ಮುಜಫರ್‌ಪುರದಿಂದ ನಾಪತ್ತೆಯಾಗಿದ್ದ ಮೂವರು ಬಾಲಕಿಯರು ಮನೆಯಿಂದ 960 ಕಿಮೀ ದೂರದಲ್ಲಿ, ಮಥುರಾದಲ್ಲಿ ಸಾವನ್ನಪ್ಪಿದ್ದಾರೆ, ಕೊಲೆ ಅಥವಾ ಆತ್ಮಹತ್ಯೆಯ ರಹಸ್ಯವನ್ನು ಭೇದಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಬಾಬಾನನ್ನು ಭೇಟಿಯಾಗುವುದಾಗಿ ಕುಟುಂಬ ಸದಸ್ಯರಿಗೆ ಪತ್ರ ಬರೆದು ಮುಜಾಫರ್‌ಪುರದಿಂದ ತೆರಳಿದ್ದ ಮೂವರು ವಿದ್ಯಾರ್ಥಿನಿಯರ ಶವ ಮಥುರಾ ಆಗ್ರಾ ರೈಲು ಹಳಿ ಬಳಿ ಪತ್ತೆಯಾಗಿದೆ. ಮಥುರಾ ಪೊಲೀಸರು ಸೋಮವಾರ (ಮೇ 27) ಮೃತದೇಹಗಳ ಬಳಿ ದೊರೆತ ಸಾಕ್ಷ್ಯದ ಆಧಾರದ ಮೇಲೆ ಮುಜಫರ್‌ಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಇಬ್ಬರು ವಿದ್ಯಾರ್ಥಿನಿಯರು ಯೋಗಿಯಮಠದ ನಿವಾಸಿಗಳಾಗಿದ್ದು, ಅವರ ಛಾಯಾಚಿತ್ರಗಳಿಂದ ಅವರ ಕುಟುಂಬದವರು ಗುರುತಿಸಿದ್ದಾರೆ. ಇದಾದ ಬಳಿಕ ಪೊಲೀಸ್ ತಂಡ ಹಾಗೂ ಕುಟುಂಬ ಸೋಮವಾರ ಮಥುರಾಗೆ ತೆರಳಿತ್ತು. ಮೂರನೇ ಮೃತ ದೇಹವು ಬಾಳುಘಟ್ಟದ ವಿದ್ಯಾರ್ಥಿನಿಯದ್ದು ಎಂದು ಶಂಕಿಸಲಾಗಿದೆ. ಎಲ್ಲ ವಿದ್ಯಾರ್ಥಿನಿಯರು ರೈಲಿನಡಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.
undefined
ವಿದ್ಯಾರ್ಥಿನಿಯೊಬ್ಬಳ ಬಟ್ಟೆಯಲ್ಲಿ ಟೈಲರ್ ಶಾಪ್ ಹೆಸರಿದ್ದಿದ್ದರಿಂದ ಪೋಲೀಸರಿಗೆ ಆಕೆಯ ಗುರುತು ಪತ್ತೆ ಹಚ್ಚುವುದು ಸಾಧ್ಯವಾಗಿದೆ.
ಮುಜಾಫರ್‌ಪುರದ ಯೋಗಿಮಠದ ಗೌರಿ ಮತ್ತು ಮಾಯಾ ಹಾಗೂ ಬಾಳುಘಟ್ಟದ ಮಾಹಿ ಎಂಬ 14 ವರ್ಷದ ಮೂವರು ವಿದ್ಯಾರ್ಥಿನಿಯರು ಮೇ 13ರಂದು ಮನೆ ಬಿಟ್ಟು ಹೋಗಿದ್ದರು. ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದರು. ಇದಾದ ಬಳಿಕ ಅವರು ಮನೆಗೆ ಹಿಂತಿರುಗಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಬಾಬಾ ದರ್ಶನಕ್ಕೆ ಕರೆ ಇದೆ. ನಾವು ಧಾರ್ಮಿಕ ಪ್ರಯಾಣ ಕೈಗೊಳ್ಳುತ್ತಿದ್ದು, ಹಿಮಾಲಯಕ್ಕೆ ಹೋಗುತ್ತಿದ್ದೇವೆ, ಮೂರು ತಿಂಗಳು ನಮ್ಮನ್ನು ಹುಡುಕಬೇಡಿ ಎಂದು ಬರೆಯಲಾಗಿದೆ.
ನೀವು ಹುಡುಕಿದರೆ, ನಾವು ಸಾಯುತ್ತೇವೆ ಎಂದೂ ಹುಡುಗಿಯರು ಪತ್ರದಲ್ಲಿ ಬರೆದಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಕುಟುಂಬವು ತರಾತುರಿಯಲ್ಲಿ ಹುಡುಕಾಟ ಆರಂಭಿಸಿದರಾದರೂ ಪತ್ತೆಯಾಗಿರಲಿಲ್ಲ. ಇದಾದ ನಂತರ ಈ ಪ್ರಕರಣದ ತನಿಖೆಗಾಗಿ ಪೊಲೀಸರನ್ನು ಸಂಪರ್ಕಿಸಲಾಗಿತ್ತು.
ನಿಜಕ್ಕೂ ಇದು ಅವಳೇನಾ? ಅದಿತಿ ರಾವ್ ಹಳೆಯ ಫೋಟೋ ನೋಡಿ ಫ್ಯಾನ್ಸ್ ಶಾಕ್!
ಎಫ್‌ಐಆರ್ ದಾಖಲಿಸಲು ಹತ್ತು ದಿನ!
ಇಡೀ ಪ್ರಕರಣದಲ್ಲಿ ಮೃತ ವಿದ್ಯಾರ್ಥಿನಿ ಗೌರಿಯ ಸಂಬಂಧಿ ಅಮಿತ್ ರಜಾಕ್ ಮಾತನಾಡಿ, ಮಗಳು ಮನೆ ಬಿಟ್ಟು ಹೋದ ಮರುದಿನವೇ ಮೇ 14ರಂದು ನಗರ ಠಾಣೆಗೆ ದೂರು ನೀಡಲಾಗಿತ್ತಾದರೂ ಪೊಲೀಸರು ಪದೇ ಪದೇ ಕಾಲಹರಣ ಮಾಡುತ್ತಿದ್ದಾರೆ. ಪ್ರಕರಣ ಮತ್ತು ಎಫ್‌ಐಆರ್ ದಾಖಲಿಸಲು ಅರ್ಜಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಇದಾದ ನಂತರ ಸುಸ್ತಾಗಿ ಹತಾಶೆಯಿಂದ ನಾವೇ ಹುಡುಗಿಯನ್ನು ಹುಡುಕಲು ಹೊರಟೆವು. ಆಗ ಪೊಲೀಸರು ಈ ವಿಚಾರದಲ್ಲಿ ಗಂಭೀರತೆ ತೋರಿದ್ದರೆ ಬಹುಶಃ ಈ ಘಟನೆ ನಡೆಯುತ್ತಿರಲಿಲ್ಲವೇನೋ ಎಂದಿದ್ದಾರೆ.
ಗುರುತು ಮರೆ ಮಾಚಿಕೊಂಡು ಹೋಗಿ ರಸ್ತೆಬದಿ ಈ ಫುಡ್ ತಿಂತಾರೆ ದೀಪಿಕಾ ಪಡುಕೋಣೆ!
ಎಲ್ಲಿಂದ ಶುರುವಾಯ್ತು ಭಕ್ತಿ?
6 ತಿಂಗಳ ಹಿಂದೆ ಮಾಹಿಯನ್ನು ನೆರೆಹೊರೆಯವರಾದ ಗೌರಿ ಮತ್ತು ಮಾಯಾ ಕೋಚಿಂಗ್ ಸೆಂಟರ್‌ನಲ್ಲಿ ಭೇಟಿಯಾದರು. ಬಳಿಕ ಅವರು ಗೆಳತಿಯರಾದರು. ಮಾಹಿಯು ಸಿಕ್ಕಾಪಟ್ಟೆ ಪೂಜೆ ಮಾಡುತ್ತಿದ್ದಳು. ಅವಳ ಗೆಳತಿಯರಾದ ಬಳಿಕ ಉಳಿದಿಬ್ಬರೂ ಸಹ ದೇವರನ್ನು ಪೂಜಿಸಲು ಪ್ರಾರಂಭಿಸಿದರು ಮತ್ತು ಮಾಂಸಾಹಾರವನ್ನು ತಿನ್ನುವುದನ್ನು ನಿಲ್ಲಿಸಿದರು ಮತ್ತು ನಂತರ ಅವರ ನಡುವೆ ನಿಕಟತೆ ಹೆಚ್ಚಾಯಿತು. ಇವರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಆಧ್ಯಾತ್ಮದ ಸೆಳೆತ ಶುರು ಹಚ್ಚಿಕೊಂಡರು ಎನ್ನಲಾಗಿದೆ. ಬಳಿಕ ಬಾಬಾ ಭೇಟಿಗೆಂದು ಹೊರಟಿದ್ದಾರೆ.
ಇದು ಆತ್ಮಹತ್ಯೆಯೇ ಹೊರತು ಕೊಲೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಪ್ರಕರಣದ ಸುತ್ತ ಸಾಕಷ್ಟು ಅನುಮಾನಗಳೆದ್ದಿವೆ.