Tamil Nadu: 40,000 ಬ್ರಾಹ್ಮಣರಿಗೆ ವಧುವಿನ ಕೊರತೆ : ಉತ್ತರಪ್ರದೇಶ, ಬಿಹಾರದಲ್ಲಿ ಹುಡುಕಾಟ!

Published : Nov 18, 2021, 07:46 PM ISTUpdated : Nov 18, 2021, 07:55 PM IST
Tamil Nadu: 40,000 ಬ್ರಾಹ್ಮಣರಿಗೆ ವಧುವಿನ ಕೊರತೆ : ಉತ್ತರಪ್ರದೇಶ, ಬಿಹಾರದಲ್ಲಿ ಹುಡುಕಾಟ!

ಸಾರಾಂಶ

*ತಮಿಳುನಾಡಿನಲ್ಲಿ 40,000 ಬ್ರಾಹ್ಮಣ ಹುಡುಗರಿಗೆ ವಧುವಿನ ಕೊರತೆ *ಬಿಹಾರ ಉ.ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದ ಬ್ರಾಹ್ಮಣ ಸಂಘ *ಉತ್ತರ ಭಾರತದಲ್ಲಿ ಸಂಘದ ವತಿಯಿಂದ ಸಂಯೋಜಕರ ನೇಮಕ  *ಪ್ರತಿ 10 ಹುಡುಗರಿಗೆ ಕೇವಲ ಆರು ಹುಡುಗಿಯರು : ಸಂಘದ ಅಧ್ಯಕ್ಷ!

ತಮಿಳುನಾಡು(ನ.18): ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಏಕೆಂದರೆ ಮನೆ ಕಟ್ಟುವುದು ಮತ್ತು ಮದುವೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಭಾರತದಲ್ಲಿ ಗಂಡು ಹೆಣ್ಣಿನ ಮಧ್ಯೆ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇರುವ ಸಂದರ್ಭದಲ್ಲಂತೂ ಮದುವೆ ಮಾಡುವುದು ಸಾಹಸವೇ ಸರಿ. ಅದರಲ್ಲೂ ತಮ್ಮ ಜಾತಿ ಕುಲದವರನ್ನೇ ಮದುವೆ ಮಾಡಿಕೊಳ್ಳಬೇಕೆನ್ನುವವರಿಗೆ ಮದುವೆ ಮಾಡಿಸುವುದು ಎಂದರೆ ದೊಡ್ಡ ಹೋರಾಟ ಮಾಡಿದಂತೆ. ಇಂತಹ ಪರಿಸ್ಥಿತಿಯೇ ಈಗ ತಮಿಳುನಾಡಿನಲ್ಲಿ (Tamil Nadu) ನಿರ್ಮಾಣವಾಗಿದ್ದು ಮದುವೆ ವಯಸ್ಸಿಗೆ ಬಂದ ಸುಮಾರು 40,000 ಹುಡುಗರಿಗೆ ವಧುವಿನ ಕೊರತೆ ಉಂಟಾಗಿದೆ. ಈ ಕೊರತೆಯನ್ನು ನೀಗಿಸಲು ಉತ್ತರ ಭಾರತದ ಕಡೆ ತಮಿಳುನಾಡು ಬ್ರಾಹ್ಮಣ ಸಂಘ (Thamizhnadu Brahmin Association) ಮುಖ ಮಾಡಿದ್ದು ಸಂಯೋಜಕರನ್ನು ನೇಮಿಸಿದೆ. 

ಬ್ರಾಹ್ಮಣ ಹುಡುಗರಿಗೆ ವಧು ಹುಡಕಲು ತಮಿಳುನಾಡು ಬ್ರಾಹ್ಮಣ ಸಂಘ ದೆಹಲಿ (Delhi), ಉತ್ತರ ಪ್ರದೇಶ (Uttar Pradesh) ಹಾಗೂ ಬಿಹಾರಗಳಲ್ಲಿ (Bihar) ವಿಶೇಷ ಅಭಿಯಾನ ಆರಂಭಿಸಿದೆ. ತಮಿಳು ನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್ ನಾರಾಯಣನ್ ರವರ ಬಹಿರಂಗ ಪತ್ರದಲ್ಲಿ "30 ರಿಂದ 40 ವರ್ಷ ವಯಸ್ಸಿನ ಮತ್ತು ವಿವಿಧ ಅರ್ಹತೆಗಳಯುಳ್ಳ ಸುಮಾರು 40,000 ತಮಿಳು ಬ್ರಾಹ್ಮಣ ಯುವಕರು ತಮಿಳುನಾಡಿನಲ್ಲಿ ವಧುಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಲಿಂಗ ಅನುಪಾತ - ಪ್ರತಿ 10 ಹುಡುಗರಿಗೆ ಕೇವಲ ಆರು ಹುಡುಗಿಯರಿದ್ದಾರೆ ಹಾಗೂ ಸ್ಥಳ ಮತ್ತು ಸ್ಥಾನಮಾನದಲ್ಲಿನ ಅಂತರ ಮತ್ತು ಅಂತರ್ಜಾತಿ ವಿವಾಹಗಳು ಇದಕ್ಕೆ ಕಾರಣಗಳಾಗಿವೆ" ಎಂದು ಅವರು ಹೇಳಿದ್ದಾರೆ.

Rajkummar Rao-Patralekhaa wedding: ವರನಿಗಾಗಿ ವಧುವಿನ ಲೆಹಂಗಾದಲ್ಲಿತ್ತು ಸ್ಪೆಷಲ್ ಮೆಸೇಜ್

“ಆಚಾರ್ಯರ ವಿರೋಧದ ನಡುವೆಯೂ ಕುಟುಂಬ ಯೋಜನೆಯನ್ನು ಬ್ರಾಹ್ಮಣರು ಗಂಭೀರವಾಗಿ ತೆಗೆದುಕೊಂಡರು. ಗಂಡು ಹೆಣ್ಣಿನ ಸಂಖ್ಯೆ ಹೊಂದಿಕೆಯಾಗದಿರಲು ಇದು ಒಂದು ಕಾರಣವಾಗಿರಬಹುದು ಎಂದು ನಾರಾಯಣನ್ ಹೇಳಿದ್ದಾರೆ. ಈ ವಿಶೇಷ ಅಭಿಯಾನದ ಕುರಿತು ಇನ್ನಷ್ಟು ವಿವರಿಸಿದ ಅವರು, ದೆಹಲಿ, ಲಕ್ನೋ ಮತ್ತು ಪಾಟ್ನಾದಲ್ಲಿ ಸಂಯೋಜಕರನ್ನು ನೇಮಿಸಲಾಗುವುದು ಮತ್ತು ಚಾಲನೆಯ ಮೇಲ್ವಿಚಾರಣೆಗೆ ಇಲ್ಲಿನ ಸಂಘದ ಪ್ರಧಾನ ಕಚೇರಿಯಲ್ಲಿ (Headquarter) ಹಿಂದಿಯಲ್ಲಿ ಬರೆಯಲು ಮತ್ತು ಮಾತನಾಡಲು ತಿಳಿದವರನ್ನು ನೇಮಿಸಲಾಗುವುದು ಎಂದು ಹೇಳಿದ್ದಾರೆ.

ಮಹಿಳೆ ಯಾವಾಗ ಕೆಲಸ ಬಿಡುತ್ತಾಳೆ ಎಂಬ ಚರ್ಚೆ!

ಈ ಬಗ್ಗೆ ಮಾತನಾಡಿದ ಬ್ರಾಹ್ಮಣ ಸಮುದಾಯದ ಮಹಿಳೆಯೊಬ್ಬರು  “ಕುಟುಂಬದಲ್ಲಿ ಮದುವೆಯ ಮಾತುಕತೆಗಳು ಬಂದಾಗ ಮಹಿಳೆ ಯಾವಾಗ ಕೆಲಸ ಬಿಡುತ್ತಾಳೆ ಎಂಬುದಕ್ಕೆ  ಯಾವಾಗಲೂ ಚರ್ಚೆಯಾಗುತ್ತದೆ. ಅಲ್ಲದೆ, ಸಮುದಾಯದ ಒಂದು ವರ್ಗದ ಪುರುಷರು ಅರಾಜಕೀಯರಾಗಿದ್ದಾರೆ ಮತ್ತು ಆಧುನಿಕ ಕಾಲದಲ್ಲಿ (Modern Times) ಯಾವುದೇ ಅರ್ಥವಿಲ್ಲದಿದ್ದರೂ ಸಂಪ್ರದಾಯಗಳನ್ನು (Traditions) ಬಿಟ್ಟುಕೊಡಲು ಸಿದ್ಧರಿಲ್ಲ. ಇದಕ್ಕೆ ಪಿತೃಪ್ರಭುತ್ವದ (Patriarchy) ಹಿನ್ನೆಲೆಯನ್ನು ಸಹ ದೂಷಿಸಬೇಕು ಎಂದು ಹೇಳಿದ್ದಾರೆ.

ಬಾಲ್ಯವಿವಾಹಕ್ಕೆ ಮನ್ನಣೆ ನೀಡುವ ಮಸೂ​ದೆಗೆ ರಾಜ​ಸ್ಥಾ​ನ​ ಅಸ್ತು!

ಬ್ರಾಹ್ಮಣ ಪುರುಷರು ತಮ್ಮ ಸಮುದಾಯದ ಹೊರಗೆ ಹುಡುಗಿಯರನ್ನು ಹುಡುಕಲು ಏಕೆ ಹಿಂಜರಿಯುತ್ತಾರೆ ಎಂಬುದರ ಬಗ್ಗೆ ಮಾತನಾಡಿದ ಅವರು “ಅವರ ಕೌಟುಂಬಿಕ (ಸಮುದಾಯ) ಪರಂಪರೆಯನ್ನು ಮುಂದುವರಿಸಲು ಅವರು ಬಯಸುತ್ತಾರೆ ಎಂದು ಅರ್ಥೈಸಬಹುದು. ಸಮುದಾಯದಲ್ಲಿ ವಿವಾಹದ ಕಲ್ಪನೆಯು ಆಳವಾಗಿಲ್ಲ ಹಾಗಾಗಿ ಅದು ಹಿನ್ನಡೆಯನ್ನು ಕಂಡಿದೆ, ”ಎಂದು ಅವರು ಹೇಳಿದರು.

ಅದ್ದೂರಿ ಸಭಾಂಗಣಗಳಲ್ಲಿಯೇ ಮದುವೆ ಏಕೆ?

ಶಿಕ್ಷಣತಜ್ಞ ಎಂ ಪರಮೇಶ್ವರನ್ (M Parameshwaran) ಮಾತನಾಡಿ, ವಿವಾಹವಾಗುವ ವಯೋಮಿತಿಯಲ್ಲಿ ತಮಿಳು ಬ್ರಾಹ್ಮಣ ಹೆಣ್ಣುಮಕ್ಕಳ ಕೊರತೆಯಿದ್ದರೆ, ಪುರುಷರಿಗೆ ವಧುಗಳನ್ನು ಹುಡುಕಲು ಸಾಧ್ಯವಾಗದಿರುವ ಇನ್ನೊಂದು ಕಾರಣವಿದೆ. “ಹುಡುಗರ ಪಾಲಕರು ಮದುವೆಗಳನ್ನು ಅದ್ದೂರಿ ಸಭಾಂಗಣಗಳಲ್ಲಿ (Big Marriage Halls) ಏಕೆ ನಡೆಸಬೇಕೆಂದು ಬಯಸುತ್ತಾರೆ? ಸರಳವಾದ ರೀತಿಯಲ್ಲಿ ಮದುವೆಯನ್ನು ನಡೆಸುವುದರಿಂದ ಅವರನ್ನು ತಡೆಯುವುದು ಯಾವುದು? ತಮಿಳುನಾಡಿನ ಸಂಪ್ರದಾಯದಲ್ಲಿ ಹುಡುಗಿಯ ಕುಟುಂಬವು ಸಂಪೂರ್ಣ ಮದುವೆಯ ವೆಚ್ಚವನ್ನು ಭರಿಸಬೇಕಾಗಿದೆ ಮತ್ತು ಇದು ತಮಿಳು ಬ್ರಾಹ್ಮಣ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana