10 ರೂಪಾಯಿ ಭಿಕ್ಷೆ ನೀಡಿದ ಬೈಕ್‌ ಸವಾರಗೆ 1 ವರ್ಷ ಜೈಲು 5000 ರು. ದಂಡದ ಭೀತಿ!

Published : Feb 05, 2025, 08:23 AM IST
10 ರೂಪಾಯಿ ಭಿಕ್ಷೆ ನೀಡಿದ ಬೈಕ್‌ ಸವಾರಗೆ 1 ವರ್ಷ ಜೈಲು 5000 ರು. ದಂಡದ ಭೀತಿ!

ಸಾರಾಂಶ

ಇಂಧೋರ್‌ನಲ್ಲಿ ಭಿಕ್ಷೆ ಬೇಡುವವರಿಗೆ ಹಣ ನೀಡಿದ ಬೈಕ್ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸುವ ಭೀತಿ ಎದುರಾಗಿದೆ. ಕಳೆದ 2 ವಾರಗಳಲ್ಲಿ ಇಂಧೋರ್‌ನಲ್ಲಿ ದಾಖಲಾದ ಎರಡನೇ ಪ್ರಕರಣವಿದು. ಭಿಕ್ಷಾಟನೆ ನಿಷೇಧದ ಹೊರತಾಗಿಯೂ ಈ ಘಟನೆ ನಡೆದಿದೆ.

ಇಂಧೋರ್‌ (ಫೆ.4): ಭಿಕ್ಷಾಟನೆಗೆ ನಿಷೇಧವಿದ್ದರೂ ಭಿಕ್ಷೆ ಬೇಡಿದ ವ್ಯಕ್ತಿಗೆ 10 ರು.ನೀಡಿದ ಮಧ್ಯಪ್ರದೇಶದ ಇಂಧೋರ್‌ನ ಬೈಕ್‌ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರು. ದಂಡದ ಭೀತಿ ಎದುರಾಗಿದೆ. ಇದು ಕಳೆದ 2 ವಾರದಲ್ಲಿದ ಇಂಧೋರ್‌ನಲ್ಲಿ ದಾಖಲಾದ 2ನೇ ಪ್ರಕರಣವಾಗಿದೆ. ಸೋಮವಾರ ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಬೈಕ್ ಸವಾರ 10 ರು. ನೀಡಿದ್ದ. ಹೀಗಾಗಿ ಆತನ ಬಿಎನ್‌ಎಸ್‌ ಕಾನೂನಿನಡಿ ಪ್ರಕರಣ ದಾಖಲಾಗಿದೆ. ಒಂದು ವೇಳೆ ಬೈಕ್ ಸವಾರ ತಪ್ಪೆಸಗಿರುವುದು ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 5 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು. 

ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 223 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭಿಕ್ಷುಕ ನಿರ್ಮೂಲನಾ ತಂಡದ ಅಧಿಕಾರಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ಕಾನೂನಿನಡಿಯಲ್ಲಿ, ಅಪರಾಧಿಗಳು ಒಂದು ವರ್ಷದವರೆಗೆ ಜೈಲು ಶಿಕ್ಷೆ, 5,000 ರೂ. ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ. ಭಿಕ್ಷಾಟನೆ ಮತ್ತು ಭಿಕ್ಷುಕರಿಂದ ವಸ್ತುಗಳನ್ನು ಖರೀದಿಸುವುದರ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ಇಂದೋರ್ ಭಾರತದ ಮೊದಲ ಭಿಕ್ಷುಕ-ಮುಕ್ತ ನಗರವಾಗಲು ಕೆಲಸ ಮಾಡುತ್ತಿದೆ.

 

ಸತತ 7ನೇ ವರ್ಷ ಸ್ವಚ್ಛ ನಗರಿ ಬಿರುದು ಪಡೆದ ಇಂದೋರ್

ಜ.23ರಂದು ಇದೇ ರೀತಿ ಘಟನೆ ನಡೆದಿತ್ತು ಖಾಂಡ್ವಾ ರಸ್ತೆಯ ದೇವಾಲಯದ ಮುಂದೆ ಭಿಕ್ಷುಕನಿಗೆ ಭಿಕ್ಷೆ ನೀಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಭಿಕ್ಷಾಟನೆ ನಿರ್ಮೂಲನಾ ತಂಡದ ಅಧಿಕಾರಿ ಫೂಲ್ ಸಿಂಗ್ ಮಾತನಾಡಿ, ಕಳೆದ ಆರು ತಿಂಗಳಲ್ಲಿ 600 ಕ್ಕೂ ಹೆಚ್ಚು ಭಿಕ್ಷುಕರನ್ನು ಆಶ್ರಯ ಮನೆಗಳಿಗೆ ಕಳುಹಿಸಲಾಗಿದೆ ಮತ್ತು ಸುಮಾರು 100 ಮಕ್ಕಳನ್ನು ಮಕ್ಕಳ ಆರೈಕೆ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಣ್ಣ ವಸ್ತುಗಳು ಮತ್ತು ಬಲೂನ್‌ಗಳನ್ನು ಮಾರಾಟ ಮಾಡುವ ನೆಪದಲ್ಲಿ ಕೆಲವು ವ್ಯಕ್ತಿಗಳು ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ.

ಸೇಲ್ಫಿ ನೆಪದಲ್ಲಿ ಪುಂಡರಿಂದ ಕಿರುಕುಳ, ಮಹಾಕುಂಭಮೇಳ ತೊರೆದ ಮೊನಾಲಿಸಾ! ನಡೆದಿದ್ದೇನು?

ಈ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ನೀಡಲು, ಭಿಕ್ಷಾಟನೆಯ ಪ್ರಕರಣಗಳನ್ನು ವರದಿ ಮಾಡುವ ಯಾರಿಗಾದರೂ 1,000 ರೂ. ಬಹುಮಾನವನ್ನು ಅಧಿಕಾರಿಗಳು ಘೋಷಿಸಿದ್ದಾರೆ. ಈ ನಡುವೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವಿಶಾಲ ಉಪಕ್ರಮದ ಭಾಗವಾಗಿ 10 ಭಾರತೀಯ ನಗರಗಳನ್ನು ಭಿಕ್ಷುಕ ಮುಕ್ತ ನಗರಗಳನ್ನಾಗಿ ಮಾಡುವ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ