Harshvardhan Sapkal: ಶಿವಾಜಿ ರೀತಿ ಟಿಪ್ಪು ಶೌರ್ಯದ ಸಂಕೇತ: ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ

Kannadaprabha News, Ravi Janekal |   | Kannada Prabha
Published : Feb 15, 2026, 04:32 AM IST
Tipu Sultan is a Symbol of Valor Like Shivaji Maharashtra Congress Chief

ಸಾರಾಂಶ

ಛತ್ರಪತಿ ಶಿವಾಜಿ ಮಹಾರಾಜರಂತೆ ಟಿಪ್ಪು ಸುಲ್ತಾನ್ ಕೂಡ ಬ್ರಿಟಿಷರ ವಿರುದ್ಧ ಹೋರಾಡಿದ ಯೋಧ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ಹರ್ಷವರ್ಧನ್‌ ಸಪ್ಕಾಲ್‌ ಹೇಳಿದ್ದಾರೆ. ಈ  ಸಿಎಂ ದೇವೇಂದ್ರ ಫಡ್ನವೀಸ್, ಟಿಪ್ಪು ಸಾವಿರಾರು ಹಿಂದೂಗಳನ್ನು ಕೊಂದವನು, ಈ ಹೋಲಿಕೆಯನ್ನು ಸಹಿಸಲ್ ಎಂದು ತಿರುಗೇಟು

ನಾಗ್ಪುರ (ಫೆ.15): ‘ಛತ್ರಪತಿ ಶಿವಾಜಿ ಮಹಾರಾಜರ ದಾರಿಯಲ್ಲೇ ಟಿಪ್ಪು ಸುಲ್ತಾನರೂ ನಡೆದಿದ್ದಾರೆ. ಟಿಪ್ಪುವನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಕಾಣಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ಹರ್ಷವರ್ಧನ್‌ ಸಪ್ಕಾಲ್‌ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಸಿಎಂ ದೇವೇಂದ್ರ ಫಡ್ನವೀಸ್‌ ಕಿಡಿಕಾರಿದ್ದಾರೆ.

ಟಿಪ್ಪು ಸುಲ್ತಾನ್ ಒಬ್ಬ ಯೋಧ

‘ಟಿಪ್ಪು ಸುಲ್ತಾನ್ ಒಬ್ಬ ಯೋಧ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವನ್ನು ತೋರಿಸಿದವನು. ಮಣ್ಣಿನ ಮಗ. ಅವನೆಂದೂ ವಿಷಕಾರಿ, ವಿನಾಶಕಾರಿ ವಿಚಾರಗಳನ್ನು ಸ್ವೀಕರಿಸಲಿಲ್ಲ. ಶೌರ್ಯದ ಸಂಕೇತವಾಗಿ, ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮಾನವಾಗಿ ನೋಡಬೇಕು’ ಎಂದು ಸಪ್ಕಾಲ್‌ ಹೇಳಿದ್ದಾರೆ.

ಇದನ್ನೂ ಓದಿ: Telangana: ಹಂಚಿದ್ದ ಕುಕ್ಕರ್, ಹಣ ಮರಳಿ ಕೇಳಿದ ಸೋತ 'ಕೈ' ಅಭ್ಯರ್ಥಿ; ಕೇಳದೇ ಕೊಟ್ಟಿದ್ದು ಮರಳಿಸೋಲ್ಲ ಎಂದ ಮತದಾರರು!

ಹೋಲಿಕೆಯನ್ನ ಸಹಿಸೋಲ್ಲ: ಸಿಎಂ

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸಿ ಜನರನ್ನು ಮೊಘಲ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. ಮತ್ತೊಂದೆಡೆ, ಟಿಪ್ಪು ಸಾವಿರಾರು ಹಿಂದೂಗಳನ್ನು ಕೊಂದ. ನಾವು ಈ ಹೋಲಿಕೆಯನ್ನು ಸಹಿಸುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Telangana: ಹಂಚಿದ್ದ ಕುಕ್ಕರ್, ಹಣ ಮರಳಿ ಕೇಳಿದ ಸೋತ 'ಕೈ' ಅಭ್ಯರ್ಥಿ; ಕೇಳದೇ ಕೊಟ್ಟಿದ್ದು ಮರಳಿಸೋಲ್ಲ ಎಂದ ಮತದಾರರು!
ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ!