ಮಾಲಿನ್ಯವೆಂದು ನಿಖಿಲ್‌ ಪಾಡ್‌ಕಾಸ್ಟ್‌ನಿಂದ ಏಜ್‌ ರಿವರ್ಸಿಂಗ್‌ ಸಿಇಒ ಅರ್ಧಕ್ಕೇ ನಿರ್ಗಮನ

Published : Feb 05, 2025, 09:35 AM ISTUpdated : Feb 05, 2025, 09:36 AM IST
ಮಾಲಿನ್ಯವೆಂದು ನಿಖಿಲ್‌ ಪಾಡ್‌ಕಾಸ್ಟ್‌ನಿಂದ ಏಜ್‌ ರಿವರ್ಸಿಂಗ್‌ ಸಿಇಒ ಅರ್ಧಕ್ಕೇ ನಿರ್ಗಮನ

ಸಾರಾಂಶ

ಭಾರತದ ವಾಯು ಮಾಲಿನ್ಯದಿಂದಾಗಿ ಏಜ್‌ ರಿವರ್ಸಿಂಗ್‌ ಸಿಇಒ ಬ್ರಯಾನ್‌ ಜಾನ್ಸನ್‌ ಪಾಡ್‌ಕಾಸ್ಟ್‌ ಮಧ್ಯೆದಲ್ಲೇ ಎದ್ದು ಹೋದ ಘಟನೆ ನಡೆದಿದೆ. ಜಾನ್ಸನ್‌ ಅವರು ಮಾಲಿನ್ಯದಿಂದ ಉಂಟಾದ ಚರ್ಮದ ತೊಂದರೆ ಮತ್ತು ಕಣ್ಣು, ಗಂಟಲಿನ ಉರಿಯ ಬಗ್ಗೆಯೂ ಮಾತನಾಡಿದ್ದಾರೆ.

ನವದೆಹಲಿ (ಫೆ.5): ಭಾರತದ ಬಹುತೇಕ ನಗರಗಳ ವಾಯು ಗುಣಮಟ್ಟ ಅತಿ ಕಳಪೆಯಾಗಿರುವ ಹೊತ್ತಿನಲ್ಲಿ, ಇದೇ ಕಾರಣ ನೀಡಿ ಏಜ್‌ ರಿವರ್ಸಿಂಗ್‌ನ ಸಿಇಒ ಬ್ರಯಾನ್‌ ಜಾನ್ಸನ್‌ ಅವರು ಝೆರೋದಾ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರೊಂದಿಗಿನ ನ ಪಾಡ್‌ಕಾಸ್ಟ್‌ನ ನಡುವೆಯೇ ಎದ್ದು ಹೋದ ಘಟನೆ ನಡೆದಿದೆ. ಸದಾ ಯುವಕನಾಗಿದ್ದು, ಸಾವನ್ನು ಜಯಿಸಲು ವಿವಿಧ ಚಿಕಿತ್ಸೆಗಳಿಗೆ ಒಳಗಾಗಿರುವ ಜಾನ್ಸನ್‌ ತಮ್ಮ ‘ಡೋನ್ಟ್‌ ಡೈ’ ಪುಸ್ತಕದ ಪ್ರಚಾರಕ್ಕೆ ಭಾರತಕ್ಕೆ ಆಗಮಿಸಿ, 6 ದಿನ ನೆಲೆಸಿದ್ದರು. ಕಾಮತ್‌ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲೂ ಭಾಗವಹಿಸಿದ್ದ ಜಾನ್ಸನ್‌, ಈ ವೇಳೆ ಮಾಸ್ಕ್‌ ಹಾಗೂ ಗಾಳಿಯನ್ನು ಶುದ್ಧೀಕರಿಸುವ ಉಪಕರಣವನ್ನೂ ಧರಿಸಿದ್ದರು.

ಅಮೆರಿಕಕ್ಕೆ ತೆರಳಿದ ಬಳಿಕ ಈ ಬಗ್ಗೆ ಮಾತನಾಡಿದ ಜಾನ್ಸನ್‌, ‘ಗಾಳಿಯ ಗುಣಮಟ್ಟ 130 ಇತ್ತು. ಒಂದು ದಿನ ಇದಕ್ಕೆ ಒಡ್ಡಿಕೊಂಡಿರುವುದು 3.4 ಸಿಗರೇಟ್‌ ಸೇದುವುದಕ್ಕೆ ಸಮ. ಮಾಲಿನ್ಯದಿಂದಾಗಿ ನನ್ನ ಚರ್ಮ ಒಡೆದಿದ್ದು, ಕಣ್ಣು ಹಾಗೂ ಗಂಟಲಲ್ಲಿ ಉರಿ ಕಾಣಿಸಿಕೊಂಡಿದೆ. ಆದರೆ ಇದನ್ನು ಭಾರತದಲ್ಲಿ ಸಾಮಾನ್ಯ ಎಂಬಂತೆ ಕಾಣಲಾಗುತ್ತಿದೆ’ ಎಂದಿದ್ದಾರೆ.

 

ತುರ್ತು ಕರೆ ಮಾಡಬೇಕಿದೆ ಒಮ್ಮೆ ಫೋನ್ ಕೊಡಿ, ಹೊಸ ಸೈಬರ್ ಸ್ಕ್ಯಾಮ್ ಎಚ್ಚರಿಸಿದ ನಿಖಿಲ್ ಕಾಮತ್

ಇದೇ ವೇಳೆ, ಅಮೆರಿಕದಲ್ಲಿ ಉಲ್ಬಣಿಸುತ್ತಿರುವ ಬೊಜ್ಜು ಸಮಸ್ಯೆಯ ಬಗ್ಗೆ ಮಾತಾಡುತ್ತಾ, ದೀರ್ಘಾವಧಿಯಲ್ಲಿ ಇದು ಮಾಲಿನ್ಯಕ್ಕಿಂತಲೂ ಹಾನಿಕರ ಎಂದಿದ್ದಾರೆ.

ನಿಖಿಲ್‌ ಕಾಮತ್‌ ಪಾಡ್‌ಕಾಸ್ಟ್‌ನಲ್ಲಿ 2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ ಮೋದಿ ಮಾತು!

ಅಕಾಡೆಮಿ ಪ್ರಶಸ್ತಿ ವಾಪಸ್‌ ತಡೆಗೆ ಹಲವು ಹೊಸ ಕ್ರಮ
ನವದೆಹಲಿ:
ಅಕಾಡೆಮಿಗಳ ಪ್ರಶಸ್ತಿ ಘೋಷಣೆಗೂ ಮುನ್ನ ಪುರಸ್ಕೃತರ ಪೂರ್ವಾನುಮತಿ ಕಡ್ಡಾಯ ಮಾಡಬೇಕು ಎಂದು ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸೇರಿದಂತೆ ನಾನಾ ಕಾರಣಕ್ಕೆ ಪ್ರಶಸ್ತಿ ಮರಳಿಸುವ ಸಂಪ್ರದಾಯ ಹೆಚ್ಚುತ್ತಿದೆ. ಇದು ದೇಶಕ್ಕೆ ಮತ್ತು ಪ್ರಶಸ್ತಿಗೆ ಮಾಡುವ ಅವಮಾನ . ಹೀಗಾಗಿ ರಾಷ್ಟ್ರೀಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲು ಬಯಸಿದರೆ ಅದಕ್ಕೆ ಪುರಸ್ಕೃತರ ಒಪ್ಪಿಗೆಯನ್ನು ಪಡೆಯಬೇಕು. ಒಪ್ಪಿಗೆ ಪಡೆಯುವ ವೇಳೆ ರಾಜಕೀಯ ಕಾರಣಕ್ಕೆ ಮರಳಿಸಲ್ಲ ಎಂದು ಭರವಸೆ ಪಡೆಯಬೇಕು, ಒಂದು ವೇಳೆ ಮರಳಿಸಿದರೆ ಮುಂದೆ ಯಾವುದೇ ಪ್ರಶಸ್ತಿಗೆ ಹೆಸರು ಪರಿಗಣಿಸಲ್ಲ ಎಂಬುದನ್ನು ಅವರ ಗಮನಕ್ಕೆ ತರಬೇಕು’ ಎಂದು ಸಮಿತಿ ಹೇಳಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!