ಅಜ್ಮೇರ್‌ ದರ್ಗಾಗೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಚಾದರ ಅರ್ಪಣೆ

Published : Jan 05, 2025, 08:21 AM IST
ಅಜ್ಮೇರ್‌ ದರ್ಗಾಗೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಚಾದರ ಅರ್ಪಣೆ

ಸಾರಾಂಶ

ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ‘ಉರುಸ್‌’ ಸಂದರ್ಭದಲ್ಲಿ ವಾಡಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಅಜ್ಮೇರ್ ದರ್ಗಾದಲ್ಲಿ ಚಾದರ ಅರ್ಪಿಸಿದರು.

ಜೈಪುರ (ಜ.05): ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ‘ಉರುಸ್‌’ ಸಂದರ್ಭದಲ್ಲಿ ವಾಡಿಕೆಯಂತೆ ಪ್ರಧಾನಿ ನರೇಂದ್ರ ಮೋದಿಯವರು ಅಜ್ಮೇರ್ ದರ್ಗಾದಲ್ಲಿ ಚಾದರ ಅರ್ಪಿಸಿದರು. ಪ್ರಧಾನಿ ಪರವಾಗಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಸ್ತಾಂತರಿಸಿದರು. ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಪರವಾಗಿ ಚಾದರ ಅರ್ಪಿಸಿದ್ದಾರೆ.

ಚಾದರ ಅರ್ಪಿಸಿದ ಸಂದರ್ಭದಲ್ಲಿ ಸಚಿವ ಕಿರಣ್ ರಿಜಿಜು ದರ್ಗಾದ ‘ಗರೀಬ್ ನವಾಜ್’ ಹೆಸರಿನ ವೆಬ್‌ಸೈಟ್‌ ಮತ್ತು ಉರುಸ್‌ ಕೈಪಿಡಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಮೋದಿಯ ಚಾದರದೊಂದಿಗೆ ದರ್ಗಾಗೆ ಬಂದಿದ್ದೇನೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಗೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ನಾನು ಶಾಂತಿಗಾಗಿ ಪ್ರಾರ್ಥಿಸುತ್ತೇನೆ. ಅಜ್ಮೇರ್ ದರ್ಗಾದ ಸಂದೇಶವು ಇಡೀ ಜಗತ್ತಿಗೆ ಹೋಗುತ್ತದೆ. ಚಾದರ ಪ್ರಸ್ತುತ ಅರ್ಪಿಸುವುದರ ಜೊತೆಗೆ ಮೋದಿ ಸಮಾಜ ಮತ್ತು ವಿಶ್ವಶಾಂತಿಗಾಗಿ ಒಗ್ಗೂಡಬೇಕು’ ಎಂದು ಹೇಳಿದ್ದಾರೆ ಎಂದರು.

ಪ್ರಧಾನಿ ಮೋದಿ ನೀಡಿದ ವಜ್ರ, ಜಿಲ್‌ ಬೈಡೆನ್‌ಗೆ ಸಿಕ್ಕ ದುಬಾರಿ ಗಿಫ್ಟ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪಕ್ಷದ ಪರವಾಗಿ ಅಜ್ಮೇರ್‌ ದರ್ಗಾಗೆ ಚಾದರ ಕಳುಹಿಸಿದ್ದಾರೆ. ಈ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಕಾಂಗ್ರೆಸ್‌ ಅಧ್ಯಕ್ಷನಾಗಿ, ನಮ್ಮ ಪಕ್ಷ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ದೇಶದ ಪ್ರತಿಯೊಬ್ಬ ಪ್ರಜೆಯ ಶ್ರೇಯೋಭಿವೃದ್ಧಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ’ ಎಂದರು. 

ಜನರಿಗೆ ಮನೆ ಕಟ್ಟಿಕೊಟ್ಟೆ: ದೆಹಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಆಡಳಿತಾರೂಢ ಆಮ್‌ಆದ್ಮಿ ಪಕ್ಷ ಮತ್ತು ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪ್‌ ದೆಹಲಿ ಪಾಲಿಗೆ ಆಪ್ಡಾ (ವಿನಾಶಕಾರಿ) ಎಂದು ಬಣ್ಣಿಸಿದ್ದಾರೆ. ಅಲ್ಲದೆ ತಮ್ಮ ಮನೆಯನ್ನು ಐಷಾರಾಮಿಯಾಗಿ ಪರಿವರ್ತಿಸಿಕೊಂಡ ಕೇಜ್ರಿ ವಿರುದ್ಧವೂ ವ್ಯಂಗ್ಯವಾಡಿರುವ ಮೋದಿ, ನಾನು ನನಗಾಗಿ ಗಾಜಿನ ಅರಮನೆ ಕಟ್ಟಿಕೊಳ್ಳಬಹುದಿತ್ತು, ಆದರೆ ಅದರ ಬದಲು ಜನರಿಗಾಗಿ ಮನೆ ನಿರ್ಮಿಸಿದೆ’ ಎಂದು ಹೇಳಿದ್ದಾರೆ.

₹10 ಲಕ್ಷ ಸೂಟ್‌ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಅರವಿಂದ್‌ ಕೇಜ್ರಿವಾಲ್‌

ದೆಹಲಿಯಲ್ಲಿ ದೆಹಲಿಯಲ್ಲಿ ವಸತಿ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಮೋದಿ ಆಪ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಒಂದು ಕಡೆ ಕೇಂದ್ರ ಶ್ರಮ ಪಡುತ್ತಿದ್ದರೆ, ಇನ್ನೊಂದು ಕಡೆ ದೆಹಲಿ ಸರ್ಕಾರ ಶಿಕ್ಷಣ, ಮಾಲಿನ್ಯ, ಮದ್ಯ ಹಗರಣ ಸೇರಿದಂತೆ ಎಲ್ಲಾ ವಿಷಯದಲ್ಲಿ ಭ್ರಷ್ಟಾಚಾರ ಮಾಡಿ ಸುಳ್ಳು ಹೇಳುತ್ತಿದೆ. ಆಪ್‌ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದ ಕಾರಣ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ನಿರ್ಮಿಸಿ, ಬಡವರಿಗೆ ಮನೆ ನಿರ್ಮಿಸಲು ಸಾಧ್ಯವಾಯಿತು’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?