರುಣ್ ಗೋವಿಲ್ ರೋಡ್ ಶೋ ಸಮೀಪಿಸುತ್ತಿದ್ದಂತೆ ಎರಡೂ ಕೈಗಳನ್ನು ಎತ್ತಿ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಈ ಮೂಲಕ ಶ್ರೀರಾಮಾಯಣ ನಟನಿಗೆ ಗೌರವ ಸಲ್ಲಿಸಿದ್ದಾರೆ. ಘೋಷಣೆ ಕೂಗಿ ಸಂಭ್ರಮ ಪಟ್ಟ ಕುಲಭೂಷಣ್ ಕೈಗಳನ್ನು ಇಳಿಸುವಷ್ಟರಲ್ಲೇ ಜೇಬಿನಲ್ಲಿದ್ದ 36,000 ರೂಪಾಯಿ ಹಣ ಕಳ್ಳರು ಎಗರಿಸಿದ್ದಾರೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕುಲಭೂಷಣ್ ಮಾಹಿತಿ ನೀಡಿದ್ದಾರೆ. ಪತ್ರಕರ್ತರು ಸೇರಿದಂತೆ ಹಲವರ ಜೇಬುಕಳ್ಳತನವಾಗಿರುವುದು ಬಯಲಾಗಿದೆ. ಪ್ರಚಾರ ಸಭೆಯನ್ನೇ ಟಾರ್ಗೆಟ್ ಮಾಡಿದ್ದ ಕಳ್ಳರ ಗ್ಯಾಂಗ್ ಈ ಕೃತ್ಯ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ತುಮಕೂರಲ್ಲಿ ಪಿಕ್ ಪಾಕೆಟ್ ಮಾಡ್ತಿದ್ರು ಆಂಧ್ರದ 6 ಕಳ್ಳರು, ಜನರಿಂದ ಬಿತ್ತು ಗೂಸಾ..!
 

click me!