ಕೋಮು ಸೌಹಾರ್ದತೆಗೆ ಸಾಕ್ಷಿ: ಕಾಶ್ಮೀರದಲ್ಲಿ ಹಿಂದೂ ದೇವಾಲಯ ರಕ್ಷಿಸುತ್ತಿರುವ ಮುಸ್ಲಿಂ ತಂದೆ ಮಗನ ಜೋಡಿ!

Published : Feb 13, 2022, 10:34 AM IST
ಕೋಮು ಸೌಹಾರ್ದತೆಗೆ ಸಾಕ್ಷಿ: ಕಾಶ್ಮೀರದಲ್ಲಿ ಹಿಂದೂ ದೇವಾಲಯ ರಕ್ಷಿಸುತ್ತಿರುವ ಮುಸ್ಲಿಂ ತಂದೆ ಮಗನ ಜೋಡಿ!

ಸಾರಾಂಶ

*ಕಣಿವೆ ನಾಡಿನಲ್ಲಿ ಕೋಮು ಸೌಹಾರ್ದತೆಗೆ ತಂದೆ ಮಗನ ಜೋಡಿ ಸಾಕ್ಷಿ *ಬೆಟ್ಟಗಳಲ್ಲಿರುವ ಸಣ್ಣ ಶಿವ ದೇವಾಲಯ ನೋಡಿಕೊಳ್ಳುತ್ತಿರುವ ನಿಸಾರ್ ಅಹ್ಮದ್ *ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ: ಸ್ಥಳೀಯ ನಿವಾಸಿ

ಶ್ರೀನಗರ (ಫೆ. 13): ಧರ್ಮದ ಭೇದ ಭಾವವಿಲ್ಲದ  ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಶ್ರೀನಗರದಲ್ಲಿ ಶ್ರವಣ ಮತ್ತು ವಾಕ್  ದೋಷವಿರುವ ಮುಸ್ಲಿಂ ತಂದೆ ಮಗ ಹಿಂದೂ ದೇವಾಲಯಗಳ ರಕ್ಷಣೆ ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಶಿವ ದೇವಾಲಯವನ್ನು ನೋಡಿಕೊಳ್ಳುವ ಮೂಲಕ ಕಣಿವೆಯಲ್ಲಿ ಕೋಮು ಸೌಹಾರ್ದತೆಗೆ ತಂದೆ ಮಗನ ಜೋಡಿ ಉದಾಹರಣೆಯಾಗಿದ್ದಾರೆ. ತಂದೆ ಮತ್ತು ಅಹ್ಮದ್ ಅಲೈ ಶ್ರೀನಗರದ ಜಬರ್ವಾನ್ ಬೆಟ್ಟಗಳಲ್ಲಿರುವ ಸಣ್ಣ ಶಿವ ದೇವಾಲಯವಾದ ಗೋಪಿ ತಿರಿತ್ ದೇವಾಲಯವನ್ನು ( Gopi Tirith Temple) ನೋಡಿಕೊಳ್ಳುತ್ತಿದ್ದಾರೆ.

ನಿಸಾರ್ ಅಹ್ಮದ್ ಅಲೈ ಮತ್ತು ಅವರ ತಂದೆ ಕಳೆದ ಆರು ವರ್ಷಗಳಿಂದ ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದಾರೆ. ನಿಸಾರ್ ಅವರು ಆವರಣವನ್ನು ಸ್ವಚ್ಛಗೊಳಿಸಸುವುದಷ್ಟೇ ಅಲ್ಲದೇ, ತೋಟಗಳನ್ನು ನಿರ್ವಹಿಸುತ್ತಾರೆ ಮತ್ತು ದೇವಾಲಯದ ಪ್ರಾಂಗಣದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ.

ಇದನ್ನೂ ಓದಿ: ಕೋಮು ಸೌಹಾರ್ದತೆಗೆ ಸಾಕ್ಷಿ! ಕ್ರಿಸ್ತ ಭಕ್ತನಿಂದ ಸಿದ್ದಿ ವಿನಾಯಕ ದೇವಾಲಯ ನಿರ್ಮಾಣ

ಸಹೋದರತ್ವದ ಸಂಕೇತ: ಈ ದೇವಾಲಯವು ಕಾಶ್ಮೀರದ ಪರಸ್ಪರ ಸಹೋದರತ್ವದ ಸಂಕೇತವಾಗಿದೆ ಎಂದು ಸ್ಥಳೀಯರು ನಂಬುತ್ತಾರೆ. ಹಲವು ವರ್ಷಗಳಿಂದಲೂ ನಿಸಾರ್ ಅಹ್ಮದ್ ಅಲೈ ಅವರ ತಂದೆ ದೇವಾಲಯಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಅಹ್ಮದ್ ಅಲೈ ನೋಡಿಕೊಳ್ಳುತ್ತಿದ್ದಾರೆ. "ಅವರು ಬಹಳ ಸಮಯದಿಂದ ಪಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊಂತ್ತಿದ್ದಾರೆ. ಇದು ಕಾಶ್ಮೀರದ ಸಹೋದರತ್ವದ ಸಂಕೇತವಾಗಿದೆ, ಇದು ಪ್ರತಿಯೊಬ್ಬ ನಾಗರಿಕನ ನೈತಿಕ ಜವಾಬ್ದಾರಿಯಾಗಿದೆ." ಎಂದು  ಸ್ಥಳೀಯ ನಿವಾಸಿ ಫಿರ್ದೌಸ್ ಹೇಳಿದ್ದಾರೆ.

"ತಂದೆ ಮತ್ತು ಮಗ ದೇವಸ್ಥಾನವನ್ನು ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಇತರ ಜನರು ದೇವಸ್ಥಾನವನ್ನು ನೋಡಿಕೊಳ್ಳುತ್ತಾರೆ" ಎಂದು ಫಿರ್ದೌಸ್  ಹೇಳಿದ್ದಾರೆ. ಮತ್ತೊಬ್ಬ ಸ್ಥಳೀಯ ನಿವಾಸಿ ಉಮರ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಸಮುದಾಯವು ಹಿಂದೂ ದೇವಾಲಯಗಳನ್ನು ನೋಡಿಕೊಳ್ಳುವ ಅನೇಕ ಉದಾಹರಣೆಗಳಿವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ!

"ನಮ್ಮ ಮುಸ್ಲಿಂ ಸಮುದಾಯದ ಹುಡುಗ ಈ ಶಿವ ದೇವಾಲಯವನ್ನು ನೋಡಿಕೊಳ್ಳುತ್ತಿದ್ದಾನೆ, ಇದು ವಿಶಿಷ್ಟವಾದ ಪ್ರಕರಣವಲ್ಲ, ಮುಸ್ಲಿಂ ಸಮುದಾಯವು ಹಿಂದೂ ದೇವಾಲಯಗಳನ್ನು ನೋಡಿಕೊಳ್ಳುವ ಕಣಿವೆಯಲ್ಲಿ ಹಲವಾರು ದೇವಾಲಯಗಳಿವೆ, ಇಲ್ಲಿ ಎಲ್ಲಾ ಧರ್ಮದವರು ಸಾಮರಸ್ಯದಿಂದ ಮತ್ತು ಪರಸ್ಪರರ ಧರ್ಮವನ್ನು ಗೌರವಿಸುತ್ತಾರೆ, " ಎಂದು ಉಮರ್ ಹೇಳಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್