'ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಲು ಹೇಳಿದ್ದು ಯಾರು? ಈ ಗೊಂದಲಕ್ಕೆಲ್ಲಾ ಅವರೇ ಕಾರಣ!'

By Suvarna NewsFirst Published Sep 7, 2021, 9:08 PM IST
Highlights

*  ಹಿಂದು-ಮುಸ್ಲಿಂ ನಡುವೆ  ಗೊಂದಲ ಸೃಷ್ಟಿ ಮಾಡಿದವರೆ ಬ್ರಿಟಿಷರು
* ಮುಸ್ಲಿಮರ ಬಳಿ ನಿಮಗೆ ಯಾವ ಸವಲತ್ತು ಸಿಗುವುದಿಲ್ಲ ಎಂದರು
* ಮುಸ್ಲಿಮರು ಉಗ್ರಗಾಮಿಗಳು ಎಂದು ಹಿಂದುಗಳಿಗೆ ಹೇಳಿದರು
*ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ವಿಚಾರ

ಮುಂಬೈ (ಸೆ. 07)  ಬ್ರಿಟಿಷರು ಭಾರತದ ಹಿಂದುಗಳು ಮತ್ತು ಮುಸ್ಲಿಮರ ಮಧ್ಯೆ  ಸಂವಹನ ಸಮಸ್ಯೆ ಸೃಷ್ಟಿ ಮಾಡಿ ಇಬ್ಬರು  ಕಿತ್ತಾಡುವಂತೆ ಮಾಡಿದರು ಎಂದು  ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ರಾಷ್ಟ್ರ ಪ್ರಥಮ್ ರಾಷ್ಟ್ರ ಸರ್ವೋಪರಿ ವಿಚಾರದ ಮೇಲೆ ಮಾತನಾಡಿದ ಭಾಗವತ್ ಹಲವು ವಿಚಾರಗಳನ್ನು ಹೇಳಿದರು. ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಮುಸ್ಲಿಂ ಸಮುದಾಯದ ಬುದ್ಧಿಜೀವಿಗಳನ್ನು ಭೇಟಿ ಮಾಡಿದ ಭಾಗವತ್,  ಬ್ರಿಟಿಷರು ಮುಸ್ಲಿಮರಿಗೆ ಬಹುಸಂಖ್ಯಾತ ಹಿಂದೂ ಭಾರತದಲ್ಲಿ ನೀವೂ ಏನನ್ನೂ ಪಡೆಯುವುದಿಲ್ಲ ಎಂದು ಹೇಳುತ್ತಾ ಬಂದರು. 

ಸಿಎಎ, ಎನ್‌ಆರ್ ಸಿ ಯಿಂದ ಮುಸ್ಲಿಮರಿಗೆ ಯಾವ ಸಮಸ್ಯೆ ಇಲ್ಲ

ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಬಹುಮತ ಆಳುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಅವರು ಮಾತ್ರ ಚುನಾಯಿತರಾಗುತ್ತಾರೆ ಮತ್ತು ಆಡಳಿತ ನಡೆಸುತ್ತಾರೆ. ನಿಮಗೆ ಯಾವ ಅಧಿಕಾರವೂ ಸಿಗುವುದಿಲ್ಲ ಎಂದು ತಪ್ಪು ಕಲ್ಪನೆ ತುಂಬಿದರು ಇದೇ ಮುಂದೆ ಮಾರಕವಾಯಿತು ಎಂದಿದ್ದಾರೆ.

ಮುಸ್ಲಿಮರಿಗೆ ಯಾವ ಸವಲತ್ತುಗಳು ಉಳಿದುಕೊಳ್ಳುವುದಿಲ್ಲ. ಬಹುಸಂಖ್ಯಾತರಾಗಿರುವ ಹಿಂದೂಗಳು ಮಾತ್ರ ಚುನಾಯಿತರಾಗುತ್ತಾರೆ. ಹೀಗಾಗಿ ನೀವು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕು ಎಂಬ ವಿಚಾರವನ್ನು ಬ್ರಿಟಿಷರೇ ಸೃಷ್ಟಿ ಮಾಡಿದರು ಎಂದು ಭಾಗವತ್ ಹೇಳಿದರು.

ಇನ್ನೊಂದು ಕಡೆ ಬ್ರಿಟಿಷರು ತಪ್ಪು ಕಲ್ಪನೆಯನ್ನು ಸೃಷ್ಟಿ ಮಾಡುತ್ತಲೇ ಹೋದರು. ಮುಸ್ಲಿಮರು ಉಗ್ರಗಾಮಿಗಳು ಎಂದು  ಹೇಳಿದರು. ಅವರಿಂದ ದೂರ ಇರಬೇಕು ಎಂಬುದನ್ನು ಹೇಳಿಕೊಡುತ್ತಾ ಬಂದರು ಎಂದು ಹೇಳಿದರು.

ಗ್ಲೋಬಲ್ ಸ್ಟ್ರಾಟಜಿಕ್ ಪಾಲಿಸಿ ಫೌಂಡೇಶನ್ ಪುಣೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶದ ವಿಚಾರ ಮಾತನಾಡುತ್ತಿ ಭಾಗವತ್ ಎಲ್ಲ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು.  ಈಗಾದರೂ ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದಿದ್ದಾರೆ.

click me!