
ನವದೆಹಲಿ: ಗಣರಾಜೋತ್ಸವಕ್ಕೆ ಎರಡೇ ದಿನ ಬಾಕಿ ಇದ್ದು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತೀಯ ಸೇನೆಯು ಕೂಡ ಕವಾಯತಿನ ಅಭ್ಯಾಸದಲ್ಲಿ ತೊಡಗಿದೆ. ಅಭ್ಯಾಸದ ವೇಳೆ ಬಾಲಿವುಡ್‌ನ ಹಾಡೊಂದಕ್ಕೆ ಭಾರತೀಯ ನೌಕಾಪಡೆ ಬ್ಯಾಂಡ್‌ಗೆ ಯೋಧರು ಹೆಜ್ಜೆ ಹಾಕಿದ್ದು, ಈ ವಿಡಿಯೋ ನೋಡಿದರೆ ರೋಮಾಂಚನವಾಗುತ್ತಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ನೌಕಾಪಡೆಯ ನೇವಿ ಬ್ಯಾಂಡ್ ಅದ್ಭುತವಾದುದು. ಈಗ ಬಾಲಿವುಡ್ ಸಿನಿಮಾ ಹಾಡಾದ 'ಮೊನಿಕಾ ಓ ಮೈ ಡಾರ್ಲಿಂಗ್' ಹಾಡನ್ನು ಬ್ಯಾಂಡ್ ಮೂಲಕ ನುಡಿಸಿದ್ದು, ಇದಕ್ಕೆ ಯೋಧರು ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. 1967 ರ ಕ್ಯಾರವಾನ್ (Caravan) ಸಿನಿಮಾದ ಹಾಡು ಇದಾಗಿದ್ದು, ಆರ್ ಡಿ ಬರ್ಮನ್ (RD Burman) ಮತ್ತು ಆಶಾ ಭೋಂಸ್ಲೆ (Asha Bhosle) ಅವರ ಪ್ರಸಿದ್ಧ ಕಂಠಸಿರಿಯಲ್ಲಿ ಪಿಯಾ ತು ಅಬ್ ತೋ ಆಜಾ (ಮೋನಿಕಾ, ಓ ಮೈ ಡಾರ್ಲಿಂಗ್) ಹಾಡು ಮೂಡಿ ಬಂದಿತ್ತು. ಈ ಹಾಡನ್ನು ಈಗ ನೌಕಾಪಡೆ ಬ್ಯಾಂಡ್‌ನಲ್ಲಿ ಹೊರಸೂಸಿದ್ದು, ಜೊತೆಗೆ ಯೋಧರು ಅದಕ್ಕೆ ಹೆಜ್ಜೆ ಹಾಕುತ್ತಿರುವುದು ನೋಡಲು ಸೊಗಸಾಗಿದೆ.
ಜನವರಿ 26 ರಂದು ಗಣರಾಜ್ಯೋತ್ಸವ ನಡೆಯಲಿದ್ದು, ರಾಜಪಥ್‌ನಲ್ಲಿ ಭರ್ಜರಿಯಾಗಿ ತಾಲೀಮು ನಡೆಯುತ್ತಿದೆ. ಈ ವಿಡಿಯೋವನ್ನು ಭಾರತ ಸರ್ಕಾರದ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಭಾರತೀಯ ನೌಕಾಪಡೆ ಯೋಧರು ಸಮವಸ್ತ್ರ ಧರಿಸಿದ್ದು, ಕೈಯಲ್ಲಿ ರೈಫಲ್ ಹಿಡಿದು ವಿಜಯ ಚೌಕ್‌ನಲ್ಲಿ ಈ ಬಾಲಿವುಡ್ ಹಾಡಿಗೆ ಅಭ್ಯಾಸ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಕೈಯಲ್ಲಿ ರೈಫಲ್ ಹಿಡಿದು ಜೊತೆಗೆ ಚಪ್ಪಾಳೆಯನ್ನು ತಟ್ಟುತ್ತಾ ಯೋಧರು ಈ ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಎಂಥಹಾ ದೃಶ್ಯ, ಈ ವಿಡಿಯೋ ನಿಮಗೆ ಖಂಡಿತವಾಗಿ ರೋಮಾಂಚನವನ್ನುಂಟು ಮಾಡಲಿದೆ . ನೀವು 73ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ಸಾಕ್ಷಿಯಾಗಲು ನಮ್ಮ ಜೊತೆ ಪಾಲ್ಗೊಳ್ಳುವಿರೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 2.25 ನಿಮಿಷದ ಈ ವಿಡಿಯೋವನ್ನು ಇದುವರೆಗೂ ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು, ವಾಹ್, ಲವ್ಲಿ, ಸೂಪರ್ಬ್ ಎಂದೆಲ್ಲಾ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?
ಕೆಲದಿನಗಳ ಹಿಂದೆ ಭಾರತೀಯ ನೌಕಾಪಡೆಯ INS ರಣ್‌ವೀರ್ ನೌಕೆಯಲ್ಲಿ ದಿಢೀರ್ ಸ್ಫೋಟ(Explosion) ಸಂಭವಿಸಿ ಮೂವರು ನೌಕಾಪಡೆ ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು.(Death) ಮುಂಬೈನ(Mumbai) ಡಾಕ್‌ಯಾರ್ಡ್‌ನಲ್ಲಿ ಈ ಘಟನೆ ನಡೆದಿತ್ತು. ಭಾರತೀಯ ನೌಕಾಪಡೆಯ(Indian Navy) ನೌಕೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ನೌಕೆಯಲ್ಲಿದ್ದಇತರ ಸಿಬ್ಬಂದಿಯ ರಕ್ಷಣೆಗೆ ತೊಡಗಿದ್ದರು. ಆದರೆ ಸ್ಫೋಟಕ ತೀವ್ರತೆದೆ ಮೂವರು ಅಧಿಕಾರಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ