ವಾಶ್‌ರೂಮ್‌ ಹೋಗ್ಬರ್ತಿನಿ ಎಂದು ಮಂಟಪದಿಂದ ಹೋದ ವಧು ಚಿನ್ನಾಭರಣದೊಂದಿಗೆ ಎಸ್ಕೇಪ್

By Anusha Kb  |  First Published Jan 5, 2025, 11:58 AM IST

ಮದುವೆ ಮಂಟಪದಲ್ಲಿ ವಾಶ್‌ರೂಮ್‌ಗೆ ಹೋಗಿ ಬರ್ತಿನಿ ಎಂದು ಹೇಳಿ ಹೋದ ವಧು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾಳೆ. 40 ವರ್ಷದ ರೈತ ಕಮಲೇಶ್ ಕುಮಾರ್ ಎಂಬುವವರ ಎರಡನೇ ಮದುವೆಯಲ್ಲಿ ಈ ಘಟನೆ ನಡೆದಿದ್ದು, ವಧುವಿನ ತಾಯಿಯೂ ಸಹ ನಾಪತ್ತೆಯಾಗಿದ್ದಾಳೆ.


ಲಕ್ನೋ:  ಮದುವೆ ಆಗಲು ತುದಿಗಾಲಲ್ಲಿ ನಿಂತಿರುವ ಯುವಕರನ್ನು  ವಿವಾಹಿತ ಮಹಿಳೆಯರು ವಂಚಿಸುತ್ತಿರುವ ಹಲವು ಪ್ರಕರಣಗಳು ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಹೀಗಿರುವಾಗ ವಧುವೊಬ್ಬಳ ವಾಶ್‌ರೂಮ್‌ಗೆ ಹೋಗಿ ಬರ್ತಿನಿ ಎಂದು ಹೇಳಿ ಮದುವೆ ಮಂಟಪದಿಂದ ಎದ್ದು ಹೋದವಳು, ಮರಳಿ ಬಾರದೇ ಮದುವೆ ಮುರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.  

40 ವರ್ಷದ ರೈತ ಕಮಲೇಶ್ ಕುಮಾರ್ ಎಂಬುವವರ ಪತ್ನಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಮಹಿಳೆಯೊಂದಿಗೆ 2ನೇ ಮದುವೆ ನಿಗದಿಯಾಗಿತ್ತು. ಈ ವಿವಾಹ ಸಂಬಂಧಕ್ಕಾಗಿ ವ್ಯಕ್ತಿ ವಿವಾಹ ದಲ್ಲಾಳಿಯೊಬ್ಬರಿಗೆ 30 ಸಾವಿರ ರೂಪಾಯಿಯನ್ನು ಕಮೀಷನ್ ಆಗಿ ನೀಡಿದ್ದರು. ಇದಾದ ನಂತರ ಖಜ್ನಿ ಪ್ರದೇಶಕ್ಕೆ ಸಮೀಪದಲ್ಲಿರುವ ಬಹೋರಿಯಾ ಸಮೀಪದ ಶಿವ ದೇಗುಲದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಸಂಪ್ರದಾಯಗಳು ನಡೆಯುತ್ತಿದ್ದು, ವಧುವಿಗೆ ವರನ ಕಡೆಯಿಂದ ನೀಡುವ ಸೀರೆ, ಆಭರಣ, ಮೇಕಪ್ ಐಟಂಗಳು ಹೀಗೆ ಎಲ್ಲವನ್ನೂ ಮೊದಲೇ ನೀಡಲಾಗಿತ್ತು. ಈ ನಡುವೆ ವಧು ಸಂಪ್ರದಾಯಗಳು ನಡೆಯುತ್ತಿರುವ ಸಮಯದಲ್ಲೇ ಬಾತ್‌ರೂಮ್‌ಎ ಹೋಗಿ ಬರ್ತಿನಿ ಎಂದು ಮಂಟಪದಿಂದ ಎದ್ದು ಹೋದವಳು ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ. 

Tap to resize

Latest Videos

ವರ ಕಮಲೇಶ್ ಅವರು ಸೀತಾಪುರದ ಗೋವಿಂದ್‌ಪುರ ಗ್ರಾಮದ ನಿವಾಸಿಯಾಗಿದ್ದು, ಇವರ ಮೊದಲ ಪತ್ನಿ ತೀರಿಕೊಂಡ ಹಿನ್ನೆಲೆಯಲ್ಲಿ ಅವರು 2ನೇ ಮದುವೆಯಾಗಿದ್ದರು. ಆದರೆ ಮದುವೆ ಮಧ್ಯೆಯೇ ವಧು ಎಸ್ಕೇಪ್ ಆಗಿದ್ದು, ಇತ್ತ ವಧುವೂ ಇಲ್ಲ, ಚಿನ್ನಾಭರಣ ಹಣವೂ ಇಲ್ಲ ಎಂಬಂತಾಗಿದೆ. ಈ ಮದುವೆಯ ವೆಚ್ಚವನ್ನು ವರನೇ ವಹಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ ವಧುವಿನ ಜೊತೆ ವಧುವಿನ ತಾಯಿಯೂ ಎಸ್ಕೇಪ್ ಆಗಿರುವುದರಿಂದ ಇದೊಂದು ಮೊದಲೇ ಯೋಜನೆ ರೂಪಿಸಿ ಮಾಡಿದ ವಂಚನೆ ಎಂದು ಅಂದಾಜಿಸಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ವರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ನನ್ನ ಕುಟುಂಬವನ್ನು ಮತ್ತೆ ನಿರ್ಮಾಣ ಮಾಡಬೇಕೆಂದು ಬಯಸಿದ್ದೆ, ಆದರೆ ಈ ಪ್ರಯತ್ನದಲ್ಲಿ ಎಲ್ಲವನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಎಸ್‌ಪಿ ಜಿತೇಂದ್ರ ಕುಮಾರ್ ಹೇಳಿದ್ದಾರೆ. 

click me!