ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ

Published : Nov 22, 2020, 11:02 PM ISTUpdated : Nov 22, 2020, 11:04 PM IST
ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ

ಸಾರಾಂಶ

ಒಂದಾದ ಮೇಲೆ ಒಂದು ಸವಾಲು, ಸಮಸ್ಯೆಗಳು ಬರುವುದು ಅಂದರೆ ಇದೆ ಇರಬೇಕು/ ಕೊರೋನಾ, ಡೆಂಗ್ಯೂ, ಮಲೇರಿಯಾದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ/ ಇಂಗ್ಲೆಂಡಿನ ವ್ಯಕ್ತಿಗೆ ಭಾರತದಲ್ಲಿ ಒಂದಾದ ಮೇಲೆ ಒಂದು ಸಮಸ್ಯೆ

ಜೋಧಪುರ(ನ. 22)  ಬ್ರಿಟನ್ ನಿಂದ ಬಂದಿದ್ದ ಈ ವ್ಯಕ್ತಿಗೆ ಒಂದೆಲ್ಲಾ ಒಂದು ಗ್ರಹಚಾರ ಕಾಡುತ್ತಲೆ ಇದೆ.  ಡೆಂಗ್ಯೂ, ಮಲೇರಿಯಾ ಮತ್ತು ಕೊರೋನಾ ವೈರಸ್ ಸೋಂಕು ತಗುಲಿ ಬಚಾವ್ ಆಗಿದ್ದ ವ್ಯಕ್ತಿಗೆ ಹಾವು ಕಚ್ಚಿದೆ.  ಜೋಧಪುರದ ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಂಗ್ಲೆಂಡ್ ಮೂಲದ ಇಸ್ಲೇಜೋನ್ಸ್ ಜೋಧ್ ಪುರ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಕಳೆದ ವಾರ ಜೋಧಪುದ ಸಮೀಪದ ಹಳ್ಳಿಯಲ್ಲಿ ಜೋನ್ಸ್ ಗೆ ಕಾಳಿಂಗ ಸರ್ಪ ಕಚ್ಚಿದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ

ನಡೆದಾಡಲು ಸಾಧ್ಯವಾಗದೆ, ಕಣ್ಣು ಮಂಜುಮಂಜಾದ ವ್ಯಕ್ತಿಯನ್ನು ಅದು ಹೇಗೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ ಲಕ್ಷಣ ಹೊತ್ತುಕೊಂಡು ಆಸ್ಪತ್ರೆಗೆ ಬಂದ ಜೋನ್ಸ್ ಗೆ ಕೊರೋನಾ ಪರೀಕ್ಷೆಯನ್ನು  ಮಾಡಿಸಲಾಗಿದೆ.

ಆರೋಗ್ಯ ಸೇವೆ ಒದಗಿಸುವ ಚ್ಯಾರಿಟಿಯೊಂದರಲ್ಲಿ ಕೆಲಸ ಮಾಡುವ ಜೋನ್ಸ್ ಭಾರತಕ್ಕೆ ಬಂದಿದ್ದರು. ರಾಜಸ್ಥಾನದ ಒಂದು ಹಳ್ಳಿಯಲ್ಲಿ ವಾಸವಿದ್ದರು. ಒಂದು ದಿನ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಪ್ರತ್ಯಕ್ಷವಾಗಿದ್ದ ಹಾವು ಜೋನ್ಸ್ ರನ್ನು ಎರಡು ಸಾರಿ ಕಚ್ಚಿ ಕಣ್ಮರೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!