ರಾಮ ಮಂದಿರ ಕಿಚ್ಚು ಹಚ್ಚಿಸಿದ್ದೇ ಸಿಂಘಾಲ್, ಅಡ್ವಾಣಿ

By Kannadaprabha News  |  First Published Nov 10, 2019, 11:00 AM IST

ರಾಮಚಂದ್ರ ಪರಮ ಹಂಸರಿಂದ ರಾಮಮಂದಿರ ಆಂದೋಲನ ಆರಂಭ | ಈ ಆಂದೋಲನಕ್ಕೆ ವೇಗ ಕೊಟ್ಟಿದ್ದು ಸಿಂಘಾಲ್, ಅಡ್ವಾಣಿ |  ಒಂದು ವೇಳೆ ಸಾಕ್ಷಾತ್ ಶ್ರೀರಾಮನೇ ಬಂದು ನಾನು ಅಯೋಧ್ಯೆಯಲ್ಲಿ ಹುಟ್ಟಿಲ್ಲ ಎಂದು ಹೇಳಿದರೂ ನಾನು ನಂಬುದಿಲ್ಲ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದರು 


ನವದೆಹಲಿ (ನ. 10): ಅಯೋಧ್ಯೆಯ ವಿವಾದಿತ ಜಾಗವನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡುವ ಮೂಲಕ ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಆ ಮೂಲಕ ಸ್ವತಂತ್ರ ಪೂರ್ವ ದಲ್ಲಿ ಆರಂಭವಾಗಿದ್ದ ವಿವಾದ ತಾರ್ಕಿಕ ಅಂತ್ಯ ಕಂಡಿದೆ.

1934 ರಲ್ಲಿ ಪ್ರಾರಂಭವಾದ ರಾಮ ಮಂದಿನ ನಿರ್ಮಾಣ ಆಂದೋಲನ, 1990 ರಲ್ಲಿ ‘ಮಂದಿರ್ ವಹೀ ಬನಾಯೇಂಗೆ’ ಹೀಗೆಂದು ಹೇಳುತ್ತಾ ರಥ ಹತ್ತಿದ ಅಡ್ವಾಣಿ ಮತ್ತಷ್ಟು ತೀವ್ರಗೊಳಿಸಿದ್ದರು. 90 ರ ದಶಕದ ಆದ್ಯಕಾಲದಲ್ಲಿ, ರಾಮ ಜನ್ಮಭೂಮಿ ನ್ಯಾಸ್ ಮುಖ್ಯಸ್ಥ ರಾಮ ಚಂದ್ರ ಪರಮಹಂಸರಿಂದ ಜನ್ಮ ತೆಳೆದ ರಾಮ ಮಂದಿರ ನಿರ್ಮಾಣಕ್ಕೆ ರೂಪುರೇಶೆ ಹಾಕಿದ್ದು, ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್. ಬಳಿಕ ದೇಶಾದ್ಯಂತ ರಥೆಯಾತ್ರೆ ಮಾಡಿ ಆಂದೋಲನವನ್ನು ಮತ್ತಷ್ಟು ಬಲಗೊಳಿಸಿದ್ದು, ಲಾಲ್ ಕೃಷ್ಣ ಅಡ್ವಾಣಿ.

Tap to resize

Latest Videos

undefined

ಅಯೋಧ್ಯೆ ತೀರ್ಪು: ಬಿಜೆಪಿಗೆ ಜೀವ ಕೊಟ್ಟಿದ್ದೇ ರಾಮಜನ್ಮಭೂಮಿ ಹೋರಾಟ

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅಶೋಕ್ ಸಿಂಘಾಲ್, ಬಾಬ್ರಿ ಮಸೀದಿ ಇರುವ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರ ಬಗ್ಗೆ ರೂಪುರೇಶೆ ತಯಾರಿಸಿದ್ದರು. 1980 ರಲ್ಲಿ ಅಡ್ವಾಣಿ ಆಂದೋಲನವನ್ನು ರಾಜಕೀಯಗೊಳಿಸುವ ಮೂಲಕ ಮತ್ತಷ್ಟು ಪ್ರಚಾರ ನೀಡಿದ್ದರು. 1984 ರಲ್ಲಿ ವಿಎಚ್‌ಪಿಯ ಜಂಟಿ ಕಾರ್ಯದರ್ಶಿಯಾಗಿದ್ದಾಗ ಸಿಂಘಾಲ್, ಧರ್ಮ ಸಂಸತ್ ಆರಂಭಿಸುವ ಮೂಲಕ ಆಂದೋಲನಕ್ಕೆ ಸಾಧು ಸಂತರನ್ನು ಸೆಳೆದಿದ್ದರು.

ಬಳಿಕ ತಾವು ವಿಎಚ್ ಪಿಯ ಕಾರ್ಯಾಧ್ಯಕ್ಷರಾದ ಬಳಿಕ, ಆಂದೋಲನವನ್ನು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ಯೋಜನೆ ರೂಪಿಸಿದ ಸಿಂಘಾಲ್, ಅಡ್ವಾಣಿ ನೇತೃತ್ವದಲ್ಲಿ ರಥ ಯಾತ್ರೆ ಸಂಘಟಿಸಿದ್ದರು. ಅಲ್ಲದೇ ಹಿಂದುತ್ವ ಸಿದ್ಧಾಂತಗಳ ಮೂಲಕ ಹೆಚ್ಚೆಚ್ಚು ಜನರನ್ನು ಸೆಳೆಯುವ ಯೋಜನೆ ಹಾಕಿದ್ದರು. ಮಾತ್ರವಲ್ಲ ಆರೆಸ್ಸೆಸ್ ಮತ್ತು ಬಿಜೆಪಿ ನಡುವೆ ಕೊಂಡಿಯಾಗಿಯೂ ಕೆಲಸ ಮಾಡಿದ್ದರು. 2014 ರಲ್ಲಿ ಸಿಂಘಾಲ್ ಕಾಲಾಧೀನರಾದರು.

ಶ್ರೀರಾಮನ ಪರವಾಗಿ ವಾದಿಸಿದ್ದ ಕನ್ನಡಿಗ ವಕೀಲ ಕೆ ಎನ್ ಭಟ್

1980 ರ ಲೋಕಸಭಾ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ತನ್ನ ಪ್ರಣಾಳಿಕೆಗೆ ಸೇರಿಸಿಕೊಂಡ ಬಿಜೆಪಿ, ಅಂದಿನ ಪಕ್ಷದ ಅಧ್ಯಕ್ಷರಾಗಿದ್ದ ಅಡ್ವಾಣಿ ನೇತೃತ್ವದಲ್ಲಿ ಉಗ್ರ ಹಿಂದುತ್ವ ಪ್ರತಿಪಾದನೆ ಮಾಡುವ ಮೂಲಕ 85 ಸೀಟುಗಳನ್ನು ಗೆದ್ದಿತ್ತು. ಬಳಿಕ 1990 ರ ಲ್ಲಿ ಅಡ್ವಾಣಿ ನಡೆಸಿದ ರಥಯಾತ್ರೆ, ಆಗಷ್ಟೇ ದೇಶದಲ್ಲಿ ನೆಲೆಯೂರುತ್ತಿದ್ದ ಬಿಜೆಪಿಗೆ ದೇಶಾದ್ಯಂತ ಹೊಸ ಗುರುತು ನೀಡಿದ್ದು ಸುಳ್ಳಲ್ಲ.

click me!