ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ ಅಪ್ಪಳಿಸಿದ ಬುಲ್‌ಬುಲ್ ಚಂಡ ಮಾರುತ|ಒಡಿಶಾದಲ್ಲಿ ಮೂರು ಸಾವಿರ ಮಂದಿಯನ್ನು ಸ್ಥಳಾಂತರ|ಗಾಳಿಯ ರಭಸಕ್ಕೆ ಧರೆಗುರಳಿದ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು| ಬುಲ್‌ಬುಲ್ ಅಕ್ರಮಣಕ್ಕೆ ಬೆಚ್ಚಿ ಬಿದ್ದ ಬಾಂಗ್ಲಾದೇಶ| 18 ಲಕ್ಷ ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ|
ಕೋಲ್ಕತಾ[ನ.10]: ನಿರೀಕ್ಷೆಯಂತೆ ಬುಲ್‌ಬುಲ್ ಚಂಡ ಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ ಅಪ್ಪಳಿಸಿದ್ದು, ಓರ್ವನನ್ನು ಬಲಿ ಪಡೆದುಕೊಂಡಿದೆ. ಭಾರೀ ಮಳೆ ಹಾಗೂ ಗಾಳಿಯ ರೌದ್ರಾವತಾರದಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಒಡಿಶಾದಲ್ಲಿ ಮೂರು ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಗಾಳಿಯ ರಭಸಕ್ಕೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರಳಿದ್ದು, ಭಾರೀ ಟ್ರಾಫಿಕ್ ಜಾಮ್ ಜನ ಜೀವನವನ್ನು ನರಕ ಸದೃಶವಾಗಿಸಿದೆ. ಮುಂಜಾಗೃತ ಕ್ರಮವಾಗಿ ಕೋಲ್ಕತಾ ಏರ್‌ಪೋರ್ಟ್ ಅನ್ನು ಶನಿವಾರ ಸಂಜೆ 6 ರಿಂದ ಭಾನುವಾರ ಮುಂಜಾನೆ 6 ಗಂಟೆವರೆಗೆ ಸ್ಥಗಿತಗೊಳಿಸಲಾಗಿದೆ. 120 ಕಿ.ಮಿ ವೇಗದಗಾಳಿ, 2 ಮೀಟರ್ ಎತ್ತರದ ರಕ್ಕಸ ಅಲೆಗಳು ಸಮುದ್ರ ತೀರದಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
undefined
ಕರಾವಳಿಗೆ ಬುಲ್ ಬುಲ್ ದಾಳಿ: ಒಡಿಶಾ, ಪ.ಬಂಗಾಳದಲ್ಲಿ ಅಲರ್ಟ್
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು, ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಸ್ಥಿಯನ್ನು ಮೇಲ್ವಿಚಾರಣೆಯನ್ನು ವಹಿಸಿದ್ದು, ಭಯಭೀತರಾಗಬೇಡಿ ಎಂದು ಜನರಲ್ಲಿ ಕೇಳಿ ಕೊಂಡಿದ್ದಾರೆ. ಅತ್ತ ನೆರೆಯ ಬಾಂಗ್ಲಾದೇಶ ಬುಲ್‌ಬುಲ್ ಅಕ್ರಮಣಕ್ಕೆ ಬೆಚ್ಚಿ ಬಿದ್ದಿದ್ದು, 18 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.
ನವೆಂಬರ್ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ