ಪ್ರತಿ ಮನೆಗೂ ನಳ್ಳಿ ನೀರು ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ!

By Suvarna NewsFirst Published Nov 22, 2020, 7:55 PM IST
Highlights

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆ ಉದ್ಘಾಟಿಸಿದ್ದಾರೆ. ಪ್ರತಿ ಮನೆಗೆ ನಳ್ಳಿ ನೀರು ಯೋಜನೆಯಿಂದ 41 ಲಕ್ಷ ಹಳ್ಳಿಗಳಿಗೆ ಪ್ರಯೋಜವಾಗಲಿದೆ. 

ನವದೆಹಲಿ(ನ.22): ಹರ್ ಘರ್ ನಲ್ ಯೋಜನ(ಪ್ರತಿ ಮನೆಗೆ ನಳ್ಳಿ ನೀರು) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಉತ್ತರ ಪ್ರದೇಶದ ವಿಂದ್ಯ ವಲಯದ ಹಳ್ಳಿಗಳ ಪ್ರತಿ ಮನೆಗೆ ನೀರು ಒದಗಿಸುವ ಮಹತ್ವಾಂಕ್ಷೆ ಯೋಜನೆ ಇದಾಗಿದೆ. ಬರೋಬ್ಬರಿ 5,555.38 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಮೋದಿ, ವಿಡಿಯೋ ಕಾನ್ಫೆರನ್ಸ್ ಮೂಲಕ ಉದ್ಘಾಟನೆ ಮಾಡಿದ್ದಾರೆ.

ಪಾಕ್ ಮೂಲದ ಉಗ್ರರ ಹೊಡೆದುರುಳಿಸಿದ ಸೇನೆಗೆ ಮೋದಿ ಸಲಾಂ!

ಉತ್ತರ ಪ್ರದೇಶದ 2 ಜಿಲ್ಲೆಯ 41 ಲಕ್ಷ ಹಳ್ಳಿಗೆ ನೀರು ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಸೋನ್‌ಭದ್ರ ಹಾಗೂ ಮಿರ್ಜಾಪುರ ವಲಯದಲ್ಲಿ ಹರ್ ಘರ್ ನಲ್ ಯೋಜನೆಗೆ ಚಾಲನೆ ನೀಡಲಾಗಿದೆ. ಈ ವರ್ಚುವಲ್ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.

ಸೈಬರ್‌ ದಾಳಿ, ವೈರಸ್‌ ಹಾವಳಿ ಎದುರಿಸಿ : ಮೋದಿ ಟೆಕ್‌ ಟಾಕ್‌!

ಉತ್ತರ ಪ್ರದೇಶದ ಸೋನ್‌ಭದ್ರ ಹಾಗೂ ಮಿರ್ಜಾಪುರ ನೈಸರ್ಗಿಕ ಸಂಪತ್ತಿನಿಂದ ಕೂಡಿದೆ. ಹಲವು ನದಿಗಳು ಇಲ್ಲಿ ಹರಿಯುತ್ತಿವೆ. ಆದರೆ ಸ್ವತಂತ್ರ ಭಾರತದಲ್ಲಿ ಈ ನೈಸರ್ಗಿಕ ಸಂಪತನ್ನು ಬಳಸಿಕೊಂಡೇ ಇಲ್ಲ. ಇದೀಗ ಸರ್ಕಾರ ಈ ಹಳ್ಳಿಗಳ ನೀರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಪ್ರತಿ ಮನೆಗೆ ನಳ್ಳಿ ನೀರು ಯೋಜನೆಗೆ ಚಾಲನೆ ನೀಡುತ್ತಿದೆ ಎಂದು ಮೋದಿ ಹೇಳಿದರು.

ಬಡವರು, ಬುಡಕಟ್ಟು ಜನಾಂಗದವರನ್ನು ಸ್ವಾಲಂಬಿಗಳನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಸ್ವಾಲಂಬಿ ಹಳ್ಳಿಗಳೇ ಸ್ವಾಲಂಬಿ ಭಾರತದ ಶಕ್ತಿ ಎಂದು ಮೋದಿ ಹೇಳಿದ್ದಾರೆ.  

ಸ್ವಾತಂತ್ರ್ಯ ಬಂದ ಬಳಿಕ ಉತ್ತರ ಪ್ರದೇಶದ 398 ಹಳ್ಳಿಗಳಿಗೆ ನೀರಿನ ಸರಬರಾಜು ವ್ಯವಸ್ಥೆ ಆಗಿದೆ. ಆದರೆ ಈ ಯೋಜನೆಯಿಂದ ಮೊದಲ ಹಂತದಲಲ್ಲೇ 2,995 ಹಳ್ಳಿಗಳಿಗೆ ನಳ್ಳಿ ನೀರು ವ್ಯವಸ್ಥೆ ಆಗಲಿದೆ ಎಂದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.  ನದಿ, ಸರೋವರ, ಕೆರೆಗಳನ್ನು ಶುದ್ದೀಕರಿಸಲಾಗುವುದು. ಈ ನೀರನ್ನು ಸಂಸ್ಕರಿಸಿದ ಹಳ್ಳಿ ಹಳ್ಳಿಗೆ ನೀಡಲಾಗುವುದು ಎಂದು ಅದಿತ್ಯನಾಥ್ ಹೇಳಿದರು.

click me!