ಬೆಂಗಳೂರಿನಲ್ಲಿ ಮೇ ತಿಂಗಳಲ್ಲೇ ಅತ್ಯಂತ ಚಳಿ : 50 ವರ್ಷದಲ್ಲೇ ಇದೇ ಮೊದಲು

By Anusha KbFirst Published May 13, 2022, 1:16 PM IST
Highlights
  • 50 ವರ್ಷದಲ್ಲೇ ಮೇಯಲ್ಲಿ ಅತ್ಯಂತ ಚಳಿಯ ದಿನ ದಾಖಲು
  • (ಮೇ.12) ಬೆಂಗಳೂರು ನಗರದಲ್ಲಿ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ
  • ಮೇ ತಿಂಗಳಲ್ಲಿ ಅತ್ಯಂತ ಚಳಿಯ ದಿನ

ಮೇ ತಿಂಗಳು ಅಂದರೆ ಅದು ಬಹುತೇಕ ಬಿರು ಬೇಸಿಗೆಯ ಸಮಯ. ಮಕ್ಕಳ ಶಾಲಾ ರಜಾ ಸಮಯವೂ ಇದಾಗಿರುವುದರಿಂದ ಬಹುತೇಕ ನಗರದ ಜನ ಕೆರೆ ನದಿ ಫಾಲ್ಸ್ ಎಂದು ಊರೂರು ಅಲೆಯುತ್ತಾ ರಜಾ ದಿನಗಳನ್ನು ಮೋಜು ಮಸ್ತಿಯಲ್ಲಿ ಕಳೆದು ಸೆಖೆಯ ಬೇಗೆಯನ್ನು ತಣಿಸುವ ಸಮಯ. ಆದರೆ ಈ ವರ್ಷದ ಮೇ ತಿಂಗಳು ಉದ್ಯಾನನಗರಿಯಲ್ಲಿ (Gurden city) 50 ವರ್ಷಗಳಲ್ಲೇ ಅತ್ಯಂತ ಚಳಿಯ ದಿನ ದಾಖಲಾಗಿದೆ. 

50 ವರ್ಷಗಳಲ್ಲೇ ಮೇ ತಿಂಗಳಲ್ಲಿ ಎರಡನೇ ಅತ್ಯಂತ ಚಳಿಯ ದಿನ ನಿನ್ನೆ ಗುರುವಾರ (ಮೇ.12) ರಂದು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಬೆಂಗಳೂರು ನಗರದಲ್ಲಿ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. 34 ಡಿಗ್ರಿಯಿಂದ 23 ಡಿಗ್ರಿಗೆ ತಾಪಮಾನ ಒಮ್ಮೆಲೆ ಕುಸಿದಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ತಿಳಿಸುತ್ತಿದೆ.  ಇದಕ್ಕೂ ಮೊದಲು 1972ರಲ್ಲಿ ಮೇ 14 ರಂದು ಅತ್ಯಂತ ಕಡಿಮೆ ತಾಪಮಾನ ಅಂದರೆ 22.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಅಲ್ಲದೇ ಅಂದು ಕನಿಷ್ಠ ತಾಪಮಾನವೂ ಮೂರು ಡಿಗ್ರಿ ಕಡಿಮೆಯಾಗಿ  19.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ಹಳೆ ದಾಖಲೆ ತಿಳಿಸಿದೆ. 

Space Jellyfish: ಆಕಾಶದಲ್ಲಿ ಬೆರಗುಗೊಳಿಸುವ ದೃಶ್ಯ ಕಂಡ ಫ್ಲೋರಿಡಾ ನಿವಾಸಿಗಳು: ಏನಿದು ಚಮತ್ಕಾರ?

ಮೇ ತಿಂಗಳಲ್ಲಿ ಇಂತಹ ಸುಂದರವಾದ ತಾಪಮಾನ ದಾಖಲಾಗಲು ಕಾರಣ ಅಸಾನಿ ಚಂಡಮಾರುತದ (Asani cyclone) ಪ್ರಭಾವ ಎಂದು ತಿಳಿದು ಬಂದಿದೆ. ಈಶಾನ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ (South Karnataka) ವಿರಳವಾದ ಮೋಡಗಳು ಮತ್ತು ತಂಪಾದ ಗಾಳಿಯು ಚಾಲ್ತಿಯಲ್ಲಿದ್ದು, ಇದು ತಾಪಮಾನವನ್ನು ಕಡಿಮೆ ಮಾಡಿ ಮಳೆಯನ್ನು ತರುತ್ತಿರುವುದರಿಂದ ನಗರದಲ್ಲಿ ಆಹ್ಲಾದಕರ ವಾತಾವರಣ ಉಂಟಾಗಿದೆ. ಇದರ ಹಿಂದೆ ಅಸಾನಿ ಚಂಡಮಾರುತದ ಪ್ರಭಾವವಿದೆ. 

ಇದೇ ತಾಪಮಾನ ಇನ್ನು ಎರಡು ದಿನ ಮುಂದುವರಿಯಲಿದೆ ಹಾಗೂ ನಂತರ ಎಂದಿನ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೂ ಮೊದಲು ಮೇ 11 ರಂದು, ಅಸನಿ ಚಂಡಮಾರುತದ ಪ್ರಭಾವದಿಂದ ಬೆಂಗಳೂರಿನಲ್ಲಿ ತಾಪಮಾನದ ಮಟ್ಟವು ಗಮನಾರ್ಹವಾಗಿ ಕುಸಿದಿತ್ತು. ಅಲ್ಲದೇ ಭಾರಿ ಮಳೆಯಾಗಿತ್ತು. ನಗರವು ಕಳೆದ 10 ವರ್ಷಗಳಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ (lowest temperature) ಇದಾಗಿದೆ. ಮೇ 11 ರಂದು ತಾಪಮಾನ  24 ಡಿಗ್ರಿ ಸೆಲ್ಸಿಯಸ್ ಇತ್ತು.

ಪರ್ವತದ ಮೇಲೆ ಸುರುಳಿ ಸುತ್ತುವ ಮೋಡ : ಪ್ರಕೃತಿಯ ವಿಸ್ಮಯದ ಅಪರೂಪದ ವಿಡಿಯೋ
 

ಇದೇ ಮೇ ತಿಂಗಳಲ್ಲಿ ಅತ್ಯಂತ ಸೆಖೆಯ ದಿನವೂ ದಾಖಲಾಗಿತ್ತು. ಏಪ್ರಿಲ್‌ನಲ್ಲಿ ರಾಜಧಾನಿಯಲ್ಲಿ ಆಗಾಗ ಸುರಿದ ತುಂತುರು ಮಳೆ(Rain), ಮೋಡದ ವಾತಾವರಣ, ತೇವಾಂಶ ಕಾರಣದಿಂದ ಬಿಸಿಲಿನ ತಾಪ(ಉಷ್ಣಾಂಶ) ಹೆಚ್ಚದಿದ್ದರೂ ಸೆಖೆ ಮಾತ್ರ ಜನರನ್ನು ಹೈರಾಣು ಮಾಡಿತ್ತು. ಸೆಖೆಯ ಹೊಡೆತಕ್ಕೆ ಬೆವರಿನಿಂದ ತೊಯ್ದು ತೊಪ್ಪೆಯಾಗುವ ಸ್ಥಿತಿ ಹೊರಗೆ ಓಡಾಡುವ ಸಾಮಾನ್ಯ ಜನರದ್ದಾಗಿತ್ತು. ಮಾರ್ಚ್‌ನಲ್ಲೇ ಈ ಪರಿ ಸೆಖೆ ಇದ್ದರೆ ಇನ್ನು ವಿಪರೀತ ಬಿಸಿಲಿರುವ ಏಪ್ರಿಲ್‌, ಮೇ ಕಳೆಯೋದು ಹೇಗೆ ಎಂಬ ಚಿಂತೆ ಜನರಲ್ಲಿ ಪ್ರಾರಂಭವಾಗಿತ್ತು. ಆದರೆ ಅಸಾನಿ ಪ್ರಭಾವದಿಂದ 
ಈಗ ಮೇ ತಿಂಗಳಲ್ಲಿ ಉದ್ಯಾನ ನಗರಿಯ ಜನ ಚುಮು ಚುಮು ಮಳಿ ಚಳಿಯ ಸುಂದರ ವಾತಾವರಣವನ್ನು ಅನುಭವಿಸುತ್ತಿದ್ದಾರೆ.

ಮಾರ್ಚ್‌ ತಿಂಗಳ ಮೊದಲ ಒಂಬತ್ತು ದಿನ ನಗರದ ಗರಿಷ್ಠ ಉಷ್ಣತೆ(Temperature) 32 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲೇ ಇತ್ತು. ಅದೇ ರೀತಿ ಮೊದಲ 14 ದಿನದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ ಒಳಗೆ ದಾಖಲಾಗಿತ್ತು. ಮಾ.30ಕ್ಕೆ 35.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದೆ ತಿಂಗಳ ಗರಿಷ್ಠ ತಾಪಮಾನ.
 

click me!