26 ವರ್ಷದ ಯುವತಿಯೊಬ್ಬಳು 16 ವರ್ಷದ ಹುಡುಗನ ಗೀಳಿಗೆ ಬಿದ್ದಿದ್ದು, ಆತನ ಮನೆಗೇ ಬಂದಿರಲು ಶುರು ಮಾಡಿದ್ದಾಳೆ. ಅಲ್ಲಿಂದ ಹೋಗೆಂದರೆ ಅವನ ಜೊತೆ ಇರಲು ಬಿಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.
ಉತ್ತರ ಪ್ರದೇಶದ ಮೀರತ್‌ನ ಮಹಿಳೆಯೊಬ್ಬಳು 16 ವರ್ಷದ ಹುಡುಗನ ಮೇಲೆ ಪ್ರೀತಿಯ ಗೀಳನ್ನು ಹೊಂದಿದ್ದು, ಹದಿಹರೆಯದವರನ್ನು ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸಿದ್ದಾರೆ ಮತ್ತು ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. 26ರ ಯುವತಿ ತಾನು ಆತನೊಂದಿಗೆ ಇದ್ದು ಮದುವೆಯಾಗಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಯುವತಿಯು ಸಾಮಾಜಿಕ ಮಾಧ್ಯಮದ ಮೂಲಕ ಹುಡುಗನೊಂದಿಗೆ ಸ್ನೇಹ ಬೆಳೆಸಿದಳು. ಕಡೆಗೆ ಸೀದಾ ಹುಡುಗನ ಮನೆಗೆ ಬಂದು ಅಲ್ಲಿಯೇ ಇರುವುದಾಗಿ ಹಟ ಹಿಡಿದಿದ್ದಾಳೆ.
‘ಮಹಿಳೆ ಕಳೆದ ಕೆಲವು ದಿನಗಳಿಂದ ನಮ್ಮ ಮನೆಯಲ್ಲಿಯೇ ವಾಸವಿದ್ದು, ಆಕೆಯನ್ನು ಮನೆಯಿಂದ ಹೊರ ಹೋಗುವಂತೆ ಕೇಳಿದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ’ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.
ಆಸಿನ್ ಹೆರಿಗೆ ಸಮಯದಲ್ಲಿ ವಿಮಾನ ರೆಡಿ ಇಟ್ಟುಕೊಂಡು ಕಾದಿದ್ದ ಅಕ್ಷಯ್ ಕುಮಾರ್!
ಪೋಲೀಸರು ಸಹ 'ಸಮಸ್ಯೆಯನ್ನು ಪರಿಹರಿಸಲು ವಿಫಲವಾದಾಗ' ಬಾಲಕನ ತಂದೆ ಸಹಾಯಕ್ಕಾಗಿ ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನ್ನು ಸಂಪರ್ಕಿಸಿದ್ದಾರೆ!
'ನನ್ನ ಮಗ ಓದಿಲ್ಲ, ಎಲ್ಲಿಯೂ ಕೆಲಸ ಮಾಡುತ್ತಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಈಗ ಆಕೆ ನಮ್ಮ ಮನೆಯಲ್ಲಿಯೇ ಇದ್ದಾಳೆ' ಎಂದು ಹುಡುಗನ ತಂದೆ ಹೇಳಿದ್ದಾರೆ. 'ನಾವು ಅವಳನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದಾಗ, ಅವಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ' ಎಂದು ಅವರು ತಿಳಿಸಿದ್ದಾರೆ.
ಪೋಲೀಸರು ಮಧ್ಯ ಪ್ರವೇಶಿಸಿ ಮಹಿಳೆಯನ್ನು ಆಕೆಯ ಸಂಬಂಧಿಕರಿಗೆ ಹಸ್ತಾಂತರಿಸಿದಾಗ, ಆಕೆಯ ಕುಟುಂಬವು 'ತಮಗೆ ಕೆಟ್ಟ ಹೆಸರು ತಂದಿದ್ದಾಳೆ' ಎಂದು ಆರೋಪಿಸಿ ಆಕೆಯನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ನಿರಾಕರಿಸಿದ್ದರಿಂದ ಅವಳು ಮತ್ತೆ ಹುಡುಗನ ಮನೆಗೆ ಹಿಂದಿರುಗಿದ್ದಾಳೆ.
ಪಾಸಿಟಿವ್ ವೈಬ್ಸ್ ಬೇಕಾ? ಡ್ರೈವ್ ಮಾಡುತ್ತಾ ಕಾರಲ್ಲೇ ಮೆಹಫಿಲ್ ನಡೆಸಿದ ಅಪ್ಪ ಮಗಳ ಈ ವಿಡಿಯೋ ನೋಡಿ
'ಇದು ನಮಗೂ ವಿಚಿತ್ರ ಪರಿಸ್ಥಿತಿಯಾಗಿದೆ. ಮಹಿಳೆ ಅಪ್ರಾಪ್ತ ವಯಸ್ಕನೊಂದಿಗೆ ಇರಬೇಕೆಂದು ಒತ್ತಾಯಿಸುತ್ತಾಳೆ. ನಾವು ಅವಳನ್ನು ಮಹಿಳಾ ಕಲ್ಯಾಣ ವಿಭಾಗಕ್ಕೆ ಒಪ್ಪಿಸಿದ್ದೇವೆ, ಆದರೆ ಅವಳು ಅಲ್ಲಿಂದಲೂ ಹಿಂತಿರುಗಿ ಅವನ ಮನೆಗೆ ಹೋಗಿದ್ದಾಳೆ' ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ ಕೈರಾನಾ) ವೀರೇಂದ್ರ ಕುಮಾರ್ ಹೇಳಿದ್ದಾರೆ. ಇದೀಗ ಪೋಲೀಸರು ಆಕೆಯ ಪೋಷಕರನ್ನು ಠಾಣೆಗೆ ಕರೆಸಿದ್ದಾರೆ.