ರಾಮಲಲ್ಲಾ ಪರ ಪ್ರಬಲ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಾಶರನ್|ಪ್ರಮುಖ ವ್ಯಾಜ್ಯಗಳ ಕುರಿತಾದ ಪ್ರತಿಯೊಂದು ವಿಚಾರಗಳ ಮಾಹಿತಿಗಳು ಪರಾಶರನ್ ಅರಿವಿನ ಭಂಡಾರದಲ್ಲಿವು|93 ರ ಇಳಿ ವಯಸ್ಸಿನಲ್ಲಿಯೂ ದಣಿವರಿಯದೇ ವಾದ ಮಂಡಿಸುತ್ತಿದ್ದ ಕೆ. ಪರಾಶರನ್|
ನವದೆಹಲಿ[ನ.10]: ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ವೇಳೆ ರಾಮಲಲ್ಲಾ ಪರ ಪ್ರಬಲ ವಾದ ಮಂಡಿಸಿದವರ ಪೈಕಿ ಹಿರಿಯ ವಕೀಲ ಕೆ. ಪರಾಶರನ್ ಪ್ರಮುಖರು. ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕಾಗಿ ಸುಪ್ರೀಂಕೋರ್ಟ್ ದೈನಂದಿನ ವಿಚಾರಣೆ ಆರಂಭಿಸಿದ ಬಳಿಕ, ರಾಮಲಲ್ಲಾ ಪರವಾಗಿ ಬಲವಾಗಿ ವಾದ ಮಂಡಿಸಿ ಗಮನ ಸೆಳೆದವರು ಮಾಜಿ ಅಟಾರ್ನಿ ಜನರಲ್ ಸಹ ಆಗಿರುವ ಪರಾಶರನ್ ಮತ್ತು ಅವರ ತಂಡ.
ಅಯೋಧ್ಯೆ ತೀರ್ಪಿನ ಬಳಿಕ ಬಾಬ್ರಿಯ ಮತ್ತೊಂದು ತೀರ್ಪು ಶೀಘ್ರ ಪ್ರಕಟ
undefined
93 ರ ಇಳಿ ವಯಸ್ಸಿನ ಹೊರತಾಗಿಯೂ, ಪರಾಶರನ್ ಬಾಬ್ರಿ ಮಸೀದಿ-ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ಆರಂಭವಾಗುವ ಮುನ್ನವೇ ನ್ಯಾಯಾಲಯದ ಒಳಗಿರುತ್ತಿದ್ದರು. ಬೆಳಗ್ಗೆ 10.30 ಕ್ಕೆ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದ ಪರಾಶರನ್ ಕಲಾಪ ಮುಗಿಯುವ ಸಂಜೆ 4 ಅಥವಾ 5 ಗಂಟೆವರೆಗೂ ನ್ಯಾಯಾಲಯದಲ್ಲಿ ದಣಿವರಿಯದೇ ವಾದ ಮಂಡಿಸುತ್ತಿದ್ದರು. ಪ್ರಮುಖ ವ್ಯಾಜ್ಯಗಳ ಕುರಿತಾದ ಪ್ರತಿಯೊಂದು ವಿಚಾರಗಳ ಮಾಹಿತಿಗಳು ಪರಾಶರನ್ ಅರಿವಿನ ಭಂಡಾರದಲ್ಲಿವು. ಪಿ.ವಿ ಯೋಗೇಶ್ವರನ್, ಅನಿರುಧ್ ಶರ್ಮಾ, ಶ್ರೀಧರ್ ಪೊಟ್ಟರಾಜು, ಅದಿತಿ ದಾನಿ, ಅಶ್ವಿನ್ ಕುಮಾರ್. ಡಿ.ಎಸ್ ಹಾಗೂ ಭಕ್ತಿ ವರ್ಧನ್ ಸಿಂಗ್ ಅವರು ಪರಶರನ್ ಅವರಿಗೆ ಸಲಹೆನೀಡುತ್ತಿದ್ದ ವಕೀಲರ ತಂಡದಲ್ಲಿದ್ದರು.
ವಿವಾದಿತ ಸ್ಥಳ ರಾಮಮಂದಿರಕ್ಕೆ ಸಿಕ್ಕಿದ್ದು ಹೇಗೆ?
ರಾಮ ಜನ್ಮಭೂಮಿ ನಕ್ಷೆ ಹರಿದಿದ್ದ ಧವನ್ ಜೊತೆ ಪರಾಶರನ್ ಸೆಲ್ಫೀ
ಅಯೋಧ್ಯೆ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಿದ ಅ.16ರಂದು ವಿಚಾರಣೆವೇಳೆ ಕೋರ್ಟ್‌ನಲ್ಲಿ ರಾಮಜನ್ಮಭೂಮಿಗೆ ಸಂಬಂಧಿಸಿದ ನಕಾಶೆಯನ್ನೇ ಹರಿದುಹಾಕಿದ್ದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಅವರ ಜೊತೆ ಸೆಲ್ಫೀಗಾಗಿ ಪರಾಶರನ್ ಕೋರ್ಟ್ ಆವರಣದ ಹೊರಗೆ 15 ನಿಮಿಷ ಕಾದು ಕುಳಿತಿದ್ದರು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅ.16 ರಂದು ಮುಕ್ತಾಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಅಂದು ಕೋರ್ಟ್ ಆವರಣದ ಹೊರಗೆ 15 ನಿಮಿಷ ಕಾಯ್ದು ಕುಳಿತ ಪರಾಶರನ್ ಅವರು ರಾಜೀವ್ ಧವನ್ ಅವರ ಜೊತೆ ಸೆಲ್ಫೀ ತೆಗೆದುಕೊಂಡಿದ್ದರು. ತಮ್ಮ ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊಡಲು ನ್ಯಾಯಾಲಯದ ಒಳಗೆ ವಕೀಲರು ಗುದ್ದಾಡುತ್ತಾರೆ. ಆದರೆ, ನ್ಯಾಯಾಲಯದ ಹೊರಗೆ, ವಕೀಲರು ಆತ್ಮೀಯತೆಯಿಂದ ಇರುತ್ತಾರೆ ಎಂಬುದು ಈ ಸೆಲ್ಫೀ ಉದ್ದೇಶ ಎಂದು ಅವರು ಪ್ರತಿಪಾದಿಸಿದ್ದರು.