MOTN Survey : ಬಿಜೆಪಿಯಲ್ಲಿ ಮೋದಿ ನಂತರ ಯಾರು? ಮೂಡ್ ಆಫ್ ದ ನೇಷನ್ ಸರ್ವೇಯ ಸ್ಪೆಷಲ್ ಜನಾಭಿಪ್ರಾಯ!

By Suvarna NewsFirst Published Jan 21, 2022, 12:44 PM IST
Highlights

ಮೂಡ್ ಆಫ್ ದ ನೇಷನ್ ಸಮೀಕ್ಷಯಲ್ಲಿ ಬಯಲಾದ ಜನಾಭಿಪ್ರಾಯ
ಇಂದಿಗೂ ನರೇಂದ್ರ ಮೋದಿಯೇ ಪ್ರಧಾನಿ ಸ್ಥಾನಕ್ಕೆ ಫೇವರೆಟ್
ಮೋದಿ ನಂತರ ಬಿಜೆಪಿಯ "ಫೇಸ್" ಯಾರು ಅನ್ನೋದಕ್ಕೆ ಜನ ನೀಡಿದ್ದಾರೆ ಉತ್ತರ
 

ನವದೆಹಲಿ (ಜ. 21): ಉತ್ತರ ಪ್ರದೇಶ (Uttar Pradesh) ಸೇರಿದಂತೆ ಐದು ರಾಜ್ಯಗಳಿಗೆ ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಏಳು ಹಂತದ ಚುನಾವಣೆಗೆ ದೇಶ ಸಿದ್ಧವಾಗುತ್ತಿದೆ. ಈ ನಡುವೆ ಇಂಡಿಯಾ ಟುಡೇ ನಡೆಸಿದ ಮೂಡ್ ಆಫ್ ದ ನೇಷನ್ (MOTN) ಸಮೀಕ್ಷೆಯಲ್ಲಿ ದೇಶದ ಜನರ ಒಡಲಾಳ ತಿಳಿದುಬಂದಿದೆ. ಮುಂದಿನ ಬಾರಿಯೂ ನರೇಂದ್ರ ಮೋದಿ (Narendra Modi) ಅವರೇ ದೇಶದ ಪ್ರಧಾನಿ ಆಗ್ತಾರೆ ಎನ್ನುವ ವಿಶ್ವಾಸ ಎಷ್ಟು ಜನರಲ್ಲಿದೆ? ರಾಹುಲ್ ಗಾಂಧಿ (Rahul Gandhi) ಪರವಾಗಿ ಇರುವ ಜನಾಭಿಪ್ರಾಯವೆಷ್ಟು? ಎನ್ ಡಿಎ (NDA) ಸರ್ಕಾರದ ಮೂರು ಪ್ರಮುಖ ವೈಫಲ್ಯಗಳು ಯಾವುದು?  ಮೋದಿ ನಂತರ ಬಿಜೆಪಿಯಲ್ಲಿ "ಫೇಸ್" ಯಾರು? ಎನ್ನುವ ವಿವಿಧ ಪ್ರಶ್ನೆಗಳನ್ನು ಇಟ್ಟು ಸಮೀಕ್ಷೆ ನಡೆಸಲಾಗಿದ್ದು, ಅದರ ವಿವರ ಇಲ್ಲಿದೆ. ವಿಶೇಷವೆಂದರೆ, ದೇಶದ ಶೇ. 59ರಷ್ಟು ಮಂದಿ ಪ್ರಸ್ತುತ ಮೋದಿ ಸರ್ಕಾರದ ಕೆಲಸಗಳಿಗೆ ತೃಪ್ತಿ ಹೊಂದಿದ್ದರೆ, ರಾಮಮಂದಿರ ಹಾಗೂ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ವಿಚಾರಗಳು ಸರ್ಕಾರದ ದೊಡ್ಡ ಸಾಧನೆಯೇನಲ್ಲ ಎಂದು ಜನಾಭಿಪ್ರಾಯಗಳು ಬಂದಿವೆ.

ಮೋದಿ ಸರ್ಕಾರದ ಕೆಲಸದಿಂದ ತೃಪ್ತಿಯಾಗಿದೆಯೇ?: ಈ ಪ್ರಶ್ನೆಗೆ ಶೇ. 59ರಷ್ಟು ಮಂದಿ ಮೋದಿ ಸರ್ಕಾರದ ಕೆಲಸದಿಂದ ತೃಪ್ತಿಯಾಗಿದೆ ಎಂದು ತಿಳಿಸಿದ್ದು, ಶೇ. 26 ರಷ್ಟು ಮಂದಿ ಸರ್ಕಾರದ ಕೆಲಸದಿಂದ ತೃಪ್ತಿಯಿಲ್ಲ ಎಂದಿದ್ದಾರೆ. ಇನ್ನು ವೈಯಕ್ತಿಕವಾಗಿ ಶೇ. 63ರಷ್ಟು ಮಂದಿ ಮೋದಿ ಕೆಲಸವನ್ನು ಶ್ಲಾಘಿಸಿದ್ದರೆ, ಶೇ. 15ರಷ್ಟು ಜನ ಸರಾಸರಿ ಹಾಗೂ ಶೇ. 21ರಷ್ಟು ಮಂದಿ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಪ್ರಧಾನಿ ಯಾರಾಗ್ತಾರೆ?: ಮುಂದಿನ ಪ್ರಧಾನಿ ಯಾರಾಗಬಹುದು ಎನ್ನುವ ಪ್ರಶ್ನೆಗೆ ಶೇ. 52.5 ಮಂದಿ ಪ್ರಧಾನಿ ಮೋದಿಯ ಹೆಸರನ್ನು ಹೇಳಿದ್ದಾರೆ. ಕೇವಲ ಶೇ. 6.8 ರಷ್ಟು ಮಂದಿ ಮಾತ್ರವೇ ರಾಹುಲ್ ಗಾಂಧಿ ಪ್ರಧಾನಿ ಆಗಬಹುದು ಎಂದು ತಿಳಿಸಿದ್ದರೆ, ಶೇ. 5.7ರಷ್ಟು ಮಂದಿ ಯೋಗಿ ಆದಿತ್ಯನಾಥ್(Yogi Adityanath)  ಮುಂದಿನ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ. ಇನ್ನು ಅಮಿತ್ ಷಾ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪರವಾಗಿ .3.5% ಹಾಗೂ 3.3% ಮಂದಿ ಒಲವು ತೋರಿದ್ದಾರೆ.

ಪಂಚರಾಜ್ಯ ಚುನಾವಣೆಗಳಲ್ಲಿ ಮೋದಿ ಎಷ್ಟು ಪ್ರಖ್ಯಾತರು: ಇನ್ನು ಪಂಚ ರಾಜ್ಯ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಶೇ. 75 ರಷ್ಟು ಮಂದಿ ಮೋದಿ ಕೆಲಸದಿಂದ ತೃಪ್ತರಾಗಿದ್ದಾರೆ. ಮಣಿಪುರ (ಶೇ. 73), ಗೋವಾ (ಶೇ. 67), ಉತ್ತರಾಖಂಡ (ಶೇ. 59) ನಂತರದ ಸ್ಥಾನಗಳಲ್ಲಿದ್ದರೆ, ಪಂಜಾಬ್ ನಲ್ಲಿ ಅತ್ಯಂತ ಕನಿಷ್ಠ ಶೇ. 37ರಷ್ಟು ಮಂದಿ ಮಾತ್ರವೇ ಮೋದಿ ಕೆಲಸಕ್ಕೆ ಭೇಷ್ ಎಂದಿದ್ದಾರೆ.

ರಾಮಮಂದಿರ, 370ನೇ ವಿಧಿ ರದ್ದು ಸಾಧನೆಯಲ್ಲ: ದಶಕಗಳ ಕಾಲ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ನಿರ್ಮಾಣವಾಗುತ್ತಿದೆ. ಅದರೊಂದಿಗೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿವಾದಿತ 370ನೇ ವಿಧಿಯ ವಿಶೇಷ ಸ್ಥಾನಮಾನವನ್ನೂ ರದ್ದು ಮಾಡಲಾಗಿದೆ. ಆದರೆ, ದೇಶದ ಜನತೆ ಇದನ್ನು ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಪರಿಗಣನೆ ಮಾಡಿಲ್ಲ. ಕೇವಲ ಶೇ. 15.7ರಷ್ಟು ಮಂದಿ ರಾಮಮಂದಿರ ನಿರ್ಮಾಣವನ್ನು ದೊಡ್ಡ ಸಾಧನೆ ಎಂದಿ ಹೇಳಿದ್ದರೆ, ಕೇವಲ 12% ನಷ್ಟು ಮಂದಿ 370ನೇ ವಿಧಿ ರದ್ದತಿ ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದಿದ್ದಾರೆ.

ಮೋದಿ ಸರ್ಕಾರದ ವೈಫಲ್ಯಗಳು: ಹಣದುಬ್ಬರ, ನಿರುದ್ಯೋಗ ಹಾಗೂ ರೈತ ವಿರೋಧಿ ನೀತಿಯನ್ನು ಮೋದಿ ಸರ್ಕಾರದ ಮೂರು ವೈಫಲ್ಯಗಳು ಎಂದು ಹೇಳಲಾಗಿದೆ. ಶೇ. 25 ರಷ್ಟು ಮಂದಿ ಹಣದುಬ್ಬರಕ್ಕೆ ಮತ ಚಲಾಯಿಸಿದ್ದರೆ, ಶೇ. 14 ಹಾಗೂ ಶೇ.10ರಷ್ಟು ಮತಗಳು ಕ್ರಮವಾಗಿ ನಿರುದ್ಯೋಗ ಹಾಗೂ ರೈತ ವಿರೋಧಿ ನೀತಿಗಳಿಗೆ ಬಂದಿವೆ.

Republic Day: ಇತಿಹಾಸ, ಪ್ರಾಮುಖ್ಯತೆ ಏನು? ಆಚರಣೆ ಯಾಕೆ ಮಾಡುತ್ತಾರೆ?
ಅತ್ಯಂತ ಪ್ರಖ್ಯಾತ ಮುಖ್ಯಮಂತ್ರಿ ಯಾರು: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಅವರಿಗೆ ಶೇ. 71ರಷ್ಟು ಮತಗಳು ಬಂದಿವೆ. ಶೇ. 69.9ರಷ್ಟು ಮತಗಳೊಂದಿಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ 2ನೇ ಸ್ಥಾನದಲ್ಲಿದ್ದರೆ, ಶೇ. 67.5ರಷ್ಟು ಮತದೊಂದಿಗೆ ತಮಿಳುನಾಡಿನ ಎಂಕೆ ಸ್ಟ್ಯಾಲಿನ್ 3ನೇ ಸ್ಥಾನದಲ್ಲಿದ್ದಾರೆ.

ಬಿಜೆಪಿಯ ಪ್ರಖ್ಯಾತ ಮುಖ್ಯಮಂತ್ರಿ ಯಾರು: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಅವರಿಗೆ ಶೇ. 56.6ರಷ್ಟು ಮತಗಳು ಬಿದ್ದಿದ್ದರೆ, ಗುಜರಾತ್, ಉತ್ತಾರಖಂಡ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿಗಳು ಶೇ. 30 ರಿಂದ ಶೇ. 40ರ ಮತ ಪಡೆದುಕೊಂಡಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಅತ್ಯಂತ ಕಡಿಮೆ ಶೇ. 27.2ರಷ್ಟು ಮತಗಳು ಬಂದಿವೆ.

Amar Jawan Jyoti : ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನವಾಗಲಿದೆ ಅಮರ್ ಜವಾನ್ ಜ್ಯೋತಿ!​​​​​​​
ಮೋದಿ ನಂತರ ಬಿಜೆಪಿಯ ಮುಖ ಯಾರು: ಮೋದಿ ನಂತರ ಗೃಹ ಸಚಿವ ಅಮಿತ್ ಷಾ ಬಿಜೆಪಿಯ ಅಗ್ರ ನಾಯಕ ಎಂದು ಹೇಳಿದ್ದಾರೆ. ಶೇ. 24ರಷ್ಟು ಮತಗಳು ಅವರಿಗೆ ಬಂದಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಶೇ. 23ರಷ್ಟು ಮತಗಳು ಬಂದಿದ್ದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಶೇ. 11 ರಷ್ಟು ಮತಗಳು ಬಂದಿವೆ.

click me!