ಬಿಜೆಪಿ ಬೆಂಬಲಿಸಿದ ಬ್ರಾಹ್ಮಣರು ಮುಸ್ಲಿಮರ ಬೆಂಬಲ ಕಳೆದುಕೊಂಡಿದ್ದಾರೆ, ಪ್ರಶಾಂತ್ ಕಿಶೋರ್ ವಿವಾದ

Published : Nov 09, 2026, 07:36 PM IST
prashant kishore

ಸಾರಾಂಶ

ಚುನಾವಣಾ ತಂತ್ರಗಾರನಿಂದ ಜನ ಸುರಾಜ್ ಪಾರ್ಟಿ ಸಂಸ್ಥಾಪಕನಾದ ಪ್ರಶಾಂತ್ ಕಿಶೋರ್ ವಿವಾದಿತ ಹೇಳಿಕೆ ನೀಡಿದ್ದಾರೆ. ಬ್ರಾಹ್ಮಣರು ಬಿಜೆಪಿಗೆ ಬೆಂಬಲ ನೀಡಿದ ಕಾರಣ ಮುಸ್ಲಿಮರ ಬೆಂಬಲ, ಸೌಹಾರ್ಧತೆ ಕಳೆದುಕೊಂಡಿದ್ದಾರೆ ಎಂಬ ವಿವಾದ ಸೃಷ್ಟಿಸಿದ್ದಾರೆ.

ಪಾಟ್ನಾ (ನ.09) ಜನ ಸುರಾಜ್ ರಾಜಕೀಯ ಪಾರ್ಟಿ ಆರಂಭಿಸಿ ಹೊಸ ಇತಿಹಾಸ ಬರೆದಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇದೀಗ ವಿವಾದಗ ಸುಳಿಯಲ್ಲಿ ಸಿಲುಕಿದ್ದಾರೆ. ಬ್ರಾಹ್ಮಣ ಸಮುದಾಯ, ಮುಸ್ಲಿಂ ಸೇರಿದಂತೆ ಸಮುದಾಯಗಳನ್ನು ಎಳೆದು ತಂದು ರಾಜಕೀಯ ಕೋಲಾಹಲ ಮಾತ್ರವಲ್ಲ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬಿಹಾರದ ಮಿಥಿಲಾಂಚಲ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಶಾಂತ್ ಕಿಶೋರ್, ಬ್ರಾಹ್ಮಣ ಸಮುದಾಯ ಗುರಿಯಾಸಿ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.

ಮುಸ್ಲಿಮರ ಬೆಂಬಲ ಕಳೆದುಕೊಂಡಿದ್ದಾರೆ

ಮಿಥಿಲಾ ಪ್ರದೇಶದ ಬ್ರಾಹ್ಮಣರು ಬಿಜೆಪಿ ಬೆಂಬಲಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಮಿಥಿಲಾಂಚಲ ಬ್ರಾಹ್ಮಣರು ಬಿಜೆಪಿ ಬೆಂಬಲಿಸಿದ್ದಾರೆ. ಪರಿಣಾಮ ಏನಾಯಿತು? ಮಿಥಾಲಂಚಲ ಬ್ರಾಹ್ಮಣರು ಸ್ಥಳೀಯ ಮುಸ್ಲಿಮರ ಬೆಂಬಲ ಕಳೆದುಕೊಂಡಿದ್ದಾರೆ. ಹಿಂದೂ ಮುಸ್ಲಿಮ್ ಸೌಹಾರ್ಧತೆ ಇಲ್ಲವಾಗಿದೆ. ಜೊತೆಗೆ ಮಿಥಿಲಾ ಪ್ರದೇಶದಲ್ಲಿ ಅಭಿವೃದ್ಧಿಯೂ ಇಲ್ಲವಾಗಿದೆ ಎಂದು ಪ್ರಶಾಂಕ್ ಕಿಶೋರ್ ಹೇಳಿದ್ದಾರೆ. ಮಿಥಿಲಾ ಪ್ರದೇಶದ ಜನರು ರಾಜಕೀಯ ಆಯ್ಕೆಯನ್ನು ಮರು ಆಲೋಚಿಸಬೇಕು, ಬದಲಿಸಬೇಕು ಎಂದಿದ್ದಾರೆ. ಈ ಮೂಲಕ ಬ್ರಾಹ್ಮರು ಬಿಜೆಪಿ ಬೆಂಬಲ ನೀಡುವುದು ಬಿಟ್ಟು ಜನ ಸುರಾಜ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಮುಸ್ಲಿಮರ ಆಯ್ಕೆಗೆ ವಿರುದ್ಧವಾಗಿ ಬ್ರಾಹ್ಮಣರ ನಡೆ ಎಂದ ಕಿಶೋರ್

ಮಿಥಿಲಾಂಚಲದಲ್ಲಿ ಹಿಂದೂ, ಮುಸ್ಲಿಮರ ಸೌಹಾರ್ಧಯುತವಾಗಿ ಕಳೆಯುತ್ತಿದ್ದರು. ಆದರೆ ಬ್ರಾಹ್ಮಣರು ಬಿಜೆಪಿ ಬೆಂಬಲಿಸುವ ಮೂಲಕ ಮುಸ್ಲಿಮರ ಬೆಂಬಲ ಕಳೆದುಕೊಂಡಿದ್ದೀರಿ. ಇದು ನೀವು ಮಾಡಿದ ರಾಜಕೀಯ ತಪ್ಪು ಮಾತ್ರವಲ್ಲ, ಇಡೀ ಪ್ರದೇಶದ ಶಾಂತಿಗೂ ಭಂಗವಾಗಿದೆ ಎಂದು ಪ್ರಶಾಂತ್ ಕಿಶೋರ್ ಭಾರಿ ವಿವಾದ ಸೃಷ್ಟಿಸಿದ್ದಾರೆ. ಈ ಮೂಲಕ ಮುಸ್ಲಿಮರ ನಿರ್ಧಾರ, ಆಯ್ಕೆಗೆ ವಿರುದ್ಧವಾಗಿ ಬ್ರಾಹ್ಮಣರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಮುಸ್ಲಿಮರ ಪ್ರೀತಿಗೆ ಪಾತ್ರರಾಗಲು, ಮುಸ್ಲಿಮರ ಜೊತೆ ಸೌಹಾರ್ಧಯುತಕ್ಕಾಗಿ ಬ್ರಾಹ್ಮರು ತಮ್ಮ ರಾಜಕೀಯ ಆಯ್ಕೆಗಳನ್ನು ಬದಿಗೊತ್ತಬೇಕು, ಮುಸ್ಲಿಮರು ನಿರ್ಧಾರಕ್ಕೆ ಬೆಂಬಲ ನೀಡಬೇಕಿತ್ತು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಬ್ರಾಹ್ಮಣ ಸಂಸದರು, ಶಾಸಕರಿಂದ ಸಮುದಾಯಕ್ಕೇನು ಲಾಭ

ಮಿಥಿಲಾಂಚಲ ಪ್ರದೇಶದ ಬ್ರಾಹ್ಮಣರು ತಮ್ಮದೇ ಸಮುದಾಯದ ಬಾಹ್ಮಣ ಸಂಸದ, ಶಾಸಕರನ್ನು ಆರಿಸಿ ಕಳುಹಿಸಿದ್ದಾರೆ. ಇದರಿಂದ ಪ್ರಯೋಜನವೇನು, ಮಿಥಿಲಂಚಾಲ ಪ್ರದೇಶದಲ್ಲಿ ಯಾವ ಅಭಿವೃದ್ಧಿಯಾಗಿದೆ. ನಿಮ್ಮ ಸಮುದಾಯ, ಜಾತಿ, ಧರ್ಮಗಳ ನಾಯಕರ ಗೆಲ್ಲಿಸಿದರ ಇಲ್ಲಿನ ಜನರಿಗೆ ಯಾವ ಲಾಭವಾಗಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಧರ್ಮ ಹಾಗೂ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಪಕ್ಷಗಳನ್ನು, ನಾಯಕರನ್ನು ನಂಬಬೇಡಿ ಎಂದು ಪ್ರಶಾಂಕ್ ಕಿಶೋರ್ ಸಲಹೆ ನೀಡಿದ್ದಾರೆ. ಸಾಂಪ್ರದಾಯಿಕ ರಾಜಕೀಯ ಆಯ್ಕೆಗಳಿಂದ ದೂರವಿರಿ, ಹೊಸದಾಗಿ ಆಲೋಚಿಸಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಹೇಳಿಕೆ ಇದೀಗ ಕೋಲಾಹಲಕ್ಕೆ ಕಾರಣಾಗಿದೆ. ಬಿಜೆಪಿ ನಾಯಕರು ಗರಂ ಆಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ; ಅರ್ನಬ್, ಮುರುಸು ಸೈಕ್ಲೋನ್ ಎಫೆಕ್ಟ್ ಬೆನ್ನಲ್ಲೇ ಬಿಗ್ ಅಲರ್ಟ್!
ಭಾರತೀಯ ರೈಲು ಬೋಗಿಗಳ ಜೀವಿತಾವಧಿ ಎಷ್ಟು? ಸೇವೆಯಿಂದ ನಿವೃತ್ತಿಯಾದ ಮೇಲೆ ಅವುಗಳನ್ನು ಏನು ಮಾಡ್ತಾರೆ ಗೊತ್ತಾ?