
ಗುವಾಹಟಿ (ಫೆ.15): ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗಲೇ, ಪ್ರಧಾನಿ ನರೇಂದ್ರ ಮೋದಿಯವರು 3,030 ಕೋಟಿ ರು. ವೆಚ್ಚದಲ್ಲಿ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಿಸಲಾದ ಅತ್ಯಾಧುನಿಕ ಸೇತುವೆ ಸೇರಿ ವಿವಿಧ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿದ್ದಾರೆ.
ಇದು ಈಶಾನ್ಯ ಭಾರತದ ಮೊದಲ ಎಕ್‌ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಸೇತುವೆ ಎಂಬ ಖ್ಯಾತಿ ಪಡೆದಿದೆ.ಗುವಾಹಟಿಯಿಂದ ಉತ್ತರ ಗುವಾಹಟಿಯನ್ನು ಸಂಪರ್ಕಿಸುವ ‘ಕುಮಾರ ಭಾಸ್ಕರ ವರ್ಮ ಸೇತು’ 6 ಪಥದ ಬೃಹತ್ ಸೇತುವೆಯಾಗಿದ್ದು, ಗುವಾಹಟಿ ನಗರ ಮತ್ತು ಉತ್ತರ ಗುವಾಹಟಿ ಸಂಚಾರ ಸಮಯವನ್ನು 7 ನಿಮಿಷಕ್ಕೆ ಇಳಿಕೆ ಮಾಡಲಿದೆ. ಇದುವರೆಗೆ ಸರೈಘಾಟ್ ಸೇತುವೆ ಮೂಲಕ ಸಂಚರಿಸಲು 30 ನಿಮಿಷ ಬೇಕಾಗಿತ್ತು.
ಏನಿದು ಪಿಎಸ್‌ಸಿ ಸೇತುವೆ?
ಎಕ್‌ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್‌ಸಿ) ಎಂದರೆ ಒಳಗೆ ಟೊಳ್ಳಾಗಿರುವ, ಪೆಟ್ಟಿಗೆ ಆಕಾರದಲ್ಲಿರುವ ಕಾಂಕ್ರೀಟ್ ಮತ್ತು ಕೇಬಲ್ ಸಂಪರ್ಕವನ್ನು ಹೊಂದಿರುವ ಅತ್ಯಾಧುನಿಕ ಸೇತುವೆ.ಈ ಪ್ರದೇಶದ ಹೆಚ್ಚಿನ ಭೂಕಂಪನವನ್ನು ಪರಿಗಣಿಸಿ, ಸೇತುವೆಯ ಮೇಲೆ ಬೇರಿಂಗ್‌ಗಳನ್ನು ಬಳಸಿಕೊಂಡು ಬೇಸ್ ಐಸೊಲೇಷನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಭೂಕಂಪನ ರಕ್ಷಣಾ ವಿಧಾನವಾಗಿದ್ದು, ಬೇರಿಂಗ್‌ಗಳು ಅಥವಾ ಪ್ಯಾಡ್‌ಗಳ ಮೂಲಕ ಸೇತುವೆಯನ್ನು ಅಡಿಪಾಯಕ್ಕೆ ಜೋಡಿಸಲಾಗುತ್ತದೆ. ಇದು ಭೂಮಿ ಕಂಪಿಸಿದಾಗಲೂ ಸೇತುವೆ ಸ್ಥಿರವಾಗಿರಲು ಅನುವು ಮಾಡಿಕೊಡುತ್ತದೆ. ಜೊತೆಗೆ ಆರಂಭಿಕ ಹಾನಿ ಪತ್ತೆ, ಸೇತುವೆಯ ಹೆಚ್ಚುವರಿ ಸುರಕ್ಷತೆ ಮತ್ತು ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ