ಆಳವಾದ ಕಮರಿಗೆ ಬಸ್ ಉರುಳಿ ಬಿದ್ದ ಪರಿಣಾಮ 22 ಜನರು ಸಾವನ್ನಪ್ಪಿದ್ದು, 69 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಖ್ನೂರ್ ಪ್ರದೇಶದ ಜಮ್ಮು-ಪೂಂಚ್ ಹೆದ್ದಾರಿಯ ತಾಂಡಾ ಬಳಿ ನಡೆದಿದೆ.
ಜಮ್ಮು (ಮೇ.31): ಆಳವಾದ ಕಮರಿಗೆ ಬಸ್ ಉರುಳಿ ಬಿದ್ದ ಪರಿಣಾಮ 22 ಜನರು ಸಾವನ್ನಪ್ಪಿದ್ದು, 69 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಖ್ನೂರ್ ಪ್ರದೇಶದ ಜಮ್ಮು-ಪೂಂಚ್ ಹೆದ್ದಾರಿಯ ತಾಂಡಾ ಬಳಿ ಗುರುವಾರ ನಡೆದಿದೆ. ಉತ್ತರ ಪ್ರದೇಶದ ಹತ್ರಾಸ್‌ನಿಂದ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಅಖ್ನೂರ್ ತಾಂಡಾ ಬಳಿ 150 ಅಡಿ ಆಳದ ಪ್ರಪಾತಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ. ಗಾಯಗೊಂಡವರನ್ನು ಅಖ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
Prajwal Revanna : ಪ್ರಜ್ವಲ್ ರೇವಣ್ಣನನ್ನು ಹೆಡೆಮುರಿಕಟ್ಟಿದ ಐವರು ಮಹಿಳಾ ಪೊಲೀಸರು; ಮುಂದೈತೆ ಅಸಲಿ ತನಿಖೆ
ಘಟನೆಯಲ್ಲಿ ಐದು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆಂದು ವರದಿ ತಿಳಿಸಿದೆ. ಜಮ್ಮು-ಪೂಂಚ್ ಹೆದ್ದಾರಿಯ ಅಖ್ನೂರ್ ಬಳಿ ಉತ್ತರ ಪ್ರದೇಶದಿಂದ ಬರುತ್ತಿದ್ದ ಶಿವ ಖೋರಿಗೆ ಯಾತ್ರಿಕರನ್ನು ಬಸ್ ಹೊತ್ತೊಯ್ಯುತ್ತಿತ್ತು. ಬಸ್ ನಲ್ಲಿ ಮಿತಿ ಮೀರಿ ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ.
ಮಧ್ಯರಾತ್ರಿ ನಿದ್ದೆಗೆಟ್ಟು ಪ್ರಜ್ವಲ್ ರೇವಣ್ಣನ ಮೇಲೆ ಕಣ್ಣಿಟ್ಟ 2,000 ಜನ
ಬಸ್ ಉತ್ತರ ಪ್ರದೇಶದ ಹತ್ರಾಸ್ (ಅಲಿಗಢ) ನಿಂದ ಬಂದಿದ್ದು, ರಿಯಾಸಿ ಜಿಲ್ಲೆಯ ರಾನ್ಸೂ ಪ್ರದೇಶದ ಶಿವ ಖೋರಿ ದೇಗುಲಕ್ಕೆ ತೆರಳುತ್ತಿತ್ತು. ಶಿವ ಖೋರಿಯಲ್ಲಿ ದರ್ಶನ ಮಾಡಿದ ನಂತರ ಯಾತ್ರಾರ್ಥಿಗಳು ನಾಳೆ ಕತ್ರ ಮಾತಾ ವೈಷ್ಣೋದೇವಿಗೆ ತೆರಳಬೇಕಿತ್ತು ಬಸ್‌ನಲ್ಲಿ ಮಕ್ಕಳು ಸೇರಿದಂತೆ 90 ಕ್ಕೂ ಹೆಚ್ಚು ಮಂದಿ ಇದ್ದರು ಎಂದು ತಿಳಿದುಬಂದಿದೆ.