
ಉತ್ತರ ಪ್ರದೇಶ(ಮಾ.25): ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಸಂಪ್ರದಾಯಿಕ ಉಡುಪು ಬುರ್ಖಾ ನಿಷೇಧಿಸಬೇಕು ಎಂದು ಉತ್ತರ ಪ್ರದೇಸದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಆಗ್ರಹಿಸಿದ್ದಾರೆ. ಬುರ್ಖಾ ಅಮಾನವೀಯ ಅಭ್ಯಾಸವಾಗಿದೆ. ಇಷ್ಟೇ ಅಲ್ಲ ಇದು ವಹಾಬಿ ಸಂಸ್ಕೃತಿಯನ್ನು ಬಂಬಿಸುತ್ತದೆ ಎಂದು ಶುಕ್ಲಾ ಹೇಳಿದ್ದಾರೆ.
ಬುರ್ಖಾ, ಇಸ್ಲಾಮಿಕ್ ಶಾಲೆ ನಿಷೇಧಕ್ಕೆ ಮುಂದಾದ ಲಂಕಾ ಸರ್ಕಾರ!
ಮುಸ್ಲಿಂಮರ ಪ್ರಾರ್ಥನೆಯ ಅಜಾನ್ ಶಬ್ದ ಕುರಿತು ಜಿಲ್ಲಾ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಆನಂದ್ ಸ್ವರೂಪ್ ಶುಕ್ಲಾ, ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಬಲ್ಲಿಯಾ ಜಿಲ್ಲೆಯಲ್ಲಿ ಆಜಾನ್‌ನಿಂದ ಶಿಕ್ಷಣ ಚಟುವಟಿಕೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಶುಕ್ಲಾ ಹೋರಾಟ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ಬುರ್ಖಾ ವಿಚಾರ ಕೈಗೆತ್ತಿಕೊಂಡಿದ್ದಾರೆ.
'ಬುರ್ಖಾ, ಟೋಪಿ, ಗಡ್ಡಕ್ಕೆ ಬಿಜೆಪಿಯಿಂದ ನಿಷೇಧ
ಹಲವು ದೇಶಗಳು ಬುರ್ಖಾ ನಿಷೇಧ ಮಾಡಿದೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ಭದ್ರತಾ ಕಾರಣದಿಂದ ಬುರ್ಖಾ ನಿಷೇಧ ಮಾಡಲಾಗಿದೆ. ಇದೀಗ ಭಾರತದಲ್ಲೂ ಇದೇ ನೀತಿ ಅನುಸರಿಸಬೇಕು ಎಂದು ಶುಕ್ಲಾ ಹೇಳಿದ್ದಾರೆ. ಭಾರತದಲ್ಲಿ ತ್ರಿವಳಿ ತಲಾಖ್‌ಗೆ ಮುಕ್ತಿ ನೀಡಲಾಗಿದೆ. ಇದೀಗ ಬುರ್ಖಾ ಎಂದು ಶುಕ್ಲಾ ಹೇಳಿದ್ದಾರೆ. ಆನಂದ್ ಸ್ವರೂಪ್ ಶುಕ್ಲಾ ಹೇಳಿಕೆಗೆ ಪರ ವಿರೋಧಗಳು ಕೇಳಿಬಂದಿದೆ. ಮುಸ್ಲಿಂ ಸಂಘಟನೆಗಳು ಶುಕ್ಲಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ