
ದೆಹಲಿ(ಸೆ.03): ಭಾರತ ಸ್ವಾತಂತ್ರ್ಯ ಪಡೆದ ವೀರಗಾಥೆ ಪ್ರತಿಯೊಬ್ಬರಿಗೆ ರೋಮಾಂಚನ. ಆದರೆ ಈ ಸ್ವಾತಂತ್ರ್ಯದ ಹಿಂದೆ ಬಹಿರಂಗವಾಗದ, ಜಗತ್ತಿಗೆ ತೋರಿಸದ ಅದೆಷ್ಟೇ ಮನಕಲುಕುವ ಘಟನೆಗಳಿವೆ. ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು ಕೊರೆದ ರಹಸ್ಯ ಸುರಂಗವೊಂದು ಪತ್ತೆಯಾಗಿದೆ. ಈ ಸುರಂಗ ದೆಹಲಿಯ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸವು ಸುರಂಗವಾಗಿದೆ ಅನ್ನೋದು ವಿಶೇಷ.
ಶಿವಾಜಿ ಕಾಲದ ಸುರಂಗ ಮಾರ್ಗ ಪತ್ತೆ, ಯಾವ ಎಂಜಿನೀಯರ್‌ಗೂ ಕಮ್ಮಿಯಿಲ್ಲ ಮಹಾರಾಜರ ಪರಿಕಲ್ಪನೆ!
ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುವ ಈ ಸುರಂಗ ಇದೀಗ ಭಾರಿ ಸದ್ದು ಮಾಡುತ್ತಿದೆ. ಇಷ್ಟು ದಿನ ದೆಹಲಿ ವಿಧಾನಸಭೆಯೊಳಗೆ ಘಟಾನುಘಟಿ ನಾಯಕರು ಸಂಚರಿಸಿದ್ದಾರೆ. ಗಹನ ವಿಷಯ ಚರ್ಚೆ ನಡೆಸಿದ್ದಾರೆ. ಬ್ರಿಟೀಷರ ವಸಾಹತುಶಾಹಿ ಯುಗ, ದೇಶ ಅನುಭವಿಸಿದ ಸಂಕಷ್ಟ, ತ್ಯಾಗ ಬಲಿದಾನಗಳನ್ನು ಇದೇ ವಿಧಾನಸಭೆಯೊಳಗೆ ನಿಂತು ಮಾತನಾಡಿದ್ದಾರೆ. ಆದರೆ ಅದೇ ಬ್ರಿಟೀಷರು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಮಾಡಿರುವ ರಹಸ್ಯ ಗುಹೆ ಇರುವುದು ಇದುವರೆಗೂ ಪತ್ತೆಯಾಗಿರಲಿಲ್ಲ.
ಪ್ರಧಾನಿ ನಿವಾಸದಿಂದ ಸಂಸತ್ತಿಗೆ ಸುರಂಗ ಮಾರ್ಗ
ಈ ಕುರಿತು ದೆಹಲಿ ವಿಧಾನಸಭಾ ಸ್ವೀಕರ್ ರಾಮ್ ನಿವಾಸ್ ಗೋಯೆಲ್ ಪ್ರತಿಕ್ರಿಯೆ ನೀಡಿದ್ದಾರೆ. 1993ರಲ್ಲಿ ಶಾಸನಾಗಿ ಆಯ್ಕೆಯಾದ ಸಂದರ್ಭದಲ್ಲಿ ಬ್ರಿಟೀಷರು ಬಳಸಿದ್ದ ರಹಸ್ಯ ಸುರಂಗ ಕುರಿತು ಕೆಲ ಮಾತುಗಳು ಕೇಳಿಬಂದಿತ್ತು. ಈ ಕುರಿತ ಹಲವು ಮಾಹಿತಿಗಳನ್ನು ಹುಡುಕುವ ಪ್ರಯತ್ನ ಮಾಡಿದ್ದೆ. ಆದರೆ ಯಾವುದೇ ಸುಳಿಸುವ ಸಿಕ್ಕಿರಲಿಲ್ಲ ಎಂದು ಗೋಯೆಲ್ ಹೇಳಿದ್ದಾರೆ.
ಮೆಟ್ರೋ ಕಾಮಗಾರಿಗಳಿಂದ ಸುರಂಗ ಮಾರ್ಗ ಸಂಪೂರ್ಣ ನಾಶವಾಗಿದೆ. ಕೆಲ ಭಾಗಗಳು ಮಾತ್ರ ಉಳಿದಿದೆ. ಹೀಗಾಗಿ ಈ ಸರಂಗ ಮಾರ್ಗವನ್ನು ನವೀಕರಿಸಿ ಐತಿಹಾಸಿಕ ಸ್ಮಾರಕ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿಯಲ್ಲಿದೆ.
1912ರಲ್ಲಿ ಬ್ರಿಟೀಷರ್ ಕೋಲ್ಕತಾದಲ್ಲಿದ್ದ ಶಾಸಕಾಂಗ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಿದ್ದರು. ಈಗನ ದೆಹಲಿ ವಿಧಾನಸಭಾ ಕಟ್ಟಡವೇ ಅಂದಿನ ಶಾಸಕಾಂಗ ಕಚೇರಿ. 1926ರಲ್ಲಿ ಬ್ರಿಟೀಷರು ಇದೇ ಕಟ್ಟಡವನ್ನು ನ್ಯಾಯಾಲವಾಗಿ ಪರಿವರ್ತಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಕೆಂಪುಕೋಟೆಯಲ್ಲಿ ಇಡಲಾಗುತ್ತಿತ್ತು. ಅಲ್ಲಿಂದ ಕೋರ್ಟ್‌ಗೆ ಹಾಜರುಪಡಿಸಲು ಬ್ರಿಟಿಷರು ಇದೇ ಸುರಂಗ ಮಾರ್ಗದ ಮೂಲಕ ತರಲಾಗುತ್ತಿತು. ಈ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟೀಷರು ಹತ್ತಿಕ್ಕುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ