ರಾಜಕೀಯ ನಾಯಕನ 'ದುರಾಸೆ': ಅನ್ಯ ಜಾತಿ ಯುವತಿಯೊಂದಿಗೆ ಮಗನ ವಿವಾಹ!

By Suvarna NewsFirst Published Mar 25, 2021, 3:48 PM IST
Highlights

ಪಂಚಾಯತ್ ಎಲೆಕ್ಷನ್‌ಗಾಗಿ ಮೀಸಲಾತಿ ಪಟ್ಟಿ ಬಿಡುಗಡೆ| ಇದು ಅನೇಕ ನಾಯಕರಿಗೆ ಶಾಕ್ ಕೊಟ್ಟಿದೆ| ಹುದ್ದೆಗಾಗಿ ಮಗನನ್ನೂ ಬಿಡದ ತಂದೆ

ಲಕ್ನೋ(ಮಾ.25): ಪಂಚಾಯತ್ ಎಲೆಕ್ಷನ್‌ಗಾಗಿ ಈಗಾಗಲೇ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಇದು ಅನೇಕ ನಾಯಕರಿಗೆ ಶಾಕ್ ಕೊಟ್ಟಿದೆ. ಯಾಕೆಂದರೆ ಪಟ್ಟಿ ಬದಲಾವಣೆಯಾಗಿರುವುದರಿಂದ ಅನೇಕ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲಾಗುತ್ತಿಲ್ಲ. ಆದರೆ ಇವರಲ್ಲಿ ಕೆಲ ನಾಯಕರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಗೆಲ್ಲಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಸದ್ಯ ಉತ್ತರ ಪ್ರದೇಶದ ನಾರಾಯಣಪುರ ಹಳ್ಳಿಯಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ ಎಂಬಂತಿದೆ. ಹೌದು ಇಲ್ಲಿನ ಸಾಮಾಆಣ್ಯ ವರ್ಗದ ನಾಯಕನೊಬ್ಬ ತನ್ನ ಮಗನ ವಿವಾಹ ಹಿಂದುಳಿದ ವರ್ಗದ ಯುವತಿಯೊಂದಿಗೆ ನೆರವೇರಿಸಿದ್ದಾರೆ. ಇದಾದ ಬಳಿಕ ತನ್ನ ಸೊಸೆಯನ್ನು ಚುನಾವಣಾ ಕಣಕ್ಕಿಳಿಸಿದ್ದಾರೆ.

ಐದು ವರ್ಷದಿಂದ ಸ್ಪರ್ಧಿಸಲು ತಯಾರಿ:

ಇಲ್ಲಿ ಹಳ್ಳಿಯ ಪ್ರಧಾನ ಸ್ಥಾನಕ್ಕೆ 2015 ರಲ್ಲಿ ಜಾರಿಗೊಳಿಸಿದ್ದ ಪಟ್ಟಿಯಲ್ಲಿ ಮೀಸಲಾತಿ ಇತ್ತು. ಆದರೆ ಈ ಬಾರಿ ಇದೇ ಮೊದಲ ಬಾರಿ ಈ ಹಳ್ಳಿ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಆದರೆ ಹೈಕೋರ್ಟ್‌ ಆದೇಶದ ಬಳಿಕ ಮತ್ತೊಂದು ಬಾರಿ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಹೀಗಿರುವಾಗ ಈ ಹಳ್ಳಿಯ ಮೀಸಲಾತಿಯೂ ಬದಲಾಗಿದೆ. ಇಲ್ಲಿಂದ  ಹಿಂದುಳಿದ ವರ್ಗದ ಮಹಿಳೆ ಸ್ಪರ್ಧಿಸಬೇಕಾಗಿತ್ತು. ಈ ಪಟ್ಟಿ ಹಳ್ಳಿಯಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದ ಸರ್ಫರಾಜ್‌ಗೂ ಶಾಕ್ ನೀಡಿದಂತ್ತಿತ್ತು, ಯಾಕೆಂದರೆ ಅವರು ಸಾಮಾಣ್ಯ ವರ್ಗದವರಾಗಗಿದ್ದರು.

ಮೀಸಲಾತಿ ಬದಲಾಗಿದ್ದಕ್ಕೆ ಹೊಸ ಉಪಾಯ

ಏನಾದರೂ ಸರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಹಠ ಇಟ್ಟಿದ್ದ ಸರ್ಫರಾಜ್ ಹೊಸ ಫಾರ್ಮುಲಾ ಕಂಡು ಹಿಡಿದಿದ್ದಾರೆ. ಹಳ್ಳಿಯ ಪ್ರಧಾನ ಆಗಬೇಕೆಂದು ತನ್ನ ಮಗ ಸೆರಾಜ್‌ ಮದುವೆ ಹಿಂದುಳಿದ ವರ್ಗದ ಯುವತಿ ಜೊತೆ ಮಾಡಿಸಿದ್ದಾರೆ. ಸದ್ಯ ಸೊಸೆಯನ್ನು ಕಣಕ್ಕಿಳಿಸಲು ಸರ್ಫರಾಜ್ ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಠನೆ ನೀಡಿರುವ ಸರ್ಫರಾಜ್ ಹಳ್ಳಿಯವರಿಗೆ ನನ್ನ ಕುಟುಂಬದವರೇ ಪ್ರಧಾನರಾಗಬೇಕೆಂಬ ಆಸೆ. ಹೀಗಾಗಿ ತಾನು ತನ್ನ ಮಗನ ಮದುವೆ ಈ ಯುವತಿಯೊಂದಿಗೆ ನೆರವೇರಿಸಿದ್ದೆನೆ ಎಂದಿದ್ದಾರೆ.

ಕಾನೂನು ಏನು ಹೇಳುತ್ತೆ?

ಕಾನೂನಿನ ಅನ್ವಯ ಯುವತಿಯೊಬ್ಬಳು ಬೇರೆ ಜಾತಿ ಯುವಕನೊಂದಿಗೆ ಮದುವೆಯಾದರೂ ಆಕೆಯ ಜಾತಿ ಬದಲಾಗುವುದಿಲ್ಲ ಎಂದಿದೆ. 

click me!