ಮಣ್ಣಿನ ರಸ್ತೆಯ ಮೇಲೆ ಭಯಾನಕವಾಗಿ ಕಾದಾಡುತ್ತಿದ್ದ ಎರಡು ಎತ್ತುಗಳ ಕಾದಾಟವನ್ನು ಹೋರಿಯೊಂದು ಮಧ್ಯೆ ಬಂದು ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಚಾರ್ಮಿಂಗ್ ಎನಿಮಲ್ಸ್ ಡೈಲಿ(charminganimalsdaily) ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಶಾಂತಿಪಾಲಕ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ವೀಡಿಯೋದಲ್ಲಿ ಎರಡು ಬಿಳಿ ಬಣ್ಣದ ಎತ್ತುಗಳು ಮಣ್ಣಿನ ರಸ್ತೆಯಲ್ಲಿ ತೀವ್ರವಾಗಿ ಕಾದಾಡುವುದನ್ನು ಕಾಣಬಹುದು. ಎರಡು ಕೋಪಗೊಂಡ ಎತ್ತುಗಳು ತಮ್ಮ ಕೊಂಬುಗಳಿಗೆ ಗುದ್ದಿಕೊಳ್ಳುತ್ತಾ ಪರಸ್ಪರ ತಳ್ಳುವುದನ್ನು ಕಾಣಬಹುದು. ಇದೇ ವೇಳೆ ಅಲ್ಲಿಗೆ ಬಂದ ಕಡುಗಪ್ಪು ಬಣ್ಣದ ಗೂಳಿಯೊಂದು ಇವುಗಳ ನಡುವೆ ಬಂದು ಎರಡು ಗೂಳಿಗಳನ್ನು ಬೇರೆ ಬೇರೆ ಮಾಡಿ ಕಾಳಗವನ್ನು ನಿಲ್ಲಿಸುತ್ತದೆ.
ಒಂಟಿ ಎತ್ತಿಗೆ 8 ಲಕ್ಷ ರೂ ಕೊಟ್ಟು ಖರೀದಿಸಿದ ರೈತ
ನಡುರಸ್ತೆಯಲ್ಲಿ ಗೂಳಿಗಳೆರಡು ಗುದ್ದಾಡಿದ ಘಟನೆ ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದು, ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕಪ್ಪು ಹಾಗೂ ಬಿಳಿ ಬಣ್ಣದ ಗೂಳಿಗಳೆರಡು ನಡು ರಸ್ತೆಯಲ್ಲಿ ಮದಗಜಗಳಂತೆ ಕಾದಾಟಕ್ಕೆ ಇಳಿದಿವೆ. ನಿರಂತರ ವಾಹನ ಸಂಚಾರವನ್ನು ಲೆಕ್ಕಿಸದೇ ರಸ್ತೆಯ ಮಧ್ಯದಲ್ಲೇ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಇವುಗಳು ಗುದ್ದಾಡಿವೆ. ಅಲ್ಲದೇ ವಾಹನ ಸವಾರರು ಹಾರ್ನ್ ಮಾಡಿದ್ರೂ, ರಸ್ತೆ ಮೇಲಿಂದ ಗೂಳಿಗಳು ಹಿಂದೆ ಸರಿಯಲು ಸಿದ್ಧರಿರಲಿಲ್ಲ. ಹೀಗಾಗಿ ವಾಹನ ಸವಾರರು ರಸ್ತೆಯನ್ನು ಗೂಳಿಗಳಿಗೆ ಬಿಟ್ಟು ರಸ್ತೆ ಬದಿಯಿಂದ ಸಂಚರಿಸಲು ಶುರು ಮಾಡಿದ್ದಾರೆ. ಇನ್ನು ಈ ಸಹಜವಾಗಿ ನಡೆದ ಗೂಳಿ ಕಾಳಗವನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿದ್ದರು.
ತನ್ನ ಮೇಲೆ ದಾಳಿ ಮಾಡಲು ಬಂದ ಎರಡು ಸಿಂಹಗಳನ್ನು ಎತ್ತೊಂದು ಬೆನ್ನಟ್ಟಿದ ಘಟನೆ ಗುಜರಾತ್ ರಾಜ್ಯದ ಹಳ್ಳಿಯೊಂದರಲ್ಲಿ ನಡೆದಿದ್ದು, ಇದರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುನಗಡ (Junagad) ಜಿಲ್ಲೆಯ ವಿಶ್ವದರ ತಾಲೂಕಿನ ಹದಮತಿಯಾ (Hadmatiya) ಹಳ್ಳಿಗೆ ಎರಡು ಸಿಂಹಗಳು ಸುತ್ತಾಡುತ್ತಾ ಬಂದಿದ್ದು, ಅಲ್ಲೇ ಇದ್ದ ಎತ್ತೊಂದರ ಮೇಲೆ ದಾಳಿ ಮಾಡಲು ಯತ್ನಿಸಿವೆ. ಆರಂಭದಲ್ಲಿ ಸ್ವಲ್ಪ ಹಿಂಜರಿದ ಎತ್ತು ನಂತರ ಈ ಎರಡೂ ಸಿಂಹಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದೆ. ಸಿಂಹಗಳು ಮತ್ತೆ ಮತ್ತೆ ದಾಳಿಗೆ ಯತ್ನಿಸುತ್ತಿದ್ದಂತೆ ಎತ್ತು ಅವುಗಳತ್ತ ಮುನ್ನುಗಿ ಅವುಗಳನ್ನು ಓಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೋಡಿದ ಅನೇಕರು ಎತ್ತಿನ ಸಾಹಸವನ್ನು ಕೊಂಡಾಡಿದ್ದಾರೆ.
ನಡುರಸ್ತೆಯಲ್ಲಿ ಗೂಳಿಗಳ ಗುದ್ದಾಟ... ವಿಡಿಯೋ ವೈರಲ್
ಇತ್ತೀಚಿನ ವರ್ಷಗಳಲ್ಲಿ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದರೆ ಯಾರಿಗೂ ಅಚ್ಚರಿ ಎನಿಸುವುದಿಲ್ಲ. ಏಕೆಂದರೆ ಕಾಡುಗಳ ನಾಶದ ಪರಿಣಾಮ ಕಾಡು ಪ್ರಾಣಿಗಳು ಕಾಡಿನ ಸಮೀಪದ ಗ್ರಾಮಗಳಿಗೆ ಬಂದು ದಾಳಿ ಮಾಡುವುದು ಸಾಮಾನ್ಯ ಎನಿಸಿದೆ. ಪ್ರಾಣಿ ಹಾಗೂ ಮನುಷ್ಯರ ಮುಖಾಮುಖಿಯೂ ಕಾಡು ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಹೇಗೆ ಕಳೆದುಕೊಳ್ಳುತ್ತಿವೆ ಎಂಬುದರ ಕುರಿತ ಚರ್ಚೆಯೊಂದಿಗೆ, ಪ್ರತಿ ವರ್ಷವೂ ಇಂತಹ ಮುಖಾಮುಖಿಗಳು ಹೆಚ್ಚಾಗುತ್ತಿವೆ.